Akhand-2 
ದೇಶ

ಇಂದು ಬಿಡುಗಡೆಯಾಗಬೇಕಿದ್ದ ಅಖಂಡ-2 ದಿಢೀರ್​ ರದ್ದು! ಬಾಲಯ್ಯ ಸಿನಿಮಾ ಮುಂದೂಡಲು ಕಾರಣ ಏನು?

ಪ್ರಮುಖ ಮುಖ್ಯಾಂಶಗಳು

  • ಟಾಲಿವುಡ್​ ಸ್ಟಾರ್​ ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ಅಖಂಡ-2
  • ದಿಢೀರ್​ ರದ್ದತಿಗೆ ಕಾರಣ ಏನು? ನಿರ್ಮಾಪಕರು ಹೇಳಿದ್ದೇನು..?
ಹೈದರಾಬಾದ್​: ಟಾಲಿವುಡ್​ ಸ್ಟಾರ್ ನಟ​ ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ಅಖಂಡ-2 ಇದೇ ಡಿಸೆಂಬರ್​ 5ರಂದು (ಇಂದು) ಬಿಡುಗಡೆಯಾಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳು ನೀಡಿ ಇದೀಗ ಏಕಾಏಕಿ ಮುಂದೂಡಲಾಗಿದೆ.
ಗುರುವಾರ ರಾತ್ರಿಯಿಂದಲೇ ಪ್ರೀಮಿಯರ್ ಶೋಗಳು ಆರಂಭವಾಗಬೇಕಿತ್ತು. ಆದರೆ ಪ್ರೀಮಿಯರ್ ಶೋಗಳು ರದ್ದಾಗಿವೆ. ಆದರೆ, ಯಾವುದೇ ಹೊಸ ದಿನಾಂಕವನ್ನು ಘೋಷಿಸಿಲ್ಲ. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸುವುದಾಗಿ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ದಿಢೀರ್​ ರದ್ದತಿಗೆ ಕಾರಣ ಏನು?

ತಾಂತ್ರಿಕ ಕಾರಣಗಳನ್ನು ನೀಡಿ ಪ್ರೀಮಿಯರ್ ಶೋ ರದ್ದಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಆದರೆ, ಇದಕ್ಕೆ ಅಸಲಿ ಕಾರಣಗಳೇ ಬೇರೆ ಇವೆ ಎಂದು ವರದಿ ಉಲ್ಲೇಖಿಸಿವೆ.
ಅಖಂಡ 2 ಚಿತ್ರವನ್ನು ನಿರ್ಮಿಸಿದ 14 ರೀಲ್ಸ್ ಪ್ಲಸ್ ಸಂಸ್ಥೆಯು ತಮಗೆ 28 ​​ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಆ ಹಣವನ್ನು ಪಾವತಿಸಬಾರದು ಎಂದು ಆರೋಪಿಸಿ ಬಾಲಿವುಡ್ ನಿರ್ಮಾಣ ಸಂಸ್ಥೆ ಎರೋಸ್ ಇಂಟರ್ನ್ಯಾಷನಲ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಗುರುವಾರ ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತು. ಎರಡೂ ಕಡೆಯ ವಾದಗಳನ್ನು ಆಲಿಸಿದ ಪೀಠವು, ಸಮಸ್ಯೆ ಬಗೆಹರಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿತದೆ. ಈ ಕಾರಣದಿಂದಾಗಿ, ಅನಿವಾರ್ಯ ಸಂದರ್ಭಗಳಲ್ಲಿ ಚಿತ್ರವನ್ನು ಮುಂದೂಡಬೇಕಾಗಿದೆ.

ನಿರ್ಮಾಪಕರು ಹೇಳಿದ್ದೇನು..?

ಅನಿವಾರ್ಯ ಸಂದರ್ಭಗಳಿಂದಾಗಿ ಅಖಂಡ-2 ನಿಗದಿತ ಸಮಯಕ್ಕೆ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಲು ಭಾರವಾದ ಹೃದಯದಿಂದ ವಿಷಾದಿಸುತ್ತೇವೆ. ಇದು ನಮಗೆ ನೋವಿನ ಕ್ಷಣ, ಮತ್ತು ಚಿತ್ರಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಅಭಿಮಾನಿ ಮತ್ತು ಚಲನಚಿತ್ರ ಅಭಿಮಾನಿಗಳಿಗೆ ಇದು ತರುವ ನಿರಾಶೆಯನ್ನು ನಾವು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇವೆ. ಈ ವಿಷಯವನ್ನು ಆದಷ್ಟು ಬೇಗ ಪರಿಹರಿಸಲು ನಾವು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದೇವೆ. ಉಂಟಾದ ಅನಾನುಕೂಲತೆಗಾಗಿ ನಮ್ಮ ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ ಎಂದು ಚಿತ್ರನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ,(ಏಜೆನ್ಸೀಸ್​).