Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್  
ದೇಶ

ಬಾರಾಮತಿಯತ್ತ ತೆರಳಿದ್ದ ಅಜಿತ್​ ತಲುಪಿದ್ದು ಬಾರದೂರನ್ನು; ಸಾವಿಗೂ ಮುನ್ನ ಸಾಧಕರನ್ನು ಸ್ಮರಿಸಿದ್ದ ದಾದಾ | Ajit Pawar

ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್​​ರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಬುಧವಾರ ಬಾರಾಮತಿಯಲ್ಲಿ ಪತನಗೊಂಡಿದೆ. ಮುಂಬೈನಿಂದ ಹೊರಟಿದ್ದ ವಿಶೇಷ ವಿಮಾನವು ತಾಂತ್ರಿಕ ದೋಷದಿಂದ ಪತನಗೊಂಡಿದ್ದು, ಅಜಿತ್​ ಸೇರಿದಂತೆ ವಿಮಾನದಲ್ಲಿದ್ದ ಐವರು ಮೃತಪಟ್ಟಿದ್ದಾರೆ.
ವಿಮಾನವು ಬೆಳಿಗ್ಗೆ 8.10 ಕ್ಕೆ ಮುಂಬೈನಿಂದ ಹೊರಟು ಬೆಳಿಗ್ಗೆ 8.45 ರ ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಯಿತು ಎಂದು ಫ್ಲೈಟ್ ರಾಡಾರ್ ತಿಳಿಸಿದ್ದಾರೆ. ದುರಂತಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್​ರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುವ ಟ್ವೀಟೊಂದನ್ನು ಪವಾರ್ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಅಜಿತ್ ಪವಾರ್ ಕೊನೆಯ ಟ್ವೀಟ್

ಈ ಜನ್ಮ ದಿನಾಚರಣೆಯಂದು, ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸ್ವರಾಜ್ಯದ ಘೋಷಣೆಕಾರ ಮತ್ತು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಜಿ ಅವರಿಗೆ ವಿನಮ್ರ ನಮನಗಳು! ಅವರ ದೇಶಭಕ್ತಿ ನಮಗೆ ಸದಾ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದರು. ಲಜಪತ್ ರಾಯ್ 1865 ರ ಜನವರಿ 28 ರಂದು ಜನಿಸಿದರು.

ಬಾರಾಮತಿಯತ್ತ ಪಯಣ

ಫೆಬ್ರವರಿ 5 ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 8.50 ಕ್ಕೆ ಅಪಘಾತಕ್ಕೀಡಾದಾಗ ವಿಮಾನದಲ್ಲಿ ಐದು ಜನರಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೆಟ್ಟಿಗರ ಹೇಳಿದ್ದೇನು.?

ಅಜಿತ್​ ಪವಾರ್​ ನಿಧನದ ಸುದ್ದಿ ತಿಳಿದ ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದು, 48 ನಿಮಿಷಗಳ ಹಿಂದೆ, ನೀವು ಈ ಪೋಸ್ಟ್ ಟ್ವೀಟ್ ಮಾಡಿದ್ದೀರಿ, ಮತ್ತು ಈಗ ನೀವು ಇಲ್ಲ. ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಆರ್​​ಐಪಿ ಸರ್, ಓಂ ಶಾಂತಿ. ಎಂದರೆ. ಮತ್ತೊಬ್ಬರು, "ಸರ್, ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಎಂದು ಬರೆದಿದ್ದಾರೆ.
ಲಿಯರ್‌ಜೆಟ್ 45 (LJ45) ಬೊಂಬಾರ್ಡಿಯರ್ ವಿಮಾನವನ್ನು ಏರೋಸ್ಪೇಸ್‌ನ ಲಿಯರ್‌ಜೆಟ್ ವಿಭಾಗವು ತಯಾರಿಸಿದ್ದು, ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುವಾಗ ವಿಮಾನವು ರನ್‌ವೇಯಿಂದ ಹೊರಟು ಬೆಂಕಿಗೆ ಆಹುತಿಯಾಯಿತು(ಏಜೆನ್ಸೀಸ್​​).