Airport Chaos ಚಿತ್ರ Instagram 
ದೇಶ

ವಿಮಾನ ನಿಲ್ದಾಣದ ಲಗೇಜ್ ಕೌಂಟರ್‌ನಲ್ಲಿ ರಾದ್ಧಾಂತ; ನಮ್ಮ ಭಾರತೀಯರಿಗೆ ಏನಾಗಿದೆ? ಎಂದ ಪ್ರಯಾಣಿಕ! ವಿಡಿಯೋ ವೈರಲ್​...Airport Chaos

Airport Chaos: ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ವಿಮಾನ ವಿಳಂಬವಾಗುವುದು ಅಥವಾ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದು ಪ್ರಯಾಣಿಕರಲ್ಲಿ ಹತಾಶೆ ಮೂಡಿಸುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಭಾರತೀಯ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಲಗೇಜ್ ಕನ್ವೇಯರ್ ಬೆಲ್ಟ್ ಬಳಿ ಕಂಡುಬರುವ ಅವ್ಯವಸ್ಥೆ ಮತ್ತು ಪ್ರಯಾಣಿಕರ ಅತಿರೇಕದ ನಡವಳಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದು, ಭಾರತೀಯರ ನಾಗರಿಕ ಪ್ರಜ್ಞೆ ಮತ್ತು ವಿಮಾನ ನಿಲ್ದಾಣದ ಶಿಷ್ಟಾಚಾರದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಘಟನೆ ಏನು?

ಮಂಗಳಂ ಪೊದ್ದಾರ್ ಎಂಬ ಇನ್​ಸ್ಟಾಗ್ರಾಮ್​ ಬಳಕೆದಾರರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ ಪ್ರಯಾಣ ಮುಗಿಸಿ ಬಂದ ಪ್ರಯಾಣಿಕರು, ಲಗೇಜ್ ಬೆಲ್ಟ್ ಚಲಿಸಲು ಪ್ರಾರಂಭಿಸಿದ ತಕ್ಷಣವೇ ಹೇಗೆ ಕನಿಷ್ಠ ತಾಳ್ಮೆಯಿಲ್ಲದೆ ಅದರ ಸುತ್ತಲೂ ಮುಗಿಬೀಳುತ್ತಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ತಮ್ಮ ಸರದಿಯನ್ನು ಕಾಯುವ ಬದಲು, ಜನರು ಒಬ್ಬರನ್ನೊಬ್ಬರು ಮುಂದಕ್ಕೆ ತಳ್ಳುತ್ತಾರೆ. ಕನ್ವೇಯರ್ ಬೆಲ್ಟ್‌ಗೆ ತೀರಾ ಅಂಟಿಕೊಂಡು ಲಗೇಜ್​ ತೆಗೆದುಕೊಳ್ಳುವುದರಿಂದ ಮುಖ್ಯ ನಡಿಗೆ ಮಾರ್ಗಗಳು ಬ್ಲಾಕ್​ ಆಗುತ್ತವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಭಾರತೀಯ ವಿಮಾನ ನಿಲ್ದಾಣದಲ್ಲಿ ನಾವೆಲ್ಲರೂ ಏಕೆ ಹುಚ್ಚರಾಗುತ್ತೇವೆ? ಇಲ್ಲಿ ನೋಡಿ ಇದು ಲಗೇಜ್ ಬೆಲ್ಟ್, ಇದು ಈ ಕಡೆಯಿಂದ ಬರುತ್ತಿದೆ, ಸರಿ? ಆದರೆ, ಜನಸಂದಣಿಯು ಇಡೀ ಪ್ರಕ್ರಿಯೆಗಳನ್ನು ನಿಧಾನಗೊಳಿಸುತ್ತದೆ. ಇದರಿಂದ ಲಗೇಜುಗಳು ಬೀಳುತ್ತವೆ. ಜೊತೆಗೆ ಬೇರೆಯವರ ಲಗೇಜುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಎಲ್ಲರೂ ಗುಂಪುಗೂಡುತ್ತಿದ್ದಾರೆ, ತಳ್ಳುತ್ತಿದ್ದಾರೆ, ಬೆವರಿನಲ್ಲಿ ಒಬ್ಬರನ್ನೊಬ್ಬರು ಹಿಸುಕುತ್ತಿದ್ದಾರೆ. ಎಲ್ಲರೂ ತಮ್ಮ ಸಾಮಾನುಗಳನ್ನು ಅಲ್ಲೇ ಹಿಡಿಯಲು ಬಯಸುತ್ತಾರೆ. ಆಆಗ್ಯೂ, ಇಲ್ಲಿ ಸಂಪೂರ್ಣವಾಗಿ ಖಾಲಿಯಾಗಿದೆ. ಸಹೋದರ, ಅದು ಮುಂದೆ ಹೋದರೂ, ಅದು ಈ ಕಡೆ ಮಾತ್ರ ಬರುತ್ತದೆ, ಸರಿಯೇ? ಸಾಮಾನುಗಳು ಹೇಗಾದರೂ ಈ ಕಡೆಯಿಂದ ಬರುವುದು ಖಚಿತ. ಇದು ತುಂಬಾ ವಿಚಿತ್ರವಾಗಿದೆ, ಜನರು ತುಂಬಾ ವಿಚಿತ್ರರು," ಎಂದು ಸಾರ್ವಜನಿಕರ ಕನಿಷ್ಠ ಜ್ಞಾನದ ಕೊರತೆಯನ್ನು ಕಠಿಣ ಪದಗಳಲ್ಲಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಜನರ ಗಮನ ಸೆಳೆದಿದ್ದು, ಸ್ವಲ್ಪ ತಾಳ್ಮೆ ಮತ್ತು ಅಂತರವು ಎಲ್ಲರಿಗೂ ಬ್ಯಾಗೇಜ್​ ಕ್ಲೈಮ್​ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಸ್ಪಷ್ಟ ಪ್ರಕಟಣೆಗಳು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ಉತ್ತಮ ಜನಸಂದಣಿ ನಿಯಂತ್ರಣವು ರಾಶಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರ ಇಲ್ಲಿ ಮಾತ್ರವಲ್ಲ. ಟ್ರಾಫಿಕ್ ಸಿಗ್ನಲ್‌ಗಳಲ್ಲಿಯೂ ಜನರು, ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು, ಜೀಬ್ರಾ ಕ್ರಾಸಿಂಗ್‌ನ ಆಚೆ ನಿಂತು ಕಾಯುತ್ತಾರೆ. ಅವರು ಓಟದಲ್ಲಿ ಸೋಲುತ್ತೇವೆ ಎಂದು ಭಾವಿಸುತ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).