ಏರ್ ಇಂಡಿಯಾ ವಿಮಾನ 300 ಅಡಿ ಕುಸಿದ ಘಟನೆ
- ಏರ್ ಇಂಡಿಯಾ ವಿಮಾನ 300 ಅಡಿ ಕುಸಿದ ಘಟನೆ
- ಥೈಲ್ಯಾಂಡ್ ರಾಜಧಾನಿ ಫುಕೆಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ
- ಪೈಲೆಟ್‌ಗಳ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢ
- ಪೈಲೆಟ್‌ಗಳ ಪರವಾನಗಿ ರದ್ದುಗೊಳಿಸಿ ಆದೇಶ
ನವದೆಹಲಿ: ಆಗಸ್ಟ್ 4 ರಂದು ಥೈಲ್ಯಾಂಡ್ ರಾಜಧಾನಿ ಫುಕೆಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ 300 ಅಡಿ ಕುಸಿತ ಕಂಡಿದ್ದ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಈ ವಿಮಾನದ ಪೈಲೆಟ್ಗಳನ್ನು ವೈದ್ಯಕೀಯ ಚಿಕಿತ್ಸೆ (Air India Pilot Drug Test) ಗೆ ಒಳಪಡಿಸಲಾಗಿದ್ದು ಇಬ್ಬರು ಪೈಲೆಟ್ಗಳಲ್ಲಿ ಒಬ್ಬ ಮಾದಕ ವಸ್ತು (ಗಾಂಜಾ) ಸೇವಿಸಿದ್ದಾಗಿ ತಿಳಿದು ಬಂದಿದೆ.
ವಿಮಾನ ಆಗಸದಲ್ಲಿದ್ದಾಗ ದಿಢೀರ್ ಟರ್ಬುಲೆನ್ಸ್ ಉಂಟಾಗಿ ವಿಮಾನದಲ್ಲಿದ್ದ ಒಟ್ಟು 142 ಪ್ರಯಾಣಿಕರು ಹಾಗೂ 8 ಕ್ರೂ ಸಿಬ್ಬಂದಿಗಳಲ್ಲಿ 134 ಪ್ರಯಾಣಿಕರು ಹಾಗೂ 4 ಕ್ರೂ ಸದಸ್ಯರು ತೀವ್ರ ಗಾಯಗೊಂಡಿದ್ದರು.
ವೈದ್ಯಕೀಯ ಪರೀಕ್ಷೆ; ಗಾಂಜಾ ಪತ್ತೆ!
ಈ ಅವಗಢದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಿಮಾನದ ಇಬ್ಬರು ಪೈಲೆಟ್ಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಒಬ್ಬ ಪೈಲೆಟ್ ಗಾಂಜಾ ಸೇವಿಸಿದ ಬಗ್ಗೆ ವರದಿ ದೊರೆತಿದೆ. ಹಾಗೂ ಈ ಇಬ್ಬರು ಪೈಲೆಟ್‌ಗಳ ಪರವಾನಗಿಯನ್ನು ಡಿಜಿಸಿಎ ರದ್ದುಗೊಳಿಸಿ ಆದೇಶಿಸಿದೆ.
ವಿಮಾನ ಒಂದೇ ಸಮನೇ 300 ಅಡಿ ಕುಸಿತ ಕಂಡಿದ್ದು, ಆಟೋ ಪೈಲೆಟ್ ಮೊಡ್ ಕೂಡ ಕಾರ್ಯನಿರ್ವಹಿಸೆ ಇರುವುದು ಕೆಲಕಾಲ ಗಾಭರಿಗೆ ಕಾರಣವಾಗಿದೆ. ಪೈಲೆಟ್‌ಗಳ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಈ ಘಟನೆ ನಡೆದ ಪರಿಣಾಮ ಹಲವು ಪ್ರಯಾಣಿಕರು ತಮ್ಮ ಆಸನದಿಂದ ಕೆಳಕ್ಕೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಆದರೆ, ಈ ಅವಗಢ ದೊಡ್ಡ ದುರಂತವಾಗಿ ಬದಲಾವಣೆ ಕಾಣುವಲ್ಲಿ ವಿಫಲವಾಗಿದ್ದು, ನೆಮ್ಮದಿಯ ಸಂಗತಿಯಾಗಿದ್ದು, ಇನ್ಮುಂದೆ ಪೈಲೆಟ್‌ಗಳ ಆಯ್ಕೆ ಹಾಗೂ ಅವರ ವೈದ್ಯಕೀಯ ಪರೀಕ್ಷೆ ಕಡ್ಡಾಯದತ್ತ ಗಮನಹರಿಸುವುದು ಸೂಕ್ತ ಎನ್ನುವುದು ಜನ ಸಾಮಾನ್ಯರ ಅಭಿಪ್ರಾಯವಾಗಿದೆ, (ಏಜನ್ಸೀಸ್).