Air India Phuket-Delhi flight severe turbulence
- ವಾಯು ಪ್ರಕ್ಷುಬ್ಧತೆಗೆ ಸಿಲುಕಿದ ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ.
- ಹತ್ತು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಗಾಯ.
- ತನಿಖೆಗೆ ಸಹಕರಿಸುತ್ತೇವೆ ಎಂದ ಏರ್ ಇಂಡಿಯಾ ವಕ್ತಾರ.
ನವದೆಹಲಿ: ಥೈಲ್ಯಾಂಡ್ನ ಅತಿ ದೊಡ್ಡ ದ್ವೀಪ ಹಾಗೂ ಪ್ರವಾಸಿ ತಾಣವಾದ ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಹಾರಾಟದ ಮಧ್ಯೆ ವಾಯು ಪ್ರಕ್ಷುಬ್ಧತೆ ಸಿಲುಕಿತು. ಇದರಿಂದಾಗಿ ವಿಮಾನವು 300 ಅಡಿಗಳಷ್ಟು ಕೆಳಕ್ಕೆ ಕುಸಿದ ಪರಿಣಾಮ
ಹತ್ತು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಲ್ಯಾಂಡ್ ಆದ ಕೂಡಲೇ ಗಾಯಗೊಂಡ ಪ್ರಯಾಣಿಕರಿಗೆ
ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರದಲ್ಲಿ ತುರ್ತು ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ನೀಡಲಾಗಿದೆ.
ಯಾರಿಗೂ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಏರ್ ಇಂಡಿಯಾ ವಕ್ತಾರರು ಹೇಳಿದ್ದಿಷ್ಟು
ನಮ್ಮ ಪ್ರಯಾಣಿಕರು ಹಾಗೂ ಸಿಬ್ಬಂದಿ ಯೋಗಕ್ಷೇಮವು ಏರ್ ಇಂಡಿಯಾದ ಮೊದಲ ಆದ್ಯತೆ. ಗಾಯಗೊಂಡ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಅಗತ್ಯವಿರುವ ಬೆಂಬಲವನ್ನು ಒದಗಿಸುತ್ತೇವೆ. ತನಿಖೆಯ ಭಾಗವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ಹೇಳಿದರು.
ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬ ಮಾತನಾಡಿ, ವಿಮಾನ ಫುಕೆಟ್ನಿಂದ ಹೊರಟು ಒಂದೂವರೆ ಗಂಟೆಯಾಗಿತ್ತು. ಬೆಳಗಿನ ಜಾವ ನಾವು ಮಲಗಿದ್ದಾಗ ವಿಮಾನ ಇದ್ದಕ್ಕಿದ್ದಂತೆ ನಿಂತು ತಿರುಗಿತು. ಅದು 2-3 ನಿಮಿಷಗಳ ಕಾಲ ಹೀಗೆ ಚಲಿಸುತ್ತಲೇ ಇತ್ತು. 15-20 ಪ್ರಯಾಣಿಕರು ಗಾಯಗೊಂಡರು. ವಿಮಾನದಲ್ಲಿ 100 ಕ್ಕೂ ಹೆಚ್ಚು ಜನರಿದ್ದರು. 70 ರಿಂದ 80% ಜನರು ಗಾಯಗೊಂಡರು ಎಂದು ಹೇಳಿದರು
ವಿಡಿಯೋಗಳು ವೈರಲ್
ಈ ಹಿಂದೆ ದೆಹಲಿ ಶ್ರೀನಗರದ ಮಧ್ಯೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನವು ಜಮ್ಮು ಪ್ರವೇಶಿಸುವ ವೇಲೆ ಆಲಿಕಲ್ಲು ಮಳೆಯಿಂದ ಪ್ರಕ್ಷುಬ್ಧತೆಗೆ ಸಿಲುಕಿತ್ತು. ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಮುಖಕ್ಕೆ ಹಾನಿಯಾಗಿದ್ದ ಘಟನೆ ಒಂದು ವರ್ಷದ ಹಿಂದೆ ನಡೆದಿತ್ತು,