ಗಲ್ಫ್ ರಾಷ್ಟ್ರಗಳಿಗೆ ಹಾರಲು ಸಜ್ಜಾದ ಏರ್ ಇಂಡಿಯಾ (Air India Express ಚಿತ್ರ ಪಿಟಿಐ) 
ದೇಶ

ಹೆಚ್ಚಿದ ಬೇಡಿಕೆ, ಏರ್ ಇಂಡಿಯಾದಿಂದ ಭರ್ಜರಿ ಕೊಡುಗೆ: ಪಶ್ಚಿಮ ಏಷ್ಯಾದ ಪ್ರಮುಖ ನಗರಗಳಿಗೆ 22 ವಿಮಾನಗಳ ಹಾರಾಟ! Air India Express

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ಭಾರತ ಮತ್ತು ಏಷ್ಯಾದ ಪ್ರಮುಖ ತಾಣಗಳ ನಡುವೆ ಒಟ್ಟು 22 ವಿಮಾನಗಳ ಹಾರಾಟ
  • ಪ್ರಸ್ತುತ ಪ್ರಯಾಣದ ಮಾದರಿಗಳು ಮತ್ತು ಆ ಪ್ರದೇಶದ ಕಾರ್ಯಾಚರಣೆಯ ಅಗತ್ಯತೆಗಳನ್ನು ಆಧರಿಸಿದೆ
  • ಏರ್ ಇಂಡಿಯಾ ಜೆಡ್ಡಾಗೆ ಮತ್ತು ಅಲ್ಲಿಂದ ವಾಪಾಸ್ಸಾಗಲು ಒಟ್ಟು ನಾಲ್ಕು ನಿಗದಿತ ವಿಮಾನಗಳು ಹಾರಾಟ ನಡೆಸಲಿವೆ
ನವದೆಹಲಿ: ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ (Air India Express) ಎಕ್ಸ್‌ಪ್ರೆಸ್ ಶುಕ್ರವಾರ (ಮಾ.27) ತನ್ನ ನವೀಕರಿಸಿದ ಅಂತರರಾಷ್ಟ್ರೀಯ ವಿಮಾನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ವೇಳ ಪಟ್ಟಿಯ ಪ್ರಕಾರ, ಭಾರತ ಮತ್ತು ಏಷ್ಯಾದ ಪ್ರಮುಖ ತಾಣಗಳ ನಡುವೆ ಒಟ್ಟು 22 ನಿಗದಿತ ಮತ್ತು ನಿಗದಿತವಲ್ಲದ ವಿಮಾನಗಳು ಕಾರ್ಯಾಚರಣೆ ನಡೆಸಲಿದೆ ಎಂದು ಸಂಸ್ಥೆ ತಿಳಿಸಿದೆ. 
ಪ್ರಸ್ತುತ ಪ್ರಯಾಣದ ಮಾದರಿಗಳು ಮತ್ತು ಆ ಪ್ರದೇಶದ ಕಾರ್ಯಾಚರಣೆಯ ಅಗತ್ಯತೆಗಳನ್ನು ಆಧರಿಸಿ ಈ ಪರಿಷ್ಕೃತ ಯೋಜನೆಯನ್ನು ರೂಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಪ್ರಕಟಣೆಯ ಪ್ರಕಾರ, ಏರ್ ಇಂಡಿಯಾ ಜೆಡ್ಡಾಗೆ ಮತ್ತು ಅಲ್ಲಿಂದ ವಾಪಾಸ್ಸಾಗಲು ಒಟ್ಟು ನಾಲ್ಕು ನಿಗದಿತ ವಿಮಾನಗಳು ಹಾರಾಟ ನಡೆಸಲಿವೆ. ದೆಹಲಿಯಿಂದ ಎರಡು ಮತ್ತು ಮುಂಬೈನಿಂದ ಎರಡು ಕಾರ್ಯಾಚರಣೆ ನಡೆಸಲಿವೆ. ಜೊತೆಗೆ ಮುಂಬೈ ರಿಯಾದ್ ಮಾರ್ಗದಲ್ಲಿ ಇನ್ನೂ ಎರಡು ನಿಗದಿತ ಸೇವೆಗಳು ಕಾರ್ಯನಿರ್ವಹಿಸಲಿವೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಮಾರ್ಗಗಳನ್ನು ಮಸ್ಕತ್ ಮತ್ತು ರಿಯಾದ್‌ಗೆ ನಾಲ್ಕು ವಿಮಾನಗಳ ಮೂಲಕ ಸಂಚಾರ ಮಾರ್ಗವನ್ನು ಮಾಡಲಿದೆ ಎಂದು ಹೇಳಿಕೆ ನೀಡಿದೆ. ಮಸ್ಕತ್ ವಿಮಾನಗಳು ದೆಹಲಿ ಮತ್ತು ಮುಂಬೈನಿಂದ ಹೊರಡಲಿದ್ದು, ರಿಯಾದ್ ಸೇವೆಗಳು ಬೆಂಗಳೂರು ಮತ್ತು ಕೋಝಿಕ್ಕೋಡ್‌ನಿಂದ ಹೊರಡಲಿವೆ.
ಗರಿಷ್ಠ ಬೇಡಿಕೆಯನ್ನು ಕಡಿಮೆ ಮಾಡಲು ಯುಎಇಗೆ ತಾತ್ಕಾಲಿಕ ಸೇವೆಗಳು
ವಿಮಾನ ನಿಲ್ದಾಣದ ಸ್ಲಾಟ್ ಲಭ್ಯತೆ ಮತ್ತು ಚಾಲ್ತಿಯಲ್ಲಿರುವ ನೆಲದ ಪರಿಸ್ಥಿತಿಗಳನ್ನು ಅವಲಂಬಿಸಿ, ಎರಡೂ ವಿಮಾನಯಾನ ಸಂಸ್ಥೆಗಳು ಯುನೈಟೆಡ್​ ಅರಬ್​ ಎಮಿರೆಟ್ಸ್​ಗೆ ಮತ್ತು ಅಲ್ಲಿಂದ ಎಂಟು ನಿಗದಿತವಲ್ಲದ ವಿಮಾನಗಳು ಕಾರ್ಯನಿರ್ವಹಿಸುತ್ತವೆ.  ​ಆದಾಗ್ಯೂ,   ಹೆಚ್ಚುವರಿ ವಿಮಾನಗಳ ಬೇಡಿಕೆ ಹೆಚ್ಚಾಗಿರುವುದರಿಂದ ಅವುಗಳನ್ನು ನಿವಾರಿಸುವ ಸಲುವಾಗಿ ಈ ಗುರಿಯನ್ನು ಹೊಂದಿವೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. 
ಜೆಡ್ಡಾ, ರಿಯಾದ್ ಮತ್ತು ಮಸ್ಕತ್‌ನಂತಹ ಮಾರ್ಗಗಳಲ್ಲಿ ನಿಯಮಿತ ವಿಮಾನಗಳು ಮುಂದುವರಿದರೆ, ದುಬೈ ಮತ್ತು ಅಬುಧಾಬಿ ಸೇರಿದಂತೆ ಯುಎಇಯ ಕೆಲವು ವಿಮಾನ ನಿಲ್ದಾಣಗಳು ನಿಗದಿತವಲ್ಲದ ಕಾರ್ಯಾಚರಣೆಗಳನ್ನು ಮಾತ್ರ ನೋಡುತ್ತವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಿದ್ದಾರೆ. 
ಪ್ರಯಾಣಿಕರಿಗೆ ತನ್ನ ಬದ್ಧತೆಯನ್ನು ಪುನರುಚ್ಚಿಸಿದ ಏರ್ ಇಂಡಿಯಾ, ಸಮೂಹದ ನಿಗದಿತ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಯಾವುದೇ ಮಾರ್ಗಗಳಲ್ಲಿ ಪ್ರಯಾಣಿಸಲು ಬುಕ್ ಮಾಡಿದ ಪ್ರಯಾಣಿಕರು ಹೆಚ್ಚುವರಿ ಶುಲ್ಕವಿಲ್ಲದೇ ಮುಂದಿನ ದಿನಾಂಕಕ್ಕೆ ಮರು ಬುಕ್​ ಮಾಡಬಹುದು. ಪ್ರಯಾಣಿಕರು ವೆಬ್‌ಸೈಟ್ ಅಥವಾ 24x7 ಗ್ರಾಹಕ ಸೇವಾ ತಂಡದ ಮೂಲಕ ಬದಲಾವಣೆಗಳನ್ನು ಮಾಡಬಹುದು.
ಯುಎಇ ವಿಮಾನ ನಿಲ್ದಾಣಗಳಿಂದ ಬುಕಿಂಗ್ ಮಾಡುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಬೇಕಾದ ದಿನದಂದು ಮರು ಬುಕ್ಕಿಂಗ್​ ಆಯ್ಕೆ ಮಾಡಿಕೊಳ್ಳಲು ನೆರವು ನೀಡಲಿದೆ. ಆದಾಗ್ಯೂ, ಏಷ್ಯಾದಂತ ಹೆಚ್ಚಿನ ತಾತ್ಕಾಲಿಕ ವಿಮಾನಗಳನ್ನು ಅನ್ವೇಷಿಸುತ್ತಿರುವುದಾಗಿ ಸಂಸ್ಥೆ  ಮಾಹಿತಿ ನೀಡಿದೆ (ಏಜೆನ್ಸೀಸ್​).