Air India Express 
ದೇಶ

ಮುಂಬೈ ಏರ್ಪೋರ್ಟ್​​ನಲ್ಲಿ ತಪ್ಪಿದ ಭಾರಿ ದುರಂತ; ಒಂದೇ ರನ್​ವೇನಲ್ಲಿ 2 ಏರ್​ ಇಂಡಿಯಾ ವಿಮಾನ ಮುಖಾಮುಖಿ..Air India Express

ಪ್ರಮುಖ ಮುಖ್ಯಾಂಶಗಳು

  • ಮುಂಬೈನ ಒಂದೇ ರನ್​ವೇನಲ್ಲಿದ್ದ ಎರಡು ವಿಮಾನ
  • ಟೇಕ್​​ ಆಫ್​ ಸ್ಥಗಿತಗೊಳಿಸಿದ ಏರ್​​ ಟ್ರಾಫಿಕ್​ ಕಂಟ್ರೋಲ್​ ರೂಂ
  • ಪ್ರಯಾಣಿಕರನ್ನು ಸುರಕ್ಷತಾ ಸ್ಥಳಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದ ವಕ್ತಾರರು
Air India Express: ಮುಂಬೈನಿಂದ ದೆಹಲಿಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನವು ಮಂಗಳವಾರ ರನ್​ವೇನಲ್ಲಿ ಟೇಕ್​ ಆಫ್​ ಆಗೋದನ್ನು ಸ್ಥಗಿತಗೊಳಿಸಿದೆ. ಈ ವಿಮಾನ ಟೇಕ್​ ಆಫ್​ ಆಗುವ ಕೆಲವು ಸೆಕೆಂಡುಗಳ ಹಿಂದೆಯಷ್ಟೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡ್​ ಆಗಿತ್ತು. ಅದೂ ರನವೇನಲ್ಲೇ ಕೆಲ ಗಂಟೆಯಿದ್ದ ಕಾರಣ ಏರ್​ ಟ್ರಾಫಿಕ್​ ಕಂಟ್ರೋಲ್​​​​​​​ ಸೂಚನೆ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿಸಲಾಗಿದೆ.
ಮಂಗಳವಾರ ರಾತ್ರಿ 9:40ಕ್ಕೆ ಈ ಘಟನೆ ಸಂಭವಿಸಿದೆ. ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI 816 ಟೇಕ್​ ಆಫ್​ ಆಗಲು ಮುಂಬೈ ವಿಮಾನ ನಿಲ್ದಾಣದ ರನ್​​ವೇ 27ನ್ನು ಪ್ರವೇಶಿಸಿ ವೇಗವಾಗಿ ಚಲಿಸಲು ಆರಂಭಿಸಿತ್ತು. ಅದೇ ಸಮಯದಲ್ಲಿ ಬಾಗ್ದೋಗ್ರಾದಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 1547 ಅದೇ ರನ್‌ವೇನಲ್ಲಿ ಇಳಿದಿತ್ತು ಎನ್ನಲಾಗಿದೆ,

ಏರ್​ ಟ್ರಾಫಿಕ್​ ಕಂಟ್ರೋಲ್​ನಿಂದ ಸೂಚನೆ

ಏರ್ ​ಟ್ರಾಫಿಕ್​ ಕಂಟ್ರೋಲ್​ನಿಂದ ಟೇಕ್​ ಆಫ್​ ಪ್ರಕ್ರಿಯೆ ಸ್ಥಗಿತಗೊಳಿಸುವ ಬಗ್ಗೆ ಸೂಚನೆ ಸಿಕ್ಕಿತ್ತು. ಅದರ ಪ್ರಕಾರ ವಿಮಾನವನ್ನು ಮರಳಿ ಪಾರ್ಕಿಂಗ್​​ ಪ್ರದೇಶಕ್ಕೆ ತರಲಾಯಿತು. ವಿಮಾನವು ಪ್ರಮಾಣಿತ ಕಾರ್ಯಾಚರಣೆಯ ನಿಯಮಾವಳಿಗಳ ಪ್ರಕಾರ ಕಡ್ಡಾಯ ತಪಾಸಣೆಗೆ ಒಳಗಾಗಲಿದೆ ಎಂದು ಏರ್ ಇಂಡಿಯಾ ವಕ್ತಾರರು ಮಾಹಿತಿ ಹಂಚಿಕೊಂಡಿದ್ದಾರೆ.
ಸಿಲಿಗುರಿಯಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇನಿಂದ ಇನ್ನು ಹೊರಹೋಗದಿದ್ದಾಗಲೇ, ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅದೇ ರನ್‌ವೇನಲ್ಲಿ ಟೇಕ್-ಆಫ್‌ಗೆ ಸಿದ್ಧತೆ ನಡೆಸಿ ಮುನ್ನುಗ್ಗಿತ್ತು ಎಂದು ಹೇಳಲಾಗಿದೆ.

ಯಾವ ವಿಮಾನ ಎತ್ತ ಹೊರಟಿತ್ತು?

ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI 816 ದೊಡ್ಡ ಗಾತ್ರದ ಬೋಯಿಂಗ್ 777-300ER ವಿಮಾನವಾಗಿದ್ದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ AIX 1547 ಬೋಯಿಂಗ್ 737 MAX 8 ವಿಮಾನವಾಗಿತ್ತು ಎಂದು ತಿಳಿದುಬಂದಿದೆ.
ಜುಲೈ7ರಂದು ಮುಂಬೈನಿಂದ ದೆಹಲಿಗೆ ಹೊರಟಿದ್ದ AI 816 ವಿಮಾನದ ಸಿಬ್ಬಂದಿ, ಏರ್​​ ಟ್ರಾಫಿಕ್​ ಕಂಟ್ರೋಲ್​ ಕೊಟ್ಟ ಸೂಚನೆ ಮೇರೆಗೆ ಟೇಕ್-ಆಫ್ ರನ್ ಅನ್ನು ನಿಲ್ಲಿಸಿ, ಮರಳಿ ಬೇಗೆ ಬಂದರು ಎಂದು ಏರ್​​ ಇಂಡಿಯಾ ವಕ್ತಾರ ಮಾಹಿತಿ ಹಂಚಿಕೊಂಡರು. ಆದರೆ, ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ
ಪ್ರಮಾಣಿತ ಕಾರ್ಯಾಚರಣೆಯ ನಿಯಮಾವಳಿಗಳ ಪ್ರಕಾರ ವಿಮಾನವನ್ನು ಅಗತ್ಯ ತಪಾಸಣೆಗೆ ಒಳಪಡಿಸಲಾಗುವುದು. ಪ್ರಯಾಣಿಕರನ್ನು ಆದಷ್ಟು ಬೇಗ ಅವರ ತಲುಪಬೇಕಾದ ಸ್ಥಳಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ, (ಏಜೆನ್ಸೀಸ್).