ಒಸಾಮಾ ಬಿನ್​ ಲಾಡೆನ್​ ಮತ್ತು ಅಸಾದುದ್ದೀನ್​ ಓವೈಸಿಯಲ್ಲಿ ವ್ಯತ್ಯಾಸವಿಲ್ಲ: ನಿತೇಶ್​ ರಾಣೆ 
ದೇಶ

AIMIM ಒಂದು ಭಯೋತ್ಪಾದಕ ಸಂಘಟನೆ: ಓವೈಸಿ ಮತ್ತು ಬಿನ್ ಲಾಡೆನ್ ನಡುವೆ ವ್ಯತ್ಯಾಸವಿಲ್ಲ; ನಿತೇಶ್​ ರಾಣೆ ವಾಗ್ದಾಳಿ! Nitesh Rane on AIMIM

ಪ್ರಮುಖ ಮುಖ್ಯಾಂಶಗಳು

  • AIMIM ಒಂದು ಭಯೋತ್ಪಾದಕ ಸಂಘಟನೆ
  • ಒಸಾಮಾ ಬಿನ್​ ಲಾಡೆನ್​ ಮತ್ತು ಅಸಾದುದ್ದೀನ್​ ಓವೈಸಿಯಲ್ಲಿ ವ್ಯತ್ಯಾಸವಿಲ್ಲ: ನಿತೇಶ್​ ರಾಣೆ
  • ಕೂಡಲೇ ಈ ಭಯೋತ್ಪಾದಕ ಸಂಘಟನೆಯನ್ನು ಬ್ಯಾನ್​ ಮಾಡಬೇಕು
  • ಟಿಸಿಎಸ್​ ಮತಾಂತರ ಪ್ರಕರಣಕ್ಕೆ ನಿತೇಶ್​ ರಾಣೆ ರಿಯಾಕ್ಷನ್​
ಮುಂಬೈ: ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಸರ್ಕಾರದ ಬಂದರು ಅಭಿವೃದ್ಧಿ ಸಚಿವ ನಿತೇಶ್​ ರಾಣೆ (Nitesh Rane on AIMIM), ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷ ಒಂದು ಭಯೋತ್ಪಾದಕ ಸಂಘಟನೆ ಹಾಗೂ ಅಸಾದುದ್ದೀನ್​ ಓವೈಸಿ ಹಾಗೂ ಒಸಾಮಾ ಬಿನ್​ ಲಾಡೆನ್​ರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ನಾಸಿಕ್​ನ ಟಿಸಿಎಸ್​ ಕಂಪನಿಯ ನಿದಾ ಖಾನ್​ ಎಂಬಾಕೆ ಬಲವಂತದ ಮತಾಂತರ ಮಾಡುತ್ತಿದ್ದು, ಇದಕ್ಕೆ ಎಐಎಂಐಎಂ ಪಕ್ಷದ ಮತೀನ್​ ಮಾಜೀದ್​ ಪಟೇಲ್​ ಎಂಬಾತ ಸಹಕಾರ ನೀಡುತ್ತಿದ್ದ ಹಿನ್ನಲೆ ರಾಣೆ ಈ ಹೇಳಿಕೆ ನೀಡಿದ್ದಾರೆ.

ಅಂದು ಅಲ್​ ಖೈದಾ ಇಂದು ಎಐಎಂಐಎಂ

ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ ನಿತೇಶ್​ ರಾಣೆ, ಎಐಎಂಐಎಂ ಇದೊಂದು ಭಯೋತ್ಪಾದಕ ಸಂಘಟನೆ ಹೊರತು ಯಾವುದೇ ರಾಜಕೀಯ ಪಕ್ಷವಲ್ಲ, ಹಾಗೆಯೇ ಈ ಅಸಾದುದ್ದೀನ್​ ಓವೈಸಿ ಹಾಗೂ ಒಸಾಮಾ ಬಿನ್​ ಲಾಡೆನ್​ರಲ್ಲಿ ಬಹಳ ವ್ಯತ್ಯಾಸವೇನಿಲ್ಲ.
ಬಿನ್​ ಲಾಡೆನ್​ ಅಲ್​ ಖೈದಾ ಮೂಲಕ ತನ್ನ ಕೆಲಸವನ್ನು ಮಾಡಿದರೆ ಇಂದು ಓವೈಸಿ ಈ ಎಐಎಂಐಎಂ ಮೂಲಕ ಅದೇ ಅಲ್​ ಖೈದಾ ಮಾಡುತ್ತಿದ್ದ ಕೆಲಸವನ್ನೇ ಮಾಡುತ್ತಿದ್ದಾರೆ ಎಂದು ರಾಣೆ ಕಿಡಿ ಕಾರಿದ್ದಾರೆ.

ಎಐಎಂಐಎಂ ಎಂದರೆ ಜಿಹಾದ್​!

ಈ ಎಐಎಂಐಎಂ ಪಕ್ಷ ಇಷ್ಟು ವರ್ಷದಿಂದ ಅಸ್ಥಿತ್ವದಲ್ಲಿದೆ. ಆದರೆ ಈ ಪಕ್ಷದ ಪ್ರನಾಳಿಕೆ ಏನು? ಈ ಪಕ್ಷದ ಪ್ರನಾಳಿಕೆ ಕೇವಲ ಜಿಹಾದ್​ ಹೊರತಾಗಿ ಬೇರೆನಿಲ್ಲ. ನಾವು ಪಿಎಫ್​ಐ ಪಕ್ಷವನ್ನು ಬ್ಯಾನ್​ ಮಾಡಿದಂತೆ, ಈ ಎಐಎಂಐಎಂ ಅನ್ನು ಆದಷ್ಟು ಬೇಗ ನಿಷೇಧಿಸಬೇಕಾದ ಅಗತ್ಯತೆ ಇದೆ ಎಂದು ನಿತೇಶ್​ ರಾಣೆ ಹೇಳಿದ್ದಾರೆ, (ಏಜನ್ಸೀಸ್​).