ಪ್ರಮುಖ ಮುಖ್ಯಾಂಶಗಳು
‘ದಿ 2028 ಗ್ಲೋಬಲ್ ಇಂಟೆಲಿಜೆನ್ಸ್ ಕ್ರೖೆಸಿಸ್’ ಎಂಬ ಹೆಸರಿನ ಈ ವರದಿಯ ಪ್ರಕಾರ, ಕಡಿಮೆ ವೆಚ್ಚದಲ್ಲಿ ಸಿಗುವ ಎಐ ಕೋಡಿಂಗ್ ಏಜೆಂಟ್ಗಳಿಂದಾಗಿ ವಿದೇಶಿ ಕಂಪನಿಗಳು ಭಾರತೀಯ ಐಟಿ ಸೇವೆಗಳ ಮೇಲಿನ ಅವಲಂಬನೆಯನ್ನು ಕೈಬಿಡಲಿವೆ. ಇದರಿಂದಾಗಿ 2027ರ ವೇಳೆಗೆ ಈ ಕಂಪನಿಗಳ ಕೆಲಸದ ಒಪ್ಪಂದಗಳ ರದ್ದತಿ ಹೆಚ್ಚಾಗಲಿದೆ.
ಇದರ ನೇರ ಪರಿಣಾಮ ಭಾರತೀಯ ರೂಪಾಯಿಯ ಮೇಲೆಯೂ ಬೀಳಲಿದೆ. ರೂಪಾಯಿ ಮೌಲ್ಯ ಕೇವಲ ನಾಲ್ಕು ತಿಂಗಳಲ್ಲಿ ಶೇ. 18ರಷ್ಟು ಕುಸಿಯುವ ಸಾಧ್ಯತೆಯಿದೆ. ಕಂಪನಿಗಳು ವೆಚ್ಚ ಉಳಿಸಲು ಎಐ ಬಳಸಿ ಉದ್ಯೋಗಿಗಳನ್ನು ಕಡಿತಗೊಳಿಸುವ ಮತ್ತು ಆ ಹಣವನ್ನು ಪುನಃ ಎಐನಲ್ಲಿ ಹೂಡಿಕೆ ಮಾಡುವ ‘ಫೀಡ್ಬ್ಯಾಕ್ ಲೂಪ್’ ಆರ್ಥಿಕ ಅಸ್ಥಿರತೆಗೆ ಕಾರಣವಾಗಲಿದೆ. ಈ ಪರಿಸ್ಥಿತಿ 2028ರ ವೇಳೆಗೆ ಭಾರತ ಐಎಂಎಫ್ ನೆರವು ಕೋರುವ ಮಟ್ಟಕ್ಕೆ ತಲುಪಿಸಬಹುದು ಎಂದು ವರದಿ ಭವಿಷ್ಯ ನುಡಿದಿದೆ.
ಎಐ ತಂತ್ರಜ್ಞಾನಕ್ಕೆ ಟಿಸಿಎಸ್ ಹೆದರುವುದಿಲ್ಲ ಎಂದು ಸಿಇಒ ಕೆ. ಕೃತಿವಾಸನ್ ಹೇಳಿದ್ದಾರೆ. ‘ಎಐ ಬಳಕೆಯಿಂದ ಕಂಪನಿಯ ಆದಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ (ಕ್ಯಾನಿಬಲೈ ಸೇಷನ್), ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಿದ್ಧ. ನಮ್ಮ 6 ಲಕ್ಷ ಉದ್ಯೋಗಿಗಳಿಗೆ ಎಐ ತರಬೇತಿ ನೀಡುತ್ತಿದ್ದು, ಯುವ ಉದ್ಯೋಗಿಗಳು ಹಿರಿಯರಿಗಿಂತ ವೇಗವಾಗಿ ಎಐ ಕಲಿಯುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.