Agnikul Cosmos Mission 02 
ದೇಶ

ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಬರೆಯಲು ಭಾರತದ ಸಿದ್ಧತೆ; ಅಮೆರಿಕ, ಚೀನಾ ಮತ್ತು ಜಪಾನ್ ನಂತರ ನೀರಿನ ಮೇಲೆ ಮರುಬಳಕೆಯ ರಾಕೆಟ್ ಲ್ಯಾಂಡಿಂಗ್​ಗೆ ಪ್ಲ್ಯಾನ್​​

ಪ್ರಮುಖ ಮುಖ್ಯಾಂಶಗಳು

  • ಬಾಹ್ಯಾಕಾಶದಿಂದ ಧರೆಗೆ ಉರುಳುವ ರಾಕೆಟ್ ಇನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಪ್ಲ್ಯಾನ್​
  • ಭಾರತೀಯ ಖಾಸಗಿ ಬಾಹ್ಯಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಅಗ್ನಿಕುಲ್ ಕಾಸ್ಮೋಸ್ನಿಂದ ಹೊಸ ಯತ್ನ
  • ಮಿಷನ್​​ 2 ಘೋಷಣೆ ಮಾಡಿದ ‘ಅಗ್ನಿಕುಲ್ ಕಾಸ್ಮೋಸ್ ಸಂಸ್ಸ್ಥೆ
Agnikul Cosmos Mission 02: ಅಮೆರಿಕ, ಚೀನಾ ಹಾಗೂ ಜಪಾನ್​ ರಾಷ್ಟ್ರಗಳು ತಮ್ಮದೇ ಆದ ಮರುಬಳಕೆ ಮಾಡಬಹುದಾದ ರಾಕೆಟ್​​ಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ ಬೆನ್ನಲ್ಲೇ, ಭಾರತವೂ ಇಂತಹವೊಂದು ಐತಿಹಾಸಿಕ ಘಟನೆಗೆ ಕಾರಣವಾಗಲು ಸಜ್ಜಾಗುತ್ತಿದೆ. ಭಾರತೀಯ ಖಾಸಗಿ ಬಾಹ್ಯಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಅಗ್ನಿಕುಲ್ ಕಾಸ್ಮೋಸ್' ಸಮುದ್ರದ ಮೇಲೆ ಯಶಸ್ವಿಯಾಗಿ ರಾಕೆಟ್ ಬೂಸ್ಟರ್ ಅನ್ನು ಯಶಸ್ವಿಯಾಗಿ ಇಳಿಸಲು ತಯಾರಿ ನಡೆಸುತ್ತಿದೆ.

ಮಿಷನ್ 02

ಅಗ್ನಿಕುಲ್​ ಕಾಸ್ಮೋಸ್​ ಸಂಸ್ಥೆಯು ತನ್ನ ಮುಂಬರುವ ಮಿಷನ್ 02 ಗಾಗಿ ಅತ್ಯಂತ ವಿಶಿಷ್ಟ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಈ ಮಿಷನ್​​ 2 ಯೋಜನೆ ಮೂಲಕ ಮರುಬಳಕೆ ಮಾಡಬಹುದಾದ ರಾಕೆಟ್​ ಬೂಸ್ಟರ್​​​​ ಹಾಗೂ ಕಕ್ಷೆಯಲ್ಲಿ ಕಾರ್ಯನಿರ್ವಹಿಸಬಲ್ಲ ಮೇಲಿನ ಹಂತವನ್ನು ಪ್ರದರ್ಶಿಲು ಪ್ಲ್ಯಾನ್​ ಮಾಡಲಾಗಿದೆ.

ಏನಿದರ ವಿಶೇಷತೆ?

ಸಾಮಾನ್ಯವಾಗಿ ಉಪಗ್ರಹವನ್ನು ಕಕ್ಷೆಗೆ ತಲುಪಿಸಿದ ನಂತರ ಮೇಲಿನ ಹಂತವನ್ನು ಬಾಹ್ಯಾಕಾಶದಲ್ಲಿಯೇ ತ್ಯಜಿಸಲಾಗುತ್ತದೆ. ಆದರೆ, ಅಗ್ನಿಕುಲ್ ಸಂಸ್ಥೆಯು ಇದನ್ನು ತ್ಯಜಿಸುವ ಬದಲಿಗೆ, ಕಕ್ಷೆಯಲ್ಲಿಯೇ ಸಕ್ರಿಯವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಪ್ರದರ್ಶಿಸಲಿದೆ.
ಸಮುದ್ರದ ನೀರಿನಲ್ಲಿ ಇಳಿಯುವಿಕೆಯ ಐತಿಹಾಸಿಕ ಕಾರ್ಯಾಚರಣೆಯ ಸಮಯದಲ್ಲಿ, ಅಗ್ನಿಬಾನ್‌ ರಾಕೆಟ್​​​ನ ಮೊದಲ ಹಂತದ ಬೂಸ್ಟರ್​​ ಉಪಗ್ರಹವನ್ನು ನಿಯೋಜಿಸಿದ ನಂತರ ನಿಯಂತ್ರಿತವಾಗಿ ಕೆಳಕ್ಕೆ ಇಳಿಯುವ ಪ್ರಯತ್ನ ಮಾಡಲಿದೆ. ತದನಂತರ ಅದನ್ನು ಯಶಸ್ವಿಯಾಗಿ ಸಮುದ್ರದಿಂದ ಮರಳಿ ಪಡೆದುಕೊಳ್ಳುವ ಮೂಲಕ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಸಂಸ್ಥೆ ಸಜ್ಜಾಗಿದೆ.

ಅಗ್ನಿಕುಲ್ ಕಾಸ್ಮೋಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀನಾಥ್ ರವಿಚಂದ್ರನ್ ಹೇಳಿದ್ದಿಷ್ಟು

ಈ ಮಿಷನ್​ನ ವೀಕ್ಷಕರಾಗಿ ಇಸ್ರೋದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಅವರು ಕಂಪನಿಯ ಮಂಡಳಿಗೆ ಸೇರಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಚಂದ್ರಯಾನ-3, LVM3, ಆದಿತ್ಯ L1 ಮಿಷನ್​ಗಳ ಉಡಾವಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಅವರು ನಮಗೆ ಮಾರ್ಗದರ್ಶನ ಕೊಡೋದು ನಿಜಕ್ಕೂ ನಮಗೆ ಸಿಗುತ್ತಿರುವ ಆಶೀರ್ವಾದ ಎಂದು ಅಗ್ನಿಕುಲ್ ಕಾಸ್ಮೋಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀನಾಥ್ ರವಿಚಂದ್ರನ್ ಹೇಳಿದರು, (ಏಜೆನ್ಸೀಸ್).