ನಾಸಿಕ್ ಟಿಸಿಎಸ್ (TCS) ಬೆನ್ನಲ್ಲೇ ಈಗ ಪುಣೆಯ ವಿಪ್ರೋ (Wipro) ಕಂಪನಿಯಲ್ಲೂ ಮತಾಂತರದ ಆರೋಪ! 
ದೇಶ

TCS ಬಳಿಕ ವಿಪ್ರೋ ಕಂಪನಿಯಲ್ಲಿ ಮತಾಂತರ ಆರೋಪ! ಹಿಂಸೆ ತಾಳಲಾರದೆ ಕೆಲಸ ಬಿಟ್ಟ ಮಹಿಳಾ ಉದ್ಯೋಗಿ; ಪೊಲೀಸರಿಗೆ ದೂರು! Wipro Conversion

ಪ್ರಮುಖ ಮುಖ್ಯಾಂಶಗಳು

  • ನಾಸಿಕ್ ಟಿಸಿಎಸ್ (TCS) ಬೆನ್ನಲ್ಲೇ ಈಗ ಪುಣೆಯ ವಿಪ್ರೋ (Wipro) ಕಂಪನಿಯಲ್ಲೂ ಮತಾಂತರದ ಆರೋಪ!
  • ಇಸ್ಲಾಂಗೆ ಮತಾಂತರವಾಗುವಂತೆ ಲೇಡಿ ಮ್ಯಾನೇಜರ್ ಮಾನಸಿಕ ಹಿಂಸೆ
  • ಕೆಲಸ ಬಿಟ್ಟ ಮಹಿಳಾ ಟೆಕ್ಕಿ ಪೊಲೀಸರಲ್ಲಿ ದೂರು
ಪುಣೆ: ಕೆಲ ತಿಂಗಳುಗಳ ಹಿಂದೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ನಲ್ಲಿ ಅಲ್ಲಿಯ ಸಿಬ್ಬಂದಿಗಳನ್ನು ಬಲವಂತದಿಂದ ಮತಾಂತರಕ್ಕೆ ಪ್ರಯತ್ನಿಸಿದ ಪ್ರಕರಣ ದಾಖಲಾಗಿತ್ತು, ಈಗ ಆ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ.
ನಾಸಿಕ್​ನ ಘಟನೆ ಜನರ ನೆನಪಿನಿಂದ ಮರೆಯಾಗುವ ವೇಳಗೆ ಈಗ ಪುಣೆಯ ವಿಪ್ರೋ ಕಂಪನಿಯಲ್ಲಿ (Wipro Conversion) ಮಹಿಳೆಯೊಬ್ಬಳಿಗೆ ಮತಾಂತರವಾಗಲು ಒತ್ತಾಯ ಹೇರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, ಮಹಿಳೆ ಪ್ರಸ್ತುತ ಬೆಂಗಳೂರಿನಲ್ಲಿದ್ದು, ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇಕೆಯ ಮೇಲಾಧಿಕಾರಿಯಾಗಿದ್ದ ಓರ್ವ ಮಹಿಳೆ ಮತಾಂತರವಾಗಲು ಒತ್ತಾಯಿಸುತ್ತಿದ್ದು, ಆಕೆಯ ಹಿಂಸೆಯನ್ನು ತಾಳಲಾರದೆ ನಾನು ಅಲ್ಲಿಂದ ಕೆಲಸ ಬಿಟ್ಟಿದ್ದಾಗಿ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ.
ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ವಿಪ್ರೋ ಕಂಪನಿ ತಕ್ಷಣ ಸಂತ್ರಸ್ತ ಮಹಿಳೆಯನ್ನು ಸಂಪರ್ಕಿಸಿ, ಘಟನೆ ಬಗ್ಗೆ ಅಗತ್ಯ ದಾಖಲಾತಿಗಳನ್ನು ಒದಗಿಸುವಂತೆ ಕೋರಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇಸ್ಲಾಂಗೆ ಮತಾಂತರವಾಗುವಂತೆ ಹಿಂಸೆ!

ಮಹಿಳೆ ನೀಡಿರುವ ಮಾಹಿತಿ ಪ್ರಕಾರ, ಈಕೆ ಪುಣೆಯ ಹಿಂಜೆವಾಡಿಯ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿದ್ದ ಸೀನಿಯರ್​ ಮ್ಯಾನೇಜರ್​ ಒಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ.
ಆಕೆಯ ಹಿಂಸೆಯನ್ನು ತಡೆಯಲು ಅಸಾಧ್ಯವಾದಾಗ ನಾನು ಕೆಲಸವನ್ನು ಬಿಟ್ಟು, ಬಿಟ್ಟೆ. ಈ ಕುರಿತು ಕಂಪನಿಗೆ ದೂರನ್ನು ನೀಡಿದರೆ ಏನೂ ಪ್ರಯೋಜನ ಆಗುವುದಿಲ್ಲ ಎಂದು ತಿಳಿದಿದ್ದರಿಂದ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾಗಿ ಹೇಳಿದ್ದಾಳೆ.

ನಾವು ತನಿಖೆ ನಡೆಸುತ್ತಿದ್ದೆವೆ

ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ವಿಪ್ರೋ ಸಿಬ್ಬಂದಿ, ನಾವು ಮಹಿಳೆ ಪುಣೆ ಪೊಲೀಸರಿಗೆ ನೀಡಿರುವ ದೂರನ್ನು ದಾಖಲಿಸಿದ್ದೇವೆ. ನಮ್ಮ ಕಂಪನಿಯಲ್ಲಿ ಇದುವರೆಗೆ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ, ಒಂದು ವೇಳೆ ಈ ರೀತಿಯ ಘಟನೆ ನಡೆದಿದ್ದೆ ಆದರೆ ಅಲ್ಲಿ ಶಿಸ್ತು ಕ್ರಮವನ್ನು ಅಗತ್ಯವಾಗಿ ತೆಗೆದುಕೊಳ್ಳುತ್ತೆವೆಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್​).