ಇಂಜಿನ್​ ಫೆಲ್ಯೂರ್​ ಬೆನ್ನಲ್ಲೇ ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ 
ದೇಶ

ತಪ್ಪಿತು ಭಾರಿ ದುರಂತ! ಇಂಜಿನ್​ ಫೆಲ್ಯೂರ್​ ಬೆನ್ನಲ್ಲೇ ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ | Indigo Flight

ಪ್ರಮುಖ ಮುಖ್ಯಾಂಶಗಳು

  • ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ (IndiGo) ವಿಮಾನ ತುರ್ತು ಭೂಸ್ಪರ್ಶ
  • ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಗೋವಾ ಏರ್​ಪೋರ್ಟ್​ಗೆ ವಾಪಾಸ್​
ಪಣಜಿ: ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ (IndiGo) ವಿಮಾನವೊಂದು ಇಂಜಿನ್ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಗೋವಾ ಏರ್​ಪೋರ್ಟ್​ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ರನ್​ವೇಯಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ಇಂಜಿನ್​ ದೋಷ ಕಾಣಿಸಿಕೊಂಡಿದೆ. ಇದನ್ನು ಅರಿತ ಪೈಲಟ್​ಗಳು ಕೂಡಲೇ ಸುರಕ್ಷಿತ ಲ್ಯಾಂಡಿಂಗ್ ಮಾಡುವ ಮೂಲಕ ತಮ್ಮ ಸಮಯಪ್ರಜ್ಞೆಯಿಂದಾಗಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.  
ಮಂಗಳವಾರ (ಸೆ.01) ಬೆಳಗ್ಗೆ 9:16ಕ್ಕೆ ಗೋವಾದಿಂದ ಹೊರಟಿದ್ದ '6E 2102' ಇಂಡಿಗೋ ವಿಮಾನವು ದಕ್ಷಿಣ ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಸುಮಾರು 14,000 ಅಡಿ ಎತ್ತರದಲ್ಲಿದ್ದಾಗ, ವಿಮಾನದ ಒಂದು ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದನ್ನು ಸೂಕ್ಷ್ಮವಾಗಿ ಅರಿತ ಪೈಲಟ್​, ಹೆಚ್ಚು ಸಮಯ ವ್ಯರ್ಥ ಮಾಡದೆ, ವಿಮಾನವನ್ನು ವಾಪಸ್ ಗೋವಾ ಏರ್​ಪೋರ್ಟ್​ ಕಡೆ ತಿರುಗಿಸಿ, ತುರ್ತು ಭೂಸ್ಪರ್ಶ ಮಾಡಿದ್ದಾರೆ. 
ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದಿದ್ದು, ಅವರನ್ನು ಬೋರ್ಡಿಂಗ್ ಏರಿಯಾದಲ್ಲಿ ತಂಗಲು ವ್ಯವಸ್ಥೆ ಮಾಡಲಾಯಿತು. ಫ್ಲೈಟ್​ನ ಮರುಪ್ರಯಾಣವನ್ನು ಮಧ್ಯಾಹ್ನ 3:30ಕ್ಕೆ ರೀ-ಶೆಡ್ಯೂಲ್ ಮಾಡಲಾಗಿದ್ದು, ಇಂಜಿನ್​ನ ಒಂದು ಭಾಗ ಫೆಲ್ಯೂರ್​ ಆಗಲು ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ,(ಏಜೆನ್ಸೀಸ್).