Rahul Gandhi | ವಿಪಕ್ಷ ನಾಯಕ ರಾಹುಲ್ ಗಾಂಧಿ 
ದೇಶ

Rahul Gandhi | ಮಹಾತ್ಮ ಗಾಂಧಿಯ ಹತ್ಯೆಯ ನಂತರ... RSS ಎಲ್ಲಾ ಸಂಸ್ಥೆಗಳನ್ನು ಕಬಳಿಸಲು ಪ್ರಯತ್ನಿಸುತ್ತಿದೆ; ರಾಹುಲ್​ ಗಾಂಧಿ ಆರೋಪ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಭಾರತೀಯ ಸಮಾಜದಲ್ಲಿರುವ ಮೂಲಭೂತ ತತ್ವವಾದ ಸಮಾನತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಮಂಗಳವಾರ (ಡಿ.09) ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಆರೋಪಿಸಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಗಾಂಧಿ, RSS ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬೇರೂರಿರುವ ವಿಶ್ವ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ. ಅವರು ಸಮಾನತೆಯಲ್ಲಿ ನಂಬಿಕೆ ಇಡುವುದಿಲ್ಲ, ಶ್ರೇಣೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಡುತ್ತಾರೆ ಎಂದು ಹೇಳಿದ್ದಾರೆ.
ಮುಂದೆವರೆದು ಮಾತನಾಡಿದ ಗಾಂಧಿ, ಮಹಾತ್ಮಾ ಗಾಂಧಿಯ ಹತ್ಯೆಯ ನಂತರ, ಮುಂದಿನ ಹಂತವು ಭಾರತದ ಸಂಸ್ಥೆಗಳನ್ನು ​ಆರ್​ಎಸ್​ಎಸ್​ ವಶಪಡಿಸಿಕೊಳ್ಳುತ್ತಿದೆ. ಅಲ್ಲದೆ, ಪ್ರಜಾಪ್ರಭುತ್ವದ ಪ್ರಮುಖ ಸ್ತಂಭಗಳು ಕ್ರಮೇಣ ಸ್ವಾಧೀನಪಡಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.
ದೇಶದ ಪ್ರಮುಖ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ಕೇಂದ್ರೀಕರಿಸುವ ಪ್ರಯತ್ನಗಳು ನೇರವಾಗಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಹಾನಿ ಮಾಡುತ್ತವೆ. ಅಲ್ಲದೆ, ಕೇಂದ್ರವು ಚುನಾವಣೆಗಳ ಸಮಗ್ರತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ರಾಹುಲ್​ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಖಾದಿ ಭಾರತದ ಜನರ ಅಭಿವ್ಯಕ್ತಿ; ರಾಹುಲ್ ಗಾಂಧಿ

ಮಹಾತ್ಮಾ ಗಾಂಧಿಯವರ ತತ್ವಶಾಸ್ತ್ರವನ್ನು ಪ್ರಸ್ತಾಪಿಸಿದರು. ಅಲ್ಲದೆ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಖಾದಿಯ ಸಾಂಕೇತಿಕ ಮತ್ತು ಸಾಂಸ್ಕೃತಿಕ ಮಹತ್ವ ಮತ್ತು ಇಂದಿಗೂ ಪ್ರಸ್ತುತವಾಗಿದೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಗಾಂಧಿ, ಮಹಾತ್ಮ ಗಾಂಧಿಯವರು ಖಾದಿಗೆ ಏಕೆ ಇಷ್ಟೊಂದು ಒತ್ತು ನೀಡಿದರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಖಾದಿ ಪರಿಕಲ್ಪನೆಯ ಸುತ್ತ ಅವರು ಸ್ವಾತಂತ್ರ್ಯ ಹೋರಾಟವನ್ನು ಏಕೆ ಮುನ್ನಡೆಸಿದರು? ಅವರು ಖಾದಿಯನ್ನು ಮಾತ್ರ ಏಕೆ ಧರಿಸಿದ್ದರು? ಅದು ಕೇವಲ ಬಟ್ಟೆಯಲ್ಲ, ಅದು ಭಾರತದ ಜನರ ಅಭಿವ್ಯಕ್ತಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತದ ಸಾಮಾಜಿಕ-ಆರ್ಥಿಕ ಅಡಿಪಾಯಗಳು ಮತ್ತು ಸ್ವಾವಲಂಬನೆಯ ಪಾತ್ರವಾಗಿದೆ. ಅಲ್ಲದೆ, ಸಮುದಾಯ-ಚಾಲಿತ ಉತ್ಪಾದನೆ ಮತ್ತು ಕಾರ್ಮಿಕರ ಘನತೆ, ಮಹಾತ್ಮಾ ಗಾಂಧಿಯವರು ಖಾದಿಯೊಂದಿಗೆ ಸಂಯೋಜಿಸಿದ ತತ್ವಗಳ ಬಗ್ಗೆ ವಿಶಾಲವಾದ ಪ್ರತಿಬಿಂಬದ ಭಾಗವಾಗಿತ್ತು ಎಂದು ರಾಹುಲ್​ ಹೇಳಿದ್ದಾರೆ,(ಏಜೆನ್ಸೀಸ್).