ತಮಿಳು ನಟ, ಟಿವಿಕೆ ಪಕ್ಷದ ನಾಯಕ ವಿಜಯ್  
ದೇಶ

ಎಕ್ಸಿಟ್​ ಪೋಲ್​ ಹೊರಬಿದ್ದ ಬೆನ್ನಲ್ಲೇ ವಿಜಯ್​ ಮೇಲೆ ಕಣ್ಣಿಟ್ಟ ಎಐಎಡಿಎಂಕೆ! ಟಿವಿಕೆ ಜೊತೆಗಿನ ಮಾತುಕತೆಗೆ ಸಿದ್ಧ

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ ಟಿವಿಕೆ ಮೂಲಕ ವಿಜಯ್ ಸಂಚಲನ
  • ಎಕ್ಸಿಟ್​ ಪೋಲ್​ ಹೊರಬಿದ್ದ ಬೆನ್ನಲ್ಲೇ ವಿಜಯ್ ಮೇಲೆ ಕಣ್ಣಿಟ್ಟ ಎಐಎಡಿಎಂಕೆ
  • ಡಿಎಂಕೆಗೆ ಸೋಲುಣಿಸಲು ಮೈತ್ರಿಯೇ ಬೆಸ್ಟ್​?
ತಮಿಳುನಾಡು: ಪಂಚರಾಜ್ಯ ಚುನಾವಣೆಯ ಭಾಗವಾಗಿ ತಮಿಳುನಾಡಿನಲ್ಲಿ ನಡೆದಿದ್ದ ವೋಟಿಂಗ್​ನ ಎಕ್ಸಿಟ್​ ಪೋಲ್​ ಇದೀಗ ಹೊರಬಿದ್ದಿದ್ದು, ಡಿಎಂಕೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮುನ್ಸೂಚನೆಗಳು ಬಲವಾಗಿ ಸಿಕ್ಕಿವೆ. ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂಬುದರ ಕುರಿತು ಸದ್ಯ ಸಮೀಕ್ಷೆಗಳು ಯಾವುದೇ ಸ್ಪಷ್ಟ ಅಭಿಪ್ರಾಯವನ್ನು ನೀಡದಿರುವುದು ಗಮನಾರ್ಹ.
ಕೆಲವು ಎಕ್ಸಿಟ್​ ಪೋಲ್​ ಸಮೀಕ್ಷೆಗಳು ತಮಿಳುನಾಡಿನಲ್ಲಿ ಮಗದೊಮ್ಮೆ ಡಿಎಂಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಒಂದು ಅಥವಾ ಎರಡು ಮಾತ್ರ ಎಐಎಡಿಎಂಕೆ ಗೆಲುವು ಸಾಧಿಸಬಹುದು ಎಂದಿವೆ. ಆದಾಗ್ಯೂ, ಪ್ರಮುಖ ಎಕ್ಸಿಟ್​ ಪೋಲ್​ ಕಂಪನಿ ಆಕ್ಸಿಸ್ ಮೈ ಇಂಡಿಯಾ, ತಮಿಳಿನ ಸ್ಟಾರ್ ನಟ ವಿಜಯ್ ಅವರ ಟಿವಿಕೆ ಪಕ್ಷವು ಈ ಬಾರಿ ತಮಿಳುನಾಡಿನಲ್ಲಿ 98ರಿಂದ 120 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದೆ. ಡಿಎಂಕೆ ಮೈತ್ರಿಕೂಟ 92ರಿಂದ 110 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಎಐಎಡಿಎಂಕೆ + ಬಿಜೆಪಿ ಮೈತ್ರಿಕೂಟ 22ರಿಂದ 32 ಸ್ಥಾನಗಳನ್ನು ಪಡೆಯುಬಹುದು ಎಂದು ಹೇಳಿದೆ.
ಈ ಸಂದರ್ಭದಲ್ಲಿ, ತಮಿಳುನಾಡಿನಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿವೆ. ವಿಜಯ್ ಕಿಂಗ್ ಅಥವಾ ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ಇದನ್ನೇ ಗೆಲುವಿನ ಅಸ್ತ್ರವನ್ನಾಗಿ ನೋಡಲು ಎಐಎಡಿಎಂಕೆ ಮುಂದಾಗಿದೆ. ವಿಜಯ್ ಅವರ ಪಕ್ಷದೊಂದಿಗೆ ಸಂಪರ್ಕಿಸಲು ದಾಪುಗಾಲಿಟ್ಟಿದೆ ಎಂದು ವರದಿಯಾಗಿದೆ. ಟಿವಿಕೆ ಜೊತೆ ಚರ್ಚೆಗಳನ್ನು ನಡೆಸುವ ಮೂಲಕ ಮೈತ್ರಿ ಮಾಡಿಕೊಳ್ಳುವ ಉದ್ದೇಶ ಎಐಎಡಿಎಂಕೆಯದ್ದು ಎಂದು ಹೇಳಲಾಗುತ್ತಿದೆ.
ಆಕ್ಸಿಸ್ ಮೈ ಇಂಡಿಯಾ ಪ್ರಕಾರ, ಸಿಎಂ ರೇಸ್​ನಲ್ಲಿರುವ ವಿಜಯ್ ಶೇ.35ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶೇ.35ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಯುವ ಮತದಾರರಲ್ಲಿ ವಿಜಯ್ ಅವರಿಗೆ ಬಲವಾದ ಬೆಂಬಲ ದೊರೆತಿದೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ವಿಜಯ್‌ಗೆ ಹೆಚ್ಚು ಮತ ಹಾಕಿದ್ದಾರೆ ಎಂದು ಸಮೀಕ್ಷೆಯು ಅಚ್ಚರಿ ಸಂಗತಿಯನ್ನು ರಿವೀಲ್​ ಮಾಡಿದೆ,(ಏಜೆನ್ಸೀಸ್).