Mahua Moitra | ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ 
ದೇಶ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಕಾನೂನು ನೋಟಿಸ್ ಕಳುಹಿಸಿದ ಅದಾನಿ ಗ್ರೂಪ್ | Mahua Moitra

ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರ ಬಗ್ಗೆ ಅವಹೇಳನಕಾರಿ ಮತ್ತು ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಅದಾನಿ ಗ್ರೂಪ್ ಕಾನೂನು ನೋಟಿಸ್ ಕಳುಹಿಸಿದೆ.

ನವದೆಹಲಿ: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರ ಬಗ್ಗೆ ಅವಹೇಳನಕಾರಿ ಮತ್ತು ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಅದಾನಿ ಗ್ರೂಪ್ ಕಾನೂನು ನೋಟಿಸ್ ಕಳುಹಿಸಿದೆ.

ಗುರುವಾರ(ನ. 19) ಪ್ರಧಾನಿ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನೊಳಗೊಂಡ ಕಾರ್ಟೂನ್​ ಒಂದನ್ನು ಹಂಚಿಕೊಂಡ ಹಿನ್ನೆಲೆ ಮಹುವಾ ಮೊಯಿತ್ರಾ ಅವರಿಗೆ ಅದಾನಿ ಗ್ರೂಪ್ ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ 24 ಗಂಟೆಯೊಳಗೆ ಅದನ್ನು ಡಿಲಿಟ್ ಮಾಡುವಂತೆ ಕೇಳಿದೆ.

ಕಾನೂನು ಸಂಸ್ಥೆ AQUILAW ನೋಟಿಸ್ ನೀಡಿದ್ದು, ಅದರಲ್ಲಿ ಕಾರ್ಟೂನ್ ಆಕ್ಷೇಪಾರ್ಹವಾಗಿದ್ದು, ನಮ್ಮ ಕಕ್ಷಿದಾರರ ಅಧ್ಯಕ್ಷರು ಗೌರವಾನ್ವಿತ ಪ್ರಧಾನ ಮಂತ್ರಿಯವರ ಕಚೇರಿಯ ಮೇಲೆ ಅನುಚಿತ ಮತ್ತು ಅನಗತ್ಯ ಪ್ರಭಾವ ಬೀರುತ್ತಿದ್ದಾರೆ ಎಂದು ಪರೋಕ್ಷವಾಗಿ ಅಪಹಾಸ್ಯ ಮಾಡುವ ಮತ್ತು ದೂಷಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ.

ಇಂತಹ ದುರುದ್ದೇಶಪೂರಿತ ಚಿತ್ರಣವು ಕೇವಲ ಆಕ್ರಮಣಕಾರಿಯಲ್ಲ, ಬದಲಿಗೆ ಅವರ ವೈಯಕ್ತಿಕ ಘನತೆ, ವೃತ್ತಿಪರ ಸಮಗ್ರತೆ ಮತ್ತು ಖ್ಯಾತಿಯ ಮೇಲೆ ಉದ್ದೇಶಪೂರ್ವಕ ದಾಳಿಯಾಗಿದೆ.ಇದು ಅನುಚಿತ ರಾಜಕೀಯ ಪ್ರೋತ್ಸಾಹ ಮತ್ತು ಪ್ರಭಾವದ ಮಾನಹಾನಿಕರ ನಿರೂಪಣೆಯನ್ನು ಪ್ರಚಾರ ಮಾಡುವ ತೆಳುವಾದ ಮರೆಮಾಚುವ ಪ್ರಯತ್ನವಾಗಿದೆ, ಅಂತಹ ಪ್ರಚೋದನೆಗಳನ್ನು ಸಮರ್ಥಿಸುವ ಸಾಮರ್ಥ್ಯವಿರುವ ಒಂದೇ ಒಂದು ವಿಶ್ವಾಸಾರ್ಹ ಸಂಗತಿಯನ್ನು ಗುರುತಿಸದೆ ಸಾಂವಿಧಾನಿಕ ಜವಾಬ್ದಾರಿಗಳನ್ನು ಹೊಂದಿರುವ ಹಾಲಿ ಸಂಸದರು ಇಂತಹ ಬೇಜವಾಬ್ದಾರಿಯುತ ಸಾರ್ವಜನಿಕ ಚರ್ಚೆಗೆ ಮುಂದಾಗುವುದು ವಿಶೇಷವಾಗಿ ಖಂಡನೀಯ ಎಂದು ತಿಳಿಸಲಾಗಿದೆ.

ಇನ್ನೂ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ, ನಾನು ಪೋಸ್ಟ್ ಮಾಡಿದ ಕಾರ್ಟೂನ್ ಜಿ-ಭಾಯ್‌ಗೆ ಇಷ್ಟವಾಗಲಿಲ್ಲ, ಹಾಗಾಗಿ ಅವರು ನನಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. …. ಆದರೆ ಜಿ-ಭಾಯ್, ಅವನು ಕುಳಿತಿರೋದು ನಿಮ್ಮ ತೊಡೆಯ ಮೇಲೆಯೇನಾ - ಅಬ್ಬಾ! ಎಂದು ಪೋಸ್ಟ್ ಮಾಡಿದ್ದಾರೆ (ಏಜೆನ್ಸೀಸ್).