ದಳಪತಿ ವಿಜಯ್ ಮತ್ತು ನಟಿ ತ್ರಿಶಾ
ಚೆನ್ನೈ: 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಅದ್ಭುತ ಗೆಲುವು ಸಾಧಿಸುವ ನಿಟ್ಟಿನಲ್ಲಿರುವ ಸೂಪರ್ ಸ್ಟಾರ್ ವಿಜಯ್ ನೇತೃತ್ವದ ವಿಜಯ್ ನೇತೃತ್ವದ ಟಿವಿಕೆ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2004ರಲ್ಲಿ ತ್ರಿಷಾ ನೀಡಿದ ಸಂದರ್ಶನವೊಂದರಲ್ಲಿ ಹಂಚಿಕೊಂಡ ಆಶಯವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ತ್ರಿಷಾಗೆ ಸಂದರ್ಶಕನೊಬ್ಬ ನೀವು ಏನೇನು ಆಗಬೇಕೆಂದು ಬಯಸುತ್ತೀರಿ ಎಂದು ಕೇಳಿದಾಗ, ತ್ರಿಶಾ ಆತ್ಮವಿಶ್ವಾಸದಿಂದ ನಾನು ಸಿಎಂ ಆಗಬೇಕು ಎಂಬ ಆಸೆ ಇದೆ. ನೋಡ್ತೀರಿ ಮುಂದಿನ 10 ವರ್ಷಗಳಲ್ಲಿ ನಾನು ಸಿಎಂ ಆಗ್ತೀನಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಟ ವಿಜಯ್ ಜೊತೆ ತ್ರಿಷಾ ಹೆಸರು ಕೇಳಿ ಬರುತ್ತಿದ್ದು, ಅವರಿಬ್ಬರು ಮದುವೆಯಾಗಲಿದ್ದಾರೆ ಎಂದು ಸುದ್ದಿ ಹಬ್ಭಿದೆ. ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ, ತನ್ನ ಪತಿಗೆ ಖ್ಯಾತ ನಟಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಘಟನೆಗಳ ನಡುವೆ ತ್ರಿಷಾ ವಿಡಿಯೋಗೆ ಅವರ ಅಭಿಮಾನಿಗಳು ತರಹವೇರಿ ಕಮೆಂಟ್ಗಳನ್ನು ಮಾಡ್ತಿದ್ದಾರೆ.
ಅನೇಕರು ತ್ರಿಷಾ ಅವರು ಜಯಲಲಿತಾ ಅವರಂತೆಯೇ ಮುಖ್ಯಮಂತ್ರಿಯಾಗುವ ಬಯಕೆಯನ್ನು ಹೊಂದಿದ್ದಾರೆ ಎಂದು ಹೇಳಿದ್ರೆ, ಕೆಲವರು ತಮ್ಮ ಮಗಳನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ತ್ರಿಷಾ ಅವರ ತಾಯಿಯ ಆಸೆ ಮಾತ್ರ ಎಂದು ಕಮೆಂಟ್ ಮಾಡ್ತಿದ್ದಾರೆ (ಏಜೆನ್ಸೀಸ್).