ವಿಜಯ್​ ಪ್ರಮಾಣ ವಚನ ವೇಳೆ ನಟಿ ತ್ರಿಷಾ ಭಾವುಕ 
ದೇಶ

ವಿಜಯ್ ಪ್ರಮಾಣ ವಚನ ಸ್ವೀಕಾರ; 'ಜನ ನಾಯಗನ್​' ಭಾಷಣ ವೇಳೆ ತ್ರಿಷಾ ಭಾವುಕ! ವಿಡಿಯೋ ವೈರಲ್​

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸ ಬರೆದ ನಟ ವಿಜಯ್
  • ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ವಿಜಯ್​ ಪ್ರಮಾಣವಚನ ಸ್ವೀಕಾರ
  • ವಿಜಯ್​ ಪ್ರಮಾಣ ವಚನ ಸ್ವೀಕಾರ ವೇಳೆ ತ್ರಿಷಾ ಭಾವುಕ
Actor Vijay: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್​ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಹೊಸ ಅಧ್ಯಾಯ ಬರೆದಿದ್ದು ಬಹುತೇಕರಿಗೆ ಗೊತ್ತೇ ಇದೆ. ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದು, ಚೊಚ್ಚಲ ಪ್ರಯತ್ನದಲ್ಲೇ ದಾಖಲೆಯ ಗೆಲುವು ಸಾಧಿಸಿದ ವಿಜಯ್​, ಇಂದು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರು.
ಟಿವಿಕೆ ಮುಖ್ಯಸ್ಥ ಮತ್ತು ನಟ ಸಿ. ಜೋಸೆಫ್​ ವಿಜಯ್ ಮುಖ್ಯಮಂತ್ರಿಯಾಗಿ ಇಂದು (ಮೇ 10 ) ಪ್ರಮಾಣ ವಚನ ಸ್ವೀಕರಿಸಿದ ಕ್ಷಣ ನಟನ ಅಭಿಮಾನಿಗಳಲ್ಲಿ ಮತ್ತು ತಮಿಳುನಾಡಿನ ಜನತೆಯ ಸಂಭ್ರಮಕ್ಕೆ ಸಾಕ್ಷಿಯಾಯಿತು. ವಿಜಯ್​ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಸಮಾರಂಭಕ್ಕೆ ರಾಜಕೀಯ ಗಣ್ಯರಿಂದ ಹಿಡಿದು ಅನೇಕರು ಭಾಗಿಯಾಗಿದ್ದರು. ವಿಜಯ್​ ಅವರ ಪೋಷಕರು, ಕುಟುಂಬಸ್ಥರ ಮಧ್ಯೆ ತಮಿಳು ನಟಿ ತ್ರಿಷಾ ಕೃಷ್ಣನ್ ಕೂಡ ಪ್ರತ್ಯಕ್ಷವಾಗಿದ್ದು ಹಲವರ ಅಚ್ಚರಿಗೆ ಕಾರಣವಾಯಿತು.
ಚೆಂದದ ಸೀರೆ ತೊಟ್ಟು, ಮಲ್ಲಿಗೆ ಹೂ ಮುಡಿದು ತಮ್ಮ ಬಹುಕಾಲದ ಸ್ನೇಹಿತ ವಿಜಯ್​ ಅವರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ ನಟಿ, ಮಾಧ್ಯಮಗಳು ಮತ್ತು ನಟನ ಅಭಿಮಾನಿಗಳ ಗಮನ ಸೆಳೆದರು. ಅತ್ತ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್​ ವಿಜಯ್​ ಸದ್ದು ಮಾಡಿದರೆ, ಇತ್ತ ಸ್ಟಾರ್​ ನಟಿ ಸೋಷಿಯಲ್​ ಮೀಡಿಯಾಗಳಲ್ಲಿ ನೆಟ್ಟಿಗರ ಹುಬ್ಬೇರಿಸಿದರು. ಇದೇ ಸಂದರ್ಭದಲ್ಲಿ ತ್ರಿಷಾ ಭಾವುಕರಾದ ದೃಶ್ಯವೊಂದು ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ತಮ್ಮ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ವಿಜಯ್​ ಅವರು ತಮಿಳುನಾಡಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ನಟಿ ಭಾವುಕರಾದರು. ಕಣ್ಣೀನಲ್ಲಿ ತುಂಬಿದ್ದ ನೀರು ಕೆಳಗೆ ಜಾರದಂತೆ ನೋಡಿಕೊಂಡ 'ಗಿಲ್ಲಿ' ನಟಿ, ಈ ಮೂಲಕ ಬಹುಕಾಲದ ಸ್ನೇಹಿತನಿಗೆ ದೊಡ್ಡ ಬೆಂಬಲ ಸೂಚಿಸಿದ್ದು ಗಮನಾರ್ಹ. ತ್ರಿಷಾ ಭಾವುಕ ಕ್ಷಣಗಳು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).