Actor Vishal: ತಮಿಳುನಾಡು ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ರಾಜ್ಯಾದ್ಯಂತ ದೇವಾಲಗಳ, ಶಾಲೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗಿನ 717 ಮದ್ಯದಂಗಡಿಯನ್ನು ಬಂದ್ ಮಾಡುವ ಮೂಲಕ ಸರ್ಕಾರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಜಯ್ ನಿರ್ಧಾರಕ್ಕೆ.. ವಿಶಾಲ್ ಮೆಚ್ಚುಗೆ
ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಕ್ಕೆ ಈ ಕಠಿಣ ಕ್ರಮವನ್ನು ಜಾರಿಗೆ ತಂದಿದ್ದು, ನೂತನ ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ವಿಶಾಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಪೊಸ್ಟ್ ಹಂಚಿಕೊಂಡಿರುವ ನಟ ವಿಶಾಲ್, ಅದರಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೇ ನಿಮಗೆ ಅಭಿನಂದನೆಗಳು, ಶಾಲೆಗಳ ಸಮೀಪವಿರುವ 717 ಮದ್ಯದಂಗಡಿಗಳನ್ನು ಮುಚ್ಚುವ ನಿಮ್ಮ ನಿರ್ಧಾರಕ್ಕೆ ಧನ್ಯವಾದಗಳು. ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ಕಿರುಕುಳಕ್ಕೆ ನೀವು ಅಂತ್ಯ ಹಾಡಿದ್ದೀರಿ, ನನಗೆ ತಿಳಿದಿರುವ ಆರ್.ಕೆ. ನಗರದ ವಿದ್ಯಾರ್ಥಿನಿಯೊಬ್ಬಳು ಪ್ರತಿದಿನ ಆ ಟಾಸ್ಮ್ಯಾಕ್ (TASMAC) ಮದ್ಯದಂಗಡಿಯನ್ನು ದಾಟಿ ಮನೆ ತಲುಪಲು ಪಡುತ್ತಿದ್ದ ಮಾನಸಿಕ ಒತ್ತಡದ ಬಗ್ಗೆ ದೂರುತ್ತಿದ್ದಳು, ಈಗ ಅವಳಿಗೂ ಅದರಿಂದ ಬಿಡುಗಡೆ ಸಿಕ್ಕಿದೆ.
ನಮ್ಮ ಮುಖ್ಯಮಂತ್ರಿಯವರ ಈ ನಿರ್ಧಾರವು ನನ್ನನ್ನೂ ಒಳಗೊಂಡಂತೆ ಅನೇಕರ ಮುಖದಲ್ಲಿ ಶಾಶ್ವತವಾದ ನಗು ತಂದಿದ್ದು, ಕಿರುಕುಳದಿಂದ ಅನೇಕರಿಗೆ ಮುಕ್ತಿ ಸಿಕ್ಕಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಸದನ ಪ್ರವೇಶಿಸದಂತೆ ಟಿವಿಕೆ ಶಾಸಕನಿಗೆ ನಿಷೇಧ!
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ಶ್ರೀನಿವಾಸ ಸೇತುಪತಿ (Srinivasa Sethupathi) ವಿಶ್ವಾಸಮತ ಸೇರಿದಂತೆ ಸದನದ ಯಾವುದೇ ಕಲಾಪಗಳಲ್ಲಿ ಭಾಗವಹಿಸದಂತೆ ನ್ಯಾಯಾಲಯ ನಿಷೇಧ ಹೇರಿದೆ. ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಮತ್ತು ಎನ್. ಸೆಂಥಿಲ್ ಕುಮಾರ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ಶಿವಗಂಗಾ ಜಿಲ್ಲೆಯ ತಿರುಪತ್ತೂರು ಕ್ಷೇತ್ರದಲ್ಲಿ ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಸೋತಿದ್ದ ಡಿಎಂಕೆ ಮಾಜಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅರ್ಜಿ ಸಲ್ಲಿಸಿದ್ದು, ಕ್ಷೇತ್ರದ ಒಂದು ಅಂಚೆ ಮತಪತ್ರವನ್ನು ಅಧಿಕಾರಿಗಳು ತಪ್ಪಾಗಿ ಬೇರೆ ಕ್ಷೇತ್ರಕ್ಕೆ ವರ್ಗಾಯಿಸಿ, ಅದಾದ ಬಳಿಕ ಅದನ್ನು ತಿರಸ್ಕರಿಸಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ. ಈ ಗೊಂದಲ ಬಗೆಹರಿಯುವವರೆಗೆ ಸೇತುಪತಿ ಶಾಸಕರಾಗಿ ಕಾರ್ಯನಿರ್ವಹಿಸದಂತೆ ತಡೆಯಬೇಕು ಎಂದು ಪೆರಿಯಕರುಪ್ಪನ್ ನ್ಯಾಯಾಲಯವನ್ನು ಕೋರಿದ್ದರು.
ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಅವರ ದೊಡ್ಡ ಗೆಲುವು
ವಿಜಯ್ ತಮಿಳಗ ವೆಟ್ರಿ ಕಳಗಂ (ಟಿವಿಕೆ), ವಿಧಾನ ಸಭೆಯ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಟಿವಿಕೆ ಬಹುಮತಕ್ಕೆ 118 ಅಂಕಗಳ ಕೊರತೆಯನ್ನು ಅನುಭವಿಸಿದರೂ, ಐದು ಸ್ಥಾನಗಳನ್ನು ಪಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ತಕ್ಷಣದ ಬೆಂಬಲವನ್ನು ನೀಡಿತು. ನಂತರ, ಭಾರತೀಯ ಕಮ್ಯುನಿಸ್ಟ್ ಪಕ್ಷ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ವಿದುತಲೈ ಚಿರುತೈಗಲ್ ಕಚ್ಚಿ ಮತ್ತು ಭಾರತೀಯ ಯೂನಿಯನ್ ಮುಸ್ಲಿಂ ಲೀಗ್‌ನಿಂದ ಬೆಂಬಲ ದೊರೆಯಿತು (ಏಜೆನ್ಸೀಸ್).