ತೆಲುಗು ನಟ ಶಿವಾಜಿ 
ದೇಶ

ನಟಿಯರ ಉಡುಗೆ ಬಗ್ಗೆ ಆಕ್ಷೇಪರ್ಹಾ ಹೇಳಿಕೆ: ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾದ ನಟ ಶಿವಾಜಿ | Actor Shivaji

ಹೈದರಾಬಾದ್: ನಟಿಯರ ಉಡುಗೆ ತೊಡುಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ತೆಲುಗು ನಟ ಶಿವಾಜಿ ಇಂದು(ಡಿ. 27) ಹೈದರಾಬಾದ್​ನ ಮಹಿಳಾ ಆಯೋಗ ಮುಂದೆ ವಿಚಾರಣೆಗೆ ಹಾಜರಾಗಿದ್ದು, ತಮ್ಮ ಹೇಳಿಕೆಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ.
ನಟಿಯರ ಬಗ್ಗೆ ಶಿವಾಜಿ ಆಕ್ಷೇಪಾರ್ಹ ಹೇಳಿಕೆಗಳು ಟಾಲಿವುಡ್​ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿವೆ. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದ ಮಹಿಳಾ ಆಯೋಗವು ಶಿವಾಜಿಗೆ ವಿವರಣೆ ನೀಡುವಂತೆ ನೋಟಿಸ್ ನೀಡಿತ್ತು. ಈ ಹಿನ್ನೆಲೆ ಶಿವಾಜಿಯವರು ಇಂದು ಆಯೋಗದ ಕಚೇರಿಗೆ ಭೇಟಿ ನೀಡಿದ ಹೇಳಿಕೆ ದಾಖಲಿಸಿದ್ದಾರೆ.
ಮಹಿಳಾ ಆಯೋಗದ ಮುಂದೆ ಇಂತಹ ಮಾತುಗಳನ್ನು ಮತ್ತೆ ಮಾತನಾಡದಂತೆ ನೋಡಿಕೊಳ್ಳುವುದಾಗಿ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ದಂಡೋರ ಫ್ರೀ ರೀಲೀಸ್ ಇವೆಂಟ್​ನಲ್ಲಿ ನಟಿಯರ ಉಡುಗೆ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದರು.
ಮಹಿಳೆಯರ ಸೌಂದರ್ಯ ಸೀರೆಯಲ್ಲೇ ಇರೋದು. ದೇಹ ಕಾಣಿಸದಂತೆ ಪೂರ್ತಿ ಮುಚ್ಚುವ ಬಟ್ಟೆಗಳಲ್ಲಿದೆ. ದೇಹ ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ ಎಂದಿದ್ದರು. ಮುಂದುವರೆದು, ಇತ್ತೀಚೆಗೆ ತೆಲುಗಿನಲ್ಲಿ ಅತಿಹೆಚ್ಚು ಟ್ರೋಲ್ ಆದ ಶಬ್ದ(ಸಾಮಾನ್ಲು ಪದ ಬಳಸಿ), ದೇಹದ ಭಾಗ ಕಾಣುವಂತೆ ಬಟ್ಟೆ ಧರಿಸಿದ್ರೆ ಅದರಲ್ಲಿ ಯಾವುದೇ ಮೌಲ್ಯವೇ ಇರೋದಿಲ್ಲ. ಜನರು ನೋಡಿ ನಗುತ್ತಾರೆ. ಗ್ಲಾಮರ್​ಗೆ ಗಡಿಗಳು ಇರಬೇಕು. ಚಿಕ್ಕ ಬಟ್ಟೆ ಧರಿಸಿ ದೇಹದ ಅಂಗಗಳನ್ನು ತೋರಿಸುವುದು ಸರಿಯಲ್ಲ ಎಂದಿದ್ದರು.
ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಗಾಯಕಿ ಚಿನ್ಮಯಿ ಶ್ರೀಪಾದ, ನಟಿ ಅನಸೂಯ ಭಾರದ್ವಾಜ್ ಸೇರಿ ಅನೇಕರು ಟೀಕಿಸಿದ್ದರು. ಬಳಿಕ ತಮ್ಮ ಮಾತುಗಳನ್ನು ಹಿಂಪಡೆದು ಶಿವಾಜಿ ಕ್ಷಮೆ ಕೇಳಿದ್ದರು (ಏಜೆನ್ಸೀಸ್).