ದೇಶ

ಮಿಲಿಟರಿ ತರಬೇತಿ ಸಮಯದಲ್ಲಿ ಅವಘಡ: ಆಕಸ್ಮಿಕವಾಗಿ ಸೇನಾ ಟ್ಯಾಂಕ್ ಹರಿದು ಇಬ್ಬರು ಸೈನಿಕರು ದುರ್ಮರಣ | army tank

ಹರಿಯಾಣದ ಹಿಸಾರ್​ನಲ್ಲಿರುವ ಭೋಜರಾಜ್ ಗ್ರಾಮದಲ್ಲಿ ಮಿಲಿಟರಿ ತರಬೇತಿ ಸಮಯದಲ್ಲಿ ಭಾರೀ ಅವಘಡ ನಡೆದಿದ್ದು, ಆಕಸ್ಮಿಕವಾಗಿ ಸೇನಾ ಟ್ಯಾಂಕ್ ಹರಿದು ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾನುವಾರ(ನ. 22) ವರದಿಯಾಗಿದೆ.

ಹಿಸಾರ್: ಹರಿಯಾಣದ ಹಿಸಾರ್​ನಲ್ಲಿರುವ ಭೋಜರಾಜ್ ಗ್ರಾಮದಲ್ಲಿ ಮಿಲಿಟರಿ ತರಬೇತಿ ಸಮಯದಲ್ಲಿ ಭಾರೀ ಅವಘಡ ನಡೆದಿದ್ದು, ಆಕಸ್ಮಿಕವಾಗಿ ಸೇನಾ ಟ್ಯಾಂಕ್ ಹರಿದು ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾನುವಾರ(ನ. 22) ವರದಿಯಾಗಿದೆ.

ಈ ಘಟನೆ ಶನಿವಾರ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ತರಬೇತಿಯ ಸಮಯದಲ್ಲಿ ಧೂಳು ಎದ್ದಿದ್ದರಿಂದ ಟ್ಯಾಂಕ್ ಚಾಲಕನ ದೃಷ್ಟಿ ಮಸುಕಾಗಿ ಎದುರಿಗಿದ್ದ ಕಾಣದೇ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ತರಬೇತಿಯ ಸಮಯದಲ್ಲಿ ಧೂಳು ಎದ್ದಿದ್ದರಿಂದ ಟ್ಯಾಂಕ್ ಚಾಲಕನ ದೃಷ್ಟಿ ಮಸುಕಾಗಿತ್ತು. ಪರಿಣಾಮವಾಗಿ, ಟ್ಯಾಂಕ್ ಮುಂಭಾಗದಲ್ಲಿ ನಿಂತಿದ್ದ ಉತ್ತರ ಪ್ರದೇಶದ ಶಾಮ್ಲಿ ನಿವಾಸಿ ನಾಯಕ್ ಮನೀಶ್ ಕುಮಾರ್ ಮತ್ತು ಬುಡೌನ್‌ನ ನಾಯಕ್ ಅಂಕುಶ್ ಕುಮಾರ್ ಅವರ ಮೇಲೆ ಹರಿದಿದೆ ಎಂದು ತಿಳಿಸಿದ್ದಾರೆ.

ಅವರನ್ನು ತಕ್ಷಣ ಹಿಸಾರ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯಕೀಯ ಸಿಬ್ಬಂದಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಘಟನೆಯ ಬಗ್ಗೆ ಹಿರಿಯ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).