T20 World Cup Squad | ಭಾರತೀಯ ತಂಡದ ಆಟಗಾರರು
T20 World Cup Squad: ಫೆಬ್ರುವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ 15 ಸದಸ್ಯರ ತಂಡ ಪ್ರಕಟವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಹಾಲಿ ಚಾಂಪಿಯನ್ ಭಾರತ ಸಜ್ಜಾಗಿದೆ.
ಟೀಮ್ ಇಂಡಿಯಾ ಉಪನಾಯಕ ಶುಭಮನ್ ಗಿಲ್ರನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದು, ಕಿವಿಸ್ ವಿರುದ್ಧದ ಐದು ಪಂದ್ಯಗಳ ಸರಣಿಗೂ ಇದೇ ತಂಡ ಕಣಕ್ಕಿಳಿಯಲಿದೆ. ಅಕ್ಷರ್ ಪಟೇಲ್ಗೆ ಉಪನಾಯಕನ ಕಟ್ಟಿದ್ದು, ಇಬ್ಬರು ವಿಕೆಟ್ ಕೀಪರ್ಗಳಿದ್ದಾರೆ.
ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದು, ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಪಕ್ಕಾ ಆಗಿದೆ, ಇಶಾನ್ ಕಿಶನ್ ತಂಡದಲ್ಲಿ ಎರಡನೇ ಆಯ್ಕೆಯ ಕೀಪರ್ ಓಪನರ್ ಆಗಿ ಆಯ್ಕೆ ಮಾಡಲಾಗಿದೆ. ಈ ನಡುವೆ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಭಾರತೀಯ ತಂಡದಲ್ಲಿ ಕೆಲವು ಹೊಸ ಮುಖಗಳು ಕೂಡ ಇವೆ.
ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಲಿರುವ 5 ಆಟಗಾರರು
1 - ಅಭಿಷೇಕ್ ಶರ್ಮಾ: ಆಕ್ರಮಣಕಾರಿ ಆರಂಭಿಕ ಆಟಗಾರ ಎಂದೇ ಸದ್ದು ಮಾಡಿರುವ ಅಭಿಷೇಕ್ ಶರ್ಮಾ ತಮ್ಮ ಮೊದಲ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. 2024 ರಲ್ಲಿ ಜಿಂಬಾಬ್ವೆ ವಿರುದ್ಧದ ಪಾದಾರ್ಪಣೆ ಮಾಡಿ, ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಶರ್ಮಾ, 2025 ರ ಟಿ 20 ಕ್ರಿಕೆಟ್‌ನಲ್ಲಿ 1602 ರನ್ ಗಳಿಸಿದ್ದಾರೆ.
2 - ತಿಲಕ್ ವರ್ಮಾ: ತಿಲಕ್ ವರ್ಮಾ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿರುವ ಮತ್ತೊಬ್ಬ ಆಟಗಾರನಾಗಿದ್ದು, ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದ್ದಾರೆ.
3 - ರಿಂಕು ಸಿಂಗ್: ಅಮೆರಿಕದಲ್ಲಿನ ಸವಾಲಿನ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಹೆಚ್ಚುವರಿ ಸ್ಪಿನ್ನರ್ ಅಗತ್ಯವಿದ್ದರಿಂದ, 2024 ರ ಟಿ 20 ವಿಶ್ವಕಪ್ ತಂಡದಲ್ಲಿ ರಿಂಕು ಸಿಂಗ್ ಸ್ಥಾನ ಕಳೆದುಕೊಂಡರು. ರಿಂಕು 2023 ರಿಂದ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದರು, 2024 ರ ವಿಶ್ವಕಪ್‌ಗೆ ಆಯ್ಕೆಯಾಗಿರಲಿಲ್ಲ .
4 - ವಾಷಿಂಗ್ಟನ್ ಸುಂದರ್: ಭಾರತದ 15 ಸದಸ್ಯರ ತಂಡದಲ್ಲಿ ಸುಂದರ್ ಕೂಡ ಸ್ಥಾನ ಪಡೆದುಕೊಂಡಿದ್ದು, ಮೊದಲ ವಿಶ್ವಕಪ್ ಆಡಲು ಎದುರು ನೋಡುತ್ತಿದ್ದಾರೆ. 2017 ರಲ್ಲೇ T20I ಮಾದರಿಗೆ ಪಾದಾರ್ಪಣೆ ಮಾಡಿರುವ ವಾಷಿ, ಇಲ್ಲಿಯವರೆಗೆ ವಿಶ್ವಕಪ್ ಆಡಿರಲಿಲ್ಲ.
5 - ಹರ್ಷಿತ್ ರಾಣಾ: ವೇಗದ ಬೌಲಿಂಗ್ ಆಲ್‌ರೌಂಡರ್ ಹರ್ಷಿತ್ ರಾಣಾ ಸಹ ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿದ್ದು, ರಾಣಾ ಇದೇ ವರ್ಷ ಇಂಗ್ಲೆಂಡ್ ವಿರುದ್ಧ ಟಿ20ಐಗೆ ಪಾದಾರ್ಪಣೆ ಮಾಡಿದ್ದರು. ತಂಡ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಬ್ಯಾಟಿಂಗ್ ಮೂಲಕವೂ ರಾಣಾ ನೆರವಾಗಿದ್ದಾರೆ.
2026 ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (WK), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ , ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ , ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್ , ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್(ಏಜೆನ್ಸೀಸ್).