30 ಲಕ್ಷ ಮತದಾರರಿಗೆ ಓಟ್ ಮಾಡಲು ಅವಕಾಶವೇ ನೀಡಿಲ್ಲ : ಅಭಿಷೇಕ್ ಬ್ಯಾನರ್ಜಿ
- ಪಶ್ಚಿಮ ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ
- 30 ಲಕ್ಷ ಮತದಾರರಿಗೆ ಓಟ್ ಮಾಡಲು ಅವಕಾಶವೇ ನೀಡಿಲ್ಲ : ಅಭಿಷೇಕ್ ಬ್ಯಾನರ್ಜಿ
- ನಮಗೆ ಇವಿಎಮ್ ಮೇಲೆ ನಂಬಿಕೆಯಿಲ್ಲ; ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ: ಟಿಎಂಸಿ ಸಂಸದ
ಪಶ್ಚಿಮ ಬಂಗಾಳ: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿದ ಭಾರತೀಯ ಜನತಾ ಪಕ್ಷದ ಸುವೇಂದು ಅಧಿಕಾರಿ ಶನಿವಾರ (ಮೇ.9) ರಂದು ರಾಜ್ಯದ ಮುಖ್ಯಮಂತ್ರುಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆದರೆ ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಟಿಎಮ್ಸಿ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee on Bengal Election) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
30 ಲಕ್ಷ ಜನರಿಗೆ ಮತದಾನ ಮಾಡಲು ಬಿಡಲೇ ಇಲ್ಲ!
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ಕುರಿತು ತಮ್ಮ ಎಕ್ಸ್ (ಟ್ವಿಟರ್) ನಲ್ಲಿ ಬೆರೆದುಕೊಂಡಿರುವ ಅಭಿಷೇಕ್ ಬ್ಯಾನರ್ಜಿ, ಈ ಭಾರಿಯ ಚುನಾವಣೆ ನಮಗೆ ಕಷ್ಟಕರವಾಗಿತ್ತು, ಸುಮಾರು 30 ಲಕ್ಷ ಜನರಿಗೆ ಮತದಾನ ಮಾಡಲು ಅವಕಾಶ ನೀಡದೆ ಚುನಾವಣೆಯನ್ನು ನಡೆಸಲಾಯಿತು.
ಈ ಚುನಾವಣೆ ಮುಗಿಯುವವರೆಗೆ ಅಧಿಕಾರಿವರ್ಗ ಸಂಪೂರ್ಣವಾಗಿ ಬಿಜೆಪಿಯ ಪರವಾಗಿ ಕೆಲಸ ಮಾಡಿದ್ದು, ಚುನಾವಣಾ ಆಯೋಗ ನ್ಯಾಯಯುತ ಚುನಾವಣೆ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ನಂತರ ಹಿಂಸಾಚಾರಕ್ಕೆ ಕಳವಳ
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಭಾರತೀಯ ಜನತಾ ಪಕ್ಷದವರು ಟಿಎಮ್ಸಿ ಪಕ್ಷದ ಕಾರ್ಯಕರ್ತರ ಮನೆ ಹಾಗೂ ಕಚೇರಿಗಳನ್ನು ಧ್ವಂಸಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಹಿಸಾಂಚಾರ ಹೆಚ್ಚಿದೆ ಎಂದು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಚುನಾವಣಾ ನಂತರದ ಹಿಂಸಾಚಾರವು ಆ ಪಕ್ಷದ ಸೈದ್ಧಾಂತಿಕ ಬದ್ಧತೆಯನ್ನು ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ.
ನಮಗೆ ಇವಿಎಮ್(EVM) ಮೇಲೆ ನಂಬಿಕೆಯಿಲ್ಲ!
ನಮಗೆ ಈ ಭಾರಿಯ ಬಂಗಾಳ ಚುನಾವಣೆಯಲ್ಲಿ ಬಳಕೆಯಾಗಿರುವ ಇವಿಎಮ್ (EVM) ಹಾಗೂ ವಿವಿಪ್ಯಾಟ್ (VVPAT) ಮೇಲೆ ಸಹ ನಂಬಲು ಕಷ್ಟವಾಗುತ್ತಿದೆ. ಆದ್ದರಿಂದ ಮತ ಎಣಿಕೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆಮಾಡಿದರೆ, ಸಾರ್ವಜನಿಕರಿಗೆ ಸತ್ಯಾತ್ಯತೆ ತಿಳಿಯುತ್ತದೆ ಎನ್ನುವುದು ಬ್ಯಾನರ್ಜಿ ಅವರ ಅಭಿಪ್ರಾಯವಾಗಿದೆ, (ಏಜನ್ಸೀಸ್).