ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾರತೀಯ ವಾಯುಪಡೆಗೆ ನಿವೃತ್ತಿ 
ದೇಶ

ಪಾಕ್‌ನ F-16 ಹೊಡೆದುರುಳಿಸಿದ್ದ ಅಭಿನಂದನ್ ವರ್ಧಮಾನ್‌ ನಿವೃತ್ತಿ: ವಾಯುಪಡೆಗೆ ಗುಡ್‌ಬೈ, ಪೈಲಟ್​ ಆಗಿ ಹೊಸ ಜೀವನ ಆರಂಭ! Abhinandan Varthaman

ನವದೆಹಲಿ: 2019 ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ದಾಳಿಗೆ ಭಾರತ ಏರ್​ಸ್ಟ್ರೈಕ್​ ಮಾಡುವ ಮೂಲಕ ತಕ್ಕ ಉತ್ತರವನ್ನು ನೀಡಿತ್ತು.
ಆ ಸಂದರ್ಭದಲ್ಲಿ ವಾಯುಸೇನಾ ಅಧಿಕಾರಿ ಅಭಿನಂದನ್​ ವರ್ಧಮಾನ್ (Abhinandan Varthaman)​ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಪಾಕಿಸ್ತಾನದ ಎಫ್​​-16 ಪೈಟರ್​ ಜೆಟ್​​ಅನ್ನು ಹೊಡೆದುರಳಿಸಿ, ಪಾಕಿಸ್ತಾನ ಸೈನಿಕರ ಸೆರೆಸಿಕ್ಕಿ, ನಂತರ ಜೀವಂತವಾಗಿ ಭಾರತಕ್ಕೆ ಮರಳಿದ್ದ ಅಭಿನಂದನ್​ ದೇಶದೆಲ್ಲೆಡೆ ಖ್ಯಾತಿಗಳಿಸಿದ್ದರು.
ಈಗ, ಗ್ರೂಪ್​ ಕ್ಯಾಪ್ಟನ್​​ ಪದವಿಯಲ್ಲಿರುವ ಅಭಿನಂದನ್​ ವರ್ಧಮಾನ್​ ಸೇನೆಯಿಂದ ನಿವೃತ್ತಿ ಪಡೆಯಲಿದ್ದು, ಖಾಸಗಿ ಏರ್​ಲೈನ್​ವೊಂದರಲ್ಲಿ ಪೈಲಟ್​ ಆಗಲಿದ್ದಾರೆಂದು ಹೇಳಲಾಗುತ್ತಿದೆ.

ಶತ್ರುದೇಶದಿಂದ ಜೀವಂತವಾಗಿದ್ದ ಮರಳಿದ್ದ ಸೈನಿಕ!

2019 ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಫೆ. 14 ರಂದು ಆರ್​​ಡಿಎಕ್ಸ್​ ತುಂಬಿದ್ದ ವಾಹನವೊಂದು ಸೈನಿಕರು ಸಾಗುತ್ತಿದ್ದ ವ್ಯಾನ್​ಗೆ ಡಿಕ್ಕಿ ಹೊಡೆದು, ಸುಮಾರು 40 ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದರು. ಈ ಭಯೋತ್ಪಾದಕ ಕೃತ್ಯದ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಕೈವಾಡವಿದೆ ಎಂದು ತಿಳಿದಿದ್ದ ಭಾರತ, ಭಯೋತ್ಪಾದಕ ನೆಲೆಗಳನ್ನು ಆಯ್ಕೆ ಮಾಡಿಕೊಂಡು ಏರ್​ಸ್ಟ್ರೈಕ್​ ನಡೆಸಲಾಗಿತ್ತು.
ಈ ಸಮಯದಲ್ಲಿ, ಮಿಗ್​ ಬೈಸನ್​ ಫೈಟರ್​ ಜೆಟ್​​ ಕ್ಯಾಪ್ಟನ್​ ಆಗಿದ್ದ ಅಭಿನಂದನ್​ ವರ್ಧಮಾನ್​ ಪಾಕಿಸ್ತಾನದ ಎಫ್​-16 ಜೆಟ್​ನ್ನು ಹೊಡೆದುರಳಿಸಿ, ಪಾಕಿಸ್ತಾನದಲ್ಲಿ ಬಿದ್ದಿದ್ದರು. ಅವರನ್ನು ವಶಕ್ಕೆ ಪಡೆದಿರುವುದಾಗಿ ಪಾಕ್​ ಸರ್ಕಾರ ತಿಳಿಸಿತ್ತು.
ನಂತರ ಭಾರತ ಸರ್ಕಾರ ಮಾತುಕತೆ ಮೂಲಕ ಕೇವಲ ಮೂರೇ ದಿನಗಳಲ್ಲಿ ಅಭಿನಂದನ್​ ಭಾರತಕ್ಕೆ ಮರಳುವಂತೆ ನೋಡಿಕೊಂಡಿತ್ತು. ಅಭಿನಂದನ್​ ಅವರ ಶೌರ್ಯವನ್ನು ಗುರುತಿಸಿ ವೀರ ಚಕ್ರವನ್ನು ಕೂಡ ನೀಡಲಾಗಿದೆ. ಈ ಸಮಯದಲ್ಲಿ ಪಾಕ್​ ಸೈನಿಕರು ಅಭಿನಂದನ್​ಗೆ ಚಹ ನೀಡಿದ್ದ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು, (ಏಜನ್ಸೀಸ್​).