AAP Leader Murdered In Punjab
- ಪಂಜಾಬ್‌ನ ಮಮಡೋಟ್‌ನಲ್ಲಿ ಎಎಪಿ ಮುಖಂಡ ಗುರ್‌ಪ್ರೀತ್ ಸಿಂಗ್ ಗೋಪಿ ಹತ್ಯೆ
- ಬೈಕ್‌ನಲ್ಲಿ ತೆರಳುತ್ತಿದ್ದವರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೆನ್ನಟ್ಟಿ ಗುಂಡಿನ ದಾಳಿ.
- ಹಳೆಯ ವೈಷಮ್ಯ ಹಾಗೂ ಚುನಾವಣಾ ವಿವಾದವೇ ಹತ್ಯೆಗೆ ಕಾರಣವೆಂದು ಶಂಕೆ.
AAP Leader Murdered In Punjab: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಮಡೋಟ್ ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಗುರ್‌ಪ್ರೀತ್ ಸಿಂಗ್ ಗೋಪಿ ಅವರನ್ನು ದುಷ್ಕರ್ಮಿಗಳು ಬೈಕ್‌ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶನಿವಾರ ನಡೆದ ಈ ಘಟನೆಯು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಗುರುಪ್ರೀತ್ ಸಿಂಗ್ ಗೋಪಿ ಹಾಗೂ ಹರ್‌ಪ್ರೀತ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆನ್ನಟ್ಟಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಗುಂಡು ಹಾರಿಸಿ ಕೊಂದಿದ್ದಾರೆ. ಹತ್ಯೆಯ ಹಿಂದೆ ಹಳೆ ವೈಷಮ್ಯ ಇರುವ ಸಾಧ್ಯತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಭೂಪಿಂದರ್ ಸಿಂಗ್ ಸಿಧು ತಿಳಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಗೋಪಿ ಸಾವನ್ನಪ್ಪಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಗೋಪಿ ಮತ್ತು ಹರ್‌ಪ್ರೀತ್ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಕೆಲವು ಸ್ನೇಹಿತರು ಮತ್ತೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದರು. ಗುರುಪ್ರೀತ್ ಅವರನ್ನು ಕೊಂದ ನಂತರ ಸ್ನೇಹಿತರ ವಾಹನದ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹಳೇ ವೈಷಮ್ಯ ಕಾರಣ?
ಉಭಯ ಪಕ್ಷಗಳ ನಡುವೆ ಹಳೆ ವೈಷ್ಯಮ್ಯವಿದ್ದ ಕಾರಣ ಈ ಕೊಲೆ ನಡೆದಿದೆ. ಜೊತೆಗೆ
ಚುನಾವಣೆಗೆ ಸಂಬಂಧಿಸಿದ ದ್ವೇಷ ಹಾಗೂ ವಿವಾದವು ಇದಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಸದ್ಯ ದಾಳಿಕೋರರನ್ನು ಗುರುತಿಸಲಾಗಿದೆ. ಜೊತೆಗೆ ಅವರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ನಮ್ಮ ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಅವರನ್ನು ಬಂಧಿಸುತ್ತೇವೆ ಎಂದು ಎಸ್‌ಎಸ್‌ಪಿ ಭೂಪಿಂದರ್ ಸಿಂಗ್ ಸಿಧು ಹೇಳಿದ್ದಾರೆ.
ಗುರುಪ್ರೀತ್ರನ್ನು ಕೊಂದ ಪ್ರಮುಖ ಆರೋಪಿಗೆ ಕ್ರಿಮಿನಲ್ ಹಿನ್ನೆಲೆಯಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಭೂಪಿಂದರ್ ಸಿಂಗ್ ಸಿಧು ಹೇಳಿದರು, (ಏಜೆನ್ಸೀಸ್).