ಅಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್
ಪಾಟ್ನಾ: ಬಾಲಿವುಡ್ ನಟ ಅಮಿರ್ ಖಾನ್(Aamir Khan) ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆ ಇದೇ ತಿಂಗಳು ಜು. 05ರಂದು ಮೂರನೇ ಮದುವೆಯಾಗಿದ್ದು, ಅದನ್ನು ಲವ್ ಜಿಹಾದ್ ಎಂದು ಕರೆದಿರುವ ಹಿಂದೂ ಸಂಘಟನೆ ಬಜರಂಗ ದಳ, ಇಂದು(ಜು.11) ಅಮಿರ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದೆ.
ಬಿಹಾರದ ಫೋರ್ಬ್ಸ್‌ಗಂಜ್ ಪ್ರದೇಶದಲ್ಲಿ ಅಮಿರ್ ಖಾನ್ ಪ್ರತಿಕೃತಿ ಸುಟ್ಟು, ಆಮೀರ್ ಖಾನ್ ಮುರ್ದಾಬಾದ್' ಮತ್ತು 'ಆಮೀರ್ ಖಾನ್ ಜಿಹಾದಿ ಭಾರತ್ ಚೋಡೋ' ಮುಂತಾದ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದ ಬಜರಂಗಳ ದಳ ಕಾರ್ಯಕರ್ತರು, ನಟ ಲವ್ ಜಿಹಾದ್ ನಡೆಸಿದ್ದು, ಮತ್ತು ಅದನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ಸಮಯದಲ್ಲಿ ಮಾತನಾಡಿರುವ ಬಜರಂಗದಳ ನಾಯಕ ಮನೋಜ್ ಸೋನಿ, ಆಮೀರ್ ಖಾನ್ ನಿರಂತರವಾಗಿ ಹಿಂದೂ ಮಹಿಳೆಯರನ್ನು ಮದುವೆಯಾಗುವ ಮೂಲಕ ಹಿಂದೂ ಸಮುದಾಯವನ್ನು ಅವಮಾನಿಸುತ್ತಿದ್ದಾರೆ. ದೊಡ್ಡ ಪಿತೂರಿಯ ಭಾಗವಾಗಿ ಹಿಂದೂಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಮಿರ್ ಖಾನ್ ಮೂರು ಮದುವೆಯಾಗಿದ್ದರೂ, ಹಿಂದೂ ಮಹಿಳೆಯರನ್ನೇ ಮದುವೆಯಾಗಿದ್ದಾರೆ. ಮತ್ತು ಅವರ ಮಕ್ಕಳಿಗೆ ತೈಮೂರ್, ಅಫ್ರೋಜ್ ಇತ್ಯಾದಿ ಹೆಸರುಗಳನ್ನಿಡುತ್ತಾರೆ. ಅವರು ಮುಸ್ಲಿಂ ಸಮುದಾಯದ ಹುಡುಗಿಯರನ್ನು ಯಾಕೆ ಮದುವೆಯಾಗುವುದಿಲ್ಲ? ಹಿಂದೂ ಮಹಿಳೆಯರನ್ನು ಮಾತ್ರ ಯಾಕೆ ಪ್ರೀತಿ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಇಂತಹ ಚಟುವಟಿಕೆಗಳನ್ನು ಶೀಘ್ರದಲ್ಲೇ ನಿಲ್ಲಿಸದಿದ್ದರೆ ಅಮೀರ್ ಖಾನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮಿರ್ ಖಾನ್ 1986ರಲ್ಲಿ ರೀನಾ ದತ್ತಾರೊಂದಿಗೆ ಮೊದಲ ಮದುವೆಯಾಗಿದ್ದ ದಂಪತಿಗೆ ಇಬ್ಬರು ಜುನೈದ್, ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 2005ರಲ್ಲಿ ಚಲನಚಿತ್ರ ನಿರ್ದೇಶಕಿ ಕಿರಣ್ ರಾವ್ ಅವರನ್ನು ಅವರಿಗೂ ಒಬ್ಬ ಮಗನಿದ್ದು, ಬಳಿಕ 2021ರಲ್ಲಿ ಇಬ್ಬರು ವಿಚ್ಚೇದನ ಪಡೆದುಕೊಂಡರು. ಈ ವರ್ಷ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆಯಾಗಿದ್ದಾರೆ (ಏಜೆನ್ಸೀಸ್).