ಘಟನೆಯ ಸ್ಥಳ 
ದೇಶ

ತನ್ನ ಗೆಳತಿಯನ್ನು ನೋಡಲು ಆಕೆಯ ಮನೆಗೆ ಹೋದ ಯುವಕ....ಕುಟುಂಬಸ್ಥರಿಂದ ಥಳಿತ; ಮುಂದಾಗಿದ್ದೇ ಅನಾಹುತ...beaten up!

ಲಖನೌ: ಯುವಕನೊಬ್ಬ ತನ್ನ ಗೆಳತಿಯನ್ನು ನೋಡಲು ಆಕೆಯ ಮನೆಗೆ ಹೋಗಿದ್ದು, ಈ ವೇಳೆ ಹುಡುಗಿಯ ಕುಟುಂಬಸ್ಥರು ಆತನನ್ನು ಹಿಡಿದು ತೀವ್ರವಾಗಿ ಥಳಿಸಿ(beaten up) ಕೊಂದಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಶುಕ್ರವಾರ(ಜು. 10) ವರದಿಯಾಗಿದೆ.
ಕೌಶಂಬಿ ಜಿಲ್ಲೆಯ ಮಹುವಾ ಖಾಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಶಿವ ಪ್ರಸಾದ್ ಗುರುವಾರ ರಾತ್ರಿ ಮಹುವಾ ಖಾಡಾ ಗ್ರಾಮದಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗಿ ಆಕೆಯನ್ನು ಭೇಟಿಯಾಗಿದ್ದಾನೆ. ಈ ವೇಳೆ ಕುಟುಂಬಸ್ಥರು ಆತನನ್ನ ಹಿಡಿದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯ ವಿಷಯ ತಿಳಿದ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಆತನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಹುಡುಗಿಯೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಇನ್ನೂ ಮೃತ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಗೆಳತಿಯ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಕೆಲವರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್)