ಯಮುನಾ ನದಿ ಸಚ್ಛಗೊಳಿಸುತ್ತಿರುವ ಸಿಜೆಪಿ ಕಾರ್ಯಕರ್ತರು
- ಸೋಷಿಯಲ್ ಮೀಡಿಯಾನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ವೈರಲ್
- ಯಮುನಾ ನದಿ ಸಚ್ಛಗೊಳಿಸುತ್ತಿರುವ ಸಿಜೆಪಿ ಕಾರ್ಯಕರ್ತರು
- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ನವದೆಹಲಿ: ಸದ್ಯ ಭಾರತದಲ್ಲಿ ಎಲ್ಲಿ ಕೇಳಿದರು ಅಲ್ಲಿ ಕಾಕ್ರೋಚ್ ಜನತಾ ಪಾರ್ಟಿಯದೆ ಹವಾ ಆಗಿದೆ. ಸೋಷಿಯಲ್ ಮೀಡಿಯಾನಲ್ಲಿ ಮೀಮ್ ಪೇಜ್ ರೀತಿ ಆರಂಭಗೊಂಡ ಇದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಅತ್ಯಧಿಕ ಹಿಂಬಾಲಕರನ್ನು ಹೊಂದಿರುವ ಇನ್ಸ್ಟಾಗ್ರಾಮ್ ಖಾತೆಯಾಗಿ ಗುರುತಿಸಿಕೊಂಡಿದೆ.
ಈಗ ಈ ಕಾಕ್ರೋಚ್ ಜನತಾ ಪಾರ್ಟಿಯ ಕಾರ್ಯಕರ್ತರೆಂದು ಹೇಳಿಕೊಂಡ ಕೆಲ ಯುವಕ-ಯುವತಿಯರು ಜಿರಳೆ ರೀತಿಯ ಬಟ್ಟೆ ಹಾಗೂ ಮೇಕಪ್ ಮಾಡಿಕೊಂಡು ಯಮುನಾ ನದಿಯನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ (Cockroach Janata Party Viral Video) ಆಗುತ್ತಿದೆ.
ವಿಡಿಯೋನಲ್ಲೇನಿದೆ?
ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಕೆಲ ಯುವಕರು ನಾನು ಜಿರಳೆ ಎಂಬ ಪೋಸ್ಟರ್ ಹಿಡಿದುಕೊಂಡು, ಪೊರಕೆ, ಬಕೆಟ್, ಕಸದ ಚೀಲಗಳನ್ನು ಹಿಡಿದುಕೊಂಡು, ಯಮುನಾ ನದಿಯ ಕಾಳಿಂದಿ ಕುಂಜ್ ಘಾಟ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಏನು ಈ ಕಾಕ್ರೋಚ್ ಜನತಾ ಪಾರ್ಟಿ?
ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜ. ಸೂರ್ಯಾಕಾಂತ್ ಅವರು ಭಾರತದ ನಿರುದ್ಯೋಗಿ ಯುವಕರನ್ನು ಜಿರಳೆ(ಕಾಕ್ರೋಚ್) ಗಳಿಗೆ ಹೋಲಿಕೆ ಮಾಡಿದ ನಂತರ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದ, ಅಭಿಜಿತ್ ದಿಪ್ಕೆ ಈ ಕಾಕ್ರೋಚ್ ಜನತಾ ಪಾರ್ಟಿಯನ್ನು ಸೋಷಿಯಲ್ ಮೀಡಿಯಾನಲ್ಲಿ ಸ್ಥಾಪಿಸಿದರು. ಈ ಜಿರಲೆ ಪಕ್ಷವು ತನ್ನನ್ನು ತಾನು, ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ, ಸೋಮಾರಿ ತತ್ವಗಳನ್ನು ಪಾಲಿಸುವ ಪಕ್ಷವೆಂದು ಹೇಳಿಕೊಂಡಿದೆ.
ಕಾಕ್ರೋಚ್ ಪಕ್ಷದ ಕ್ರೇಜಿ ಪ್ರನಾಳಿಕೆ!
ಈ CJP ಪಕ್ಷದ ಪ್ರನಾಳಿಕೆ ಕೇಳಿದ ಒಂದಿಷ್ಟು ಜನ ನಗುತ್ತಿದ್ದರೆ ಇನ್ನಷ್ಟು ಜನ ಈ ಸೋಷಿಯಲ್ ಮೀಡಿಯಾ ಕ್ರಾಂತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಯಾವುದೇ ರಾಜ್ಯಸಭಾ ಸೀಟುಗಳನ್ನು ನೀಡಬಾರದು.
ಸಂಸತ್ತಿನ ಒಟ್ಟು ಸ್ಥಾನವನ್ನು ಹೆಚ್ಚಿಸದೆಯೇ ಮಹಿಳೆಯರಿಗೆ ಶೇ. 50 ರಷ್ಟು ಕಡ್ಡಾಯ ಮೀಸಲಾತಿ ಕೊಡಬೇಕು. ಪಕ್ಷಾಂತರ ಮಾಡುವ ಎಂಎಲ್‌ಎ ಮತ್ತು ಎಂಪಿಗಳಿಗೆ 20 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಬ್ಯಾನ್ ಮಾಡಬೇಕು. ಇದು ಈ ಪಕ್ಷದ ಪ್ರನಾಳಿಕೆಯಾಗಿದೆ, (ಏಜನ್ಸೀಸ್).