ಈ20 ಇಂಧನ  
ದೇಶ

22,567 ಮಾಲೀಕರು, 316 ಜಿಲ್ಲೆ... E20 ಇಂಧನ​ ಸಮಸ್ಯೆ ಬೆನ್ನಲ್ಲೇ ನಡೆಸಿದ ಸರ್ವೇಯಲ್ಲಿ ಹೊರಬಿತ್ತು ಅಚ್ಚರಿ ಸಂಗತಿ

ಪ್ರಮುಖ ಮುಖ್ಯಾಂಶಗಳು

  • E20 ಪೆಟ್ರೋಲ್ ಕುರಿತು ಇತ್ತೀಚೆಗೆ ನಡೆಸಿದ ಸರ್ವೇಯಲ್ಲಿ ಅಚ್ಚರಿ ಸಂಗತಿ
  • E20 ಪೆಟ್ರೋಲ್ ಎಂಬುದು ಶೇ.80ರಷ್ಟು ಬೆರೆಸಿದ ಶೇ.20ರಷ್ಟು ಎಥೆನಾಲ್ ಇಂಧನ
  • ಈ ಮಿಶ್ರಿತ ಇಂಧನದಿಂದ ವಾಹನಗಳ ಮೈಲೇಜ್​ ಕುಸಿತ?
ನವದೆಹಲಿ: ಶೇ.80ರಷ್ಟು ಪೆಟ್ರೋಲ್​ಗೆ ಬೆರೆಸಿದ ಶೇ.20ರಷ್ಟು ಎಥೆನಾಲ್ ಇಂಧನ ವಿರುದ್ಧ ಭಾರತೀಯ ವಾಹನ ಸವಾರರು ಭಾರಿ ಅಸಮಾಧಾನ ಹೊರಹಾಕಿದ್ದು, ಇತ್ತೀಚೆಗೆ ನಡೆಸಿದ ಸರ್ವೇಯಲ್ಲಿ ಶಾಕಿಂಗ್​ ಸಂಗತಿಯೊಂದು ಬೆಳಕಿಗೆ ಬಂದಿದೆ.
ಎಥೆನಾಲ್ ಪ್ರಾಥಮಿಕವಾಗಿ ಕಬ್ಬು ಮತ್ತು ಇತರ ಕೃಷಿ ಉಪಉತ್ಪನ್ನಗಳಿಂದ ಪಡೆದ ಜೈವಿಕ ಪೆಟ್ರೋಲ್​ ಎಂಬ ಈಗ ಬಹುತೇಕರಿಗೆ ಗೊತ್ತಾಗಿದೆ. ಪೆಟ್ರೋಲ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಉರಿಯುವ ಇಂಧನ ಇದಾಗಿದ್ದು, ವಾಹನಗಳಿಂದ ಮಾಲಿನ್ಯಕಾರಕ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತದೆ. ಆದರೆ, ಇದರ ವಿರುದ್ಧ ಅನೇಕ ಪೆಟ್ರೋಲ್​ ವಾಹನಗಳ ಸವಾರರು ಕಿಡಿಕಾರಿದ ಹಿನ್ನೆಲೆ ಸಮೀಕ್ಷೆಯೊಂದನ್ನು ನಡೆಸಲಾಗಿದೆ.
'ಲೋಕಲ್ ಸರ್ಕಲ್ಸ್' ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ದೇಶದ 316 ಜಿಲ್ಲೆಗಳಲ್ಲಿ 22,567 ಪೆಟ್ರೋಲ್ ವಾಹನ ಮಾಲೀಕರನ್ನು ಪ್ರಶ್ನಿಸಿದಾಗ, ಅದಕ್ಕೆ ಪ್ರತಿಕ್ರಿಯಿಸಿದವರ ಪೈಕಿ ಶೇ.53ರಷ್ಟು ಜನರು E20 ಪೆಟ್ರೋಲ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ರಸ್ತೆ ಸಾರಿಗೆ ಮತ್ತು ಪೆಟ್ರೋಲಿಯಂ ಸಚಿವಾಲಯಗಳ ಹಳ್ಳ ಹಿಡಿದಿವೆ ಅಥವಾ ಈ ವ್ಯವಸ್ಥೆ ಅಸಮರ್ಪಕ ಎಂದು ರೇಟ್ ಮಾಡಿದ್ದಾರೆ. ಶೇ.42ರಷ್ಟು ಜನರು ಈ ಕ್ರಮವನ್ನು ವಿನಾಶಕಾರಿ ಎಂದು ದೂರಿದ್ದು, ಶೇ.13ರಷ್ಟು ಜನ ಮಾತ್ರ ಇದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ವಾಹನಗಳ ಬಳಕೆದಾರರಲ್ಲಿ ಕಳವಳ

ಸಮೀಕ್ಷೆಯ ಫಲಿತಾಂಶಗಳು ಇಂಧನ ದಕ್ಷತೆ ಮತ್ತು ವಾಹನ ನಿರ್ವಹಣೆಯ ಬಗ್ಗೆ ಕಳವಳಗಳನ್ನು ಎತ್ತಿ ತೋರಿಸಿವೆ. 2023ಕ್ಕಿಂತ ಮೊದಲು ತಯಾರಿಸಿದ ಪೆಟ್ರೋಲ್ ವಾಹನಗಳ ಶೇ.66ರಷ್ಟು ಮಾಲೀಕರು ತಮ್ಮ ವಾಹನಗಳ ಮೈಲೇಜ್ ಇಳಿದಿದೆ ಎಂದು ಆರೋಪಿಸಿದ್ದಾರೆ. E20 ಪೆಟ್ರೋಲ್‌ಗೆ ಬದಲಾಯಿಸಿದ ನಂತರ ಮೈಲೇಜ್ ಶೇ.10ರಷ್ಟು ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಗೆ ಒಳಗಾದವರಲ್ಲಿ ಶೇ.45ರಷ್ಟು ಜನರು ಇಂಜಿನ್ ಭಾಗಗಳ ಸವೆತ, ಟೇರ್​ ಹೆಚ್ಚಳ ಮತ್ತು ನಿರ್ವಹಣೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 2023ಕ್ಕೂ ಮೊದಲಿನ ಪೆಟ್ರೋಲ್ ವಾಹನ ಮಾಲೀಕರಲ್ಲಿ ಸುಮಾರು ಶೇ.31ರಷ್ಟು ಮಂದಿ ಹೆಚ್ಚು ಪಾವತಿ ಮಾಡಬೇಕಾದರೂ ಸಹ E0 ಅಥವಾ E10 ಪೆಟ್ರೋಲ್ ಅನ್ನು ಖರೀದಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಈಗಲೂ ಕೇಂದ್ರ ಸರ್ಕಾರವು ತನ್ನ ಶೇ.20ರಷ್ಟು ಎಥೆನಾಲ್ ಮಿಶ್ರಣವನ್ನು ಸಮರ್ಥಿಸಿಕೊಳ್ಳುವುದನ್ನು ಮುಂದುವರಿಸಿದ್ದು, ಇತ್ತ ಸಮೀಕ್ಷೆಯ ಫಲಿತಾಂಶಗಳು ಕೆಲವರನ್ನು ಅಚ್ಚರಿಗೊಳಿಸಿದೆ. ಎಥೆನಾಲ್ ಮಿಶ್ರಣದ ದೀರ್ಘಕಾಲೀನ ಪರಿಣಾಮಗಳು 2027ರ ವೇಳೆಗೆ ಸ್ಪಷ್ಟವಾಗುತ್ತವೆ ಎಂದು ಕೇಂದ್ರವು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಭಾರತದ 316 ಜಿಲ್ಲೆಗಳಲ್ಲಿ 22,567 ಪೆಟ್ರೋಲ್ ವಾಹನ ಮಾಲೀಕರನ್ನು ಸ್ಥಳೀಯ ವಲಯಗಳ ಸಮೀಕ್ಷೆಗೆ ಒಳಪಡಿಸಿತು. ಇದರಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ.69ರಷ್ಟು ಪುರುಷರು ಮತ್ತು 31ರಷ್ಟು ಮಹಿಳೆಯರು. ಸುಮಾರು ಶೇ.46ರಷ್ಟು ಜನರು ಶ್ರೇಣಿ-1 ಜಿಲ್ಲೆಗಳಿಂದ, ಶೇ.32ರಷ್ಟು ಜನರು ಶ್ರೇಣಿ-2 ಜಿಲ್ಲೆಗಳಿಂದ ಮತ್ತು ಉಳಿದ ಶೇ.22ರಷ್ಟು ಮಂದಿ ಶ್ರೇಣಿ-3, ಶ್ರೇಣಿ-4, ಶ್ರೇಣಿ-5 ಮತ್ತು ಗ್ರಾಮೀಣ ಜಿಲ್ಲೆಗಳಿಂದ ಬಂದವರು ಎನ್ನಲಾಗಿದೆ.

2023ಕ್ಕೂ ಹಿಂದಿನ ವಾಹನಗಳಿಗೆ ಹೆಚ್ಚು ಎಫೆಕ್ಟ್​!

ಅಸಲಿ ಸಮಸ್ಯೆಯೆಂದರೆ 2023ರ ಮೊದಲು ತಯಾರಿಸಿದ ವಾಹನಗಳಿಗೆ ಹೆಚ್ಚು ಒಡೆತ ಎನ್ನಲಾಗಿದೆ. ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಬಳಸಿದರೆ ಕಾರು ಅಥವಾ ಬೈಕ್ ಇಂಜಿನ್‌ ಹಾನಿಯಾಗುವ ಅಪಾಯ ಉಂಟು. ಪ್ರತಿ ಬಾರಿ ಕಾರು ಅಥವಾ ಬೈಕನ್ನು ದುರಸ್ತಿಗೆ ತೆಗೆದುಕೊಳ್ಳಬೇಕಾದಾಗ, ಕೇಂದ್ರವು ಹಳೆಯ ವಾಹನಗಳ ನವೀಕರಣ ಶುಲ್ಕವನ್ನು ಸಹ ಹೆಚ್ಚಿಸಿದೆ. ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹಳೆಯ ವಾಹನಗಳನ್ನು ಖರೀದಿಸುವುದರಿಂದ ನಿಮಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಇಲ್ಲಿಯವರೆಗೆ ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಕೇವಲ ಶೇ.10ರಷ್ಟಿತ್ತು. ಕಳೆದ ವರ್ಷ ಆಗಸ್ಟ್ 1ರಿಂದ ಕೇಂದ್ರವು ಅದನ್ನು ಶೇ.20ರಷ್ಟು ಹೆಚ್ಚಿಸಿದೆ.

ಮೈಲೇಜ್​ಗೆ ಹೊಡೆತ?

ವಾಹನಗಳಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ (E20) ಬಳಕೆಯನ್ನು ಉತ್ತೇಜಿಸಲು ಭಾರತ ಸರ್ಕಾರ ಕ್ರಮಗಳನ್ನು ಚುರುಕುಗೊಳಿಸಿದೆ. ಆದಾಗ್ಯೂ, ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ಒಂದಷ್ಟು ತಜ್ಞರು, ಈ ರೀತಿಯ ಪೆಟ್ರೋಲ್​, ಇಂಧನ ದಕ್ಷತೆಯ ಮೇಲೆ ಅಂದರೆ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. 2021ರ NITI ಆಯೋಗದ ವರದಿಯು, E20 ಎಥೆನಾಲ್ ಮಿಶ್ರಣ ಪೆಟ್ರೋಲ್ ಮೈಲೇಜ್​ಗೆ ಹೊಡೆತ ನೀಡುತ್ತದೆ ಎಂದು ಒತ್ತಿ ಹೇಳಿದೆ.
E20 ಇಂಧನ ವಾಹನಗಳ ಮೈಲೇಜ್‌ನಲ್ಲಿ ಶೇ.2ರಿಂದ 6ರಷ್ಟು ಕಡಿತಕ್ಕೆ ಕಾರಣವಾಗುವುದರಿಂದ ಗ್ರಾಹಕರು ಎರಡು ಪಟ್ಟು ಹೊಡೆತವನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಇಂಧನ ಬೆಲೆಗಳನ್ನು ಪಾವತಿಸಿದರೂ ತಮ್ಮ ವಾಹನದ ಮೈಲೇಜ್ ಕಡಿಮೆಯಾಗುತ್ತಿರುವುದು ಹಲವರು ಸಿಡಿಮಿಡಿಗೊಂಡಿದ್ದಾರೆ,(ಏಜೆನ್ಸೀಸ್).