ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ಎಳೆದೊಯ್ಯುತ್ತಿರುವುದು
ಉಜ್ಜಯಿನಿ: ಅಪ್ರಾಪ್ತ ಬಾಲಕ(Minor Boy)ನೊಬ್ಬ ಹುಡುಗಿಯ ಜೊತೆ ಓಡಿಹೋದನೆಂದು ಕ್ರೂರವಾಗಿ ಥಳಿಸಲಾಯಿತು ಮಾತ್ರವಲ್ಲದೆ, ಅವನನ್ನು ಬೆತ್ತಲೆಗೊಳಿಸಿ ಹಗ್ಗದಿಂದ ಕಟ್ಟಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕ ತನ್ನ ಕುಟುಂಬದ ಹುಡುಗಿಯ ಜೊತೆ ಓಡಿಹೋಗಿದ್ದಾನೆ ಎಂದು ಆರೋಪಿಸಿ ಹುಡುಗಿ ಕುಟುಂಬದವರು ಸೇಡು ತೀರಿಸಿಕೊಳ್ಳಲು ಆ ಹುಡುಗನನ್ನು ಹಿಡಿದು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಅವಮಾನಿಸಲಾಗಿದೆ.
ವಿಡಿಯೋ ಚಿತ್ರೀಕರಣದಲ್ಲಿ ನಿರತರಾದ ಜನ
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಅಪ್ರಾಪ್ತನನ್ನು ಹೇಗೆ ಹಗ್ಗದಿಂದ ಕಟ್ಟಿಹಾಕಿ , ರಸ್ತೆಯಲ್ಲಿ ಎಳೆದುಕೊಂಡು ಹೋಗಲಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಈ ಸಮಯದಲ್ಲಿ, ರಸ್ತೆಯಲ್ಲಿ ನೂರಾರು ಜನರು ಇದ್ದರೂ ಯಾರೊಬ್ಬರೂ ಆ ಹುಡುಗನ ರಕ್ಷಣೆಗೆ ಮುಂದೆ ಬರದೆ, ಬದಲಾಗಿ ಜನರ ಮೂಕ ಪ್ರೇಕ್ಷಕರಾಗಿ, ದೃಶ್ಯವನ್ನು ವೀಕ್ಷಿಸುತ್ತಾ ತಮ್ಮ ಮೊಬೈಲ್‌ಗಳಿಂದ ವಿಡಿಯೋ ಸೆರೆಹಿಡಿಯುತ್ತಿರುವುದನ್ನು ನೋಡಬಹುದಾಗಿದೆ.
ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ಬಾಲಕ
ಪನ್ವಾಸ ಪ್ರದೇಶದಲ್ಲಿ ವಾಸಿಸುವ ಈ ಹುಡುಗ ಶುಕ್ರವಾರ(ಜ.16) ತನ್ನ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತಲುಪಿದ್ದಾನೆ. ಹುಡುಗಿಯ ಕುಟುಂಬ ಸದಸ್ಯರು ಅವನನ್ನು ಹಿಡಿದು ಮೊದಲು ತೀವ್ರವಾಗಿ ಥಳಿಸಿದ್ದಾರೆ, ನಂತರ ನನ್ನ ಬಟ್ಟೆಗಳನ್ನು ಹರಿದು ಕೈಯನ್ನು ಕಟ್ಟಿ ನಗರದಾದ್ಯಂತ ಸುಮಾರು ಒಂದೂವರೆ ಕಿಲೋಮೀಟರ್ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.
3 ತಿಂಗಳ ಹಿಂದೆ ಹುಡುಗಿಯೊಂದಿಗೆ ಓಡಿಹೋಗಿದ್ದ
ಸಂತ್ರಸ್ತನು ತಾನು ಶಂಕರಪುರದಲ್ಲಿ ವಾಸಿಸುತ್ತಿದ್ದು, ಹತ್ತಿರದಲ್ಲಿ ವಾಸಿಸುವ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಸುಮಾರು ಮೂರು ತಿಂಗಳ ಹಿಂದೆ, ಅವನು ಹುಡುಗಿಯೊಂದಿಗೆ ಓಡಿಹೋಗಿದ್ದನು. ನಂತರ ಇಬ್ಬರನ್ನೂ ಪನ್ವಾಸ ಪೊಲೀಸ್ ಠಾಣೆಗೆ ಹಾಜರುಪಡಿಸಲಾಯಿತು. ನಂತರ ಅವನನ್ನು ಜೈಲಿಗೆ ಕಳುಹಿಸಿ, ಹುಡುಗಿಯನ್ನು ಸುಧಾರಣಾ ಗೃಹಕ್ಕೆ ಕಳುಹಿಸಲಾಯಿತು.
ತಾಯಿ ನೋಡಲು ಬಂದು ತಗಲಾಕೊಂಡ ಬಾಲಕ
ಒಂದು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ನಂತರ, ತನ್ನ ಅಂಗವಿಕಲ ತಾಯಿಯೊಂದಿಗೆ ದೇವಾಸ್‌ನಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದೆ ಎಂದು ಹುಡುಗ ಹೇಳಿದ್ದಾನೆ. ಗುರುವಾರ (ಜ.15) ಅವನ ತಾಯಿ ಅಸ್ವಸ್ಥಳಾಗಿದ್ದರಿಂದ, ಅವನು ಹಣ ಸಂಗ್ರಹಿಸಲು ಉಜ್ಜಯಿನಿಗೆ ಬಂದಿದ್ದನು. ಅಲ್ಲಿ ಹುಡುಗಿಯ ಕಡೆಯವರು ಇವನನ್ನು ಹಿಡಿದ್ದಿದ್ದಾರೆ.
ಪೊಲೀಸರಿಂದ ಅರೋಪಿಗಳ ಬಂಧನ, ಬಿಡುಗಡೆ
ಬಾಲಕನ ಹೇಳುವಂತೆ, ಠಾಣೆಯ ಹೊರಗೆ ಇದ್ದ ಪೊಲೀಸರು ಅವನನ್ನು ಈ ಸ್ಥಿತಿಯಲ್ಲಿ ನೋಡಿ ರಕ್ಷಿಸಿ, ಠಾಣೆಗೆ ಕರೆದೊಯ್ದರು. ಆ ಸಮಯದಲ್ಲಿ, ಪೊಲೀಸರು ಹಲ್ಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸಹ ಬಂಧಿಸಿದ್ದರು.ಆದರೆ ಸಂಜೆಯ ಹೊತ್ತಿಗೆ ಎಲ್ಲರನ್ನೂ ಬಿಡುಗಡೆ ಮಾಡಿದ್ದಾರೆ ಎಂದ ಹೇಳಿದ್ದಾನೆ,(ಏಜನ್ಸೀಸ್).