Kangra Valley Toy Train 
ದೇಶ

ಪ್ರಕೃತಿಯ ಸೌಂದರ್ಯದ ನಡುವೆ ಮರುಹುಟ್ಟು ಪಡೆದ ಕಾಂಗ್ರಾ ವ್ಯಾಲಿ 'ಟಾಯ್ ಟ್ರೈನ್'; ಪ್ರವಾಸಿ ಪ್ರಿಯರಿಗೆ ಹೊಸ ಸ್ವರ್ಗ..Kangra Valley Toy Train

ಪ್ರಮುಖ ಮುಖ್ಯಾಂಶಗಳು

  • ​4 ವರ್ಷಗಳ ಕಾಂಗ್ರಾ ವ್ಯಾಲಿ 'ಟಾಯ್ ಟ್ರೈನ್' ಆರಂಭ
  • 2022ರಲ್ಲಿ ನಡೆದಿದ್ದ ಪ್ರವಾಹದಿಂದ ಹಾನಿಗೊಳಗಾಗಿದ್ದ ಪಠಾಣ್‌ಕೋಟ್-ಜೋಗಿಂದರ್‌ನಗರ ಟಾಯ್ ಟ್ರೈನ್ ಸೇವೆ
  • ಕಲ್ಕಾ-ಶಿಮ್ಲಾ ರೈಲು ಪ್ರಯಾಣದಷ್ಟೇ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಕಾಂಗ್ರಾ ವ್ಯಾಲಿ 'ಟಾಯ್ ಟ್ರೈನ್'
Kangra Valley Toy Train: ದಟ್ಟವಾದ ಕಾಡು, ಸುತ್ತಲೂ ಹಸಿರಿನ ವಾತಾವರಣ, ತಣ್ಣನೆ ಗಾಳಿ, ಚಹಾ ತೋಟ, ಬೆಟ್ಟದ ಮೇಲಿಂದ ಕಾಣುವ ಪೆಟ್ಟಿಗೆಯಂತಹ ಮನೆಗಳು ಇವುಗಳ ಮಧ್ಯೆ ಒಂದು ರೈಲು ಪಾಸ್​ ಆಗೋದು ಎಂದರೆ ಎಷ್ಟು ರೋಮಾಂಚಕ ವಿಚಾರ ಅಲ್ಲವೇ?. ನಿಜಕ್ಕೂ ಹೌದು. ಒತ್ತಡದ ಬದುಕಿಗೆ ಕ್ಷಣದಲ್ಲೇ ಗುಡ್​ ಬೈ ಹೇಳಿ, ಬದುಕಿನ ಮೇಲೆ ಹುಮ್ಮಸ್ಸು ಹೆಚ್ಚಿಸುತ್ತದೆ. ಇಂತಹ ಸೋಜಿಗ ಪ್ರದೇಶ ಇರುವುದು ಬೇರೆ ಯಾವುದೋ ದೇಶದಲ್ಲ, ಭಾರತದ ಹಿಮಾಚಲಪ್ರದೇಶದಲ್ಲಿ.
ಹೌದು, 2022ರಲ್ಲಿ ಸ್ಥಗಿತಗೊಂಡಿದ್ದ ಪ್ರಕೃತಿಯ ವಿಕೋಪಕ್ಕೆ ತುತ್ತಾಗಿ ಸ್ಥಗಿತಗೊಂಡಿದ್ದ ವಸಾಹತುಶಾಹಿ ಕಾಲದ 'ಪಠಾಣ್‌ಕೋಟ್-ಜೋಗಿಂದರ್‌ನಗರ' ನ್ಯಾರೋ-ಗೇಜ್ ಲೈನ್ ಮೇ 2 ರಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಚಾಲನೆ ಕೊಟ್ಟ ಹಿನ್ನೆಲೆ ಮತ್ತೆ ಪುನರಾರಂಭಗೊಂಡಿದೆ.
ಹಿಮಾಚಲ ಪ್ರದೇಶದಲ್ಲಿ ಪ್ರತಿಯೊಂದು ಪ್ರದೇಶವು ಒಂದಕ್ಕಿಂತ ಒಂದು ಸೊಗಸು ಅದರಲ್ಲಿ ಪ್ರಸಿದ್ಧ ಕಾಂಗ್ರಾ ವ್ಯಾಲಿ ಟಾಯ್ ಟ್ರೈನ್ ಏರಲು ಪ್ರವಾಸಿಗರು ನಾ ಮುಂದು ತಾ ಮುಂದು ಎನ್ನುತ್ತಾರೆ. ಆದರೆ, 2022 ಆಗಸ್ಟ್​ 20ರಂದು ಚುಕ್ಕಿ ಖಾದ್​ ನದಿಯಲ್ಲಿ ಉಂಟಾದ ಪ್ರವಾದಿಂದಾಗಿ ಐತಿಹಾಸಿಕ ಸೇತುವೆಯಾದ ಚಕ್ಕಿ ಪಿಲ್ಲರ್​ಗಳು ನೆಲಕ್ಕುರುಳಿದ್ದವು. ಇದು ಪಠಾಣ್​ ಕೋಟ್​ ಮತ್ತು ಕಂಡ್ವಾಲ್​​​ ಸಂಪರ್ಕಿಸುತ್ತಿದ್ದ ಸೇತುವೆ. ಇದರ ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನೆಲೆ, ನಾಲ್ಕು ವರ್ಷಗಳ ನಂತರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಟಾಯ್​ಟ್ರೈನ್​ ವಿಶೇಷತೆ?

ಕಾಂಗ್ರಾ ಕಣಿವೆ ರೈಲ್ವೆ ಪಂಜಾಬ್‌ನ ಪಠಾಣ್‌ಕೋಟ್ ಮತ್ತು ಹಿಮಾಚಲ ಪ್ರದೇಶದ ಜೋಗಿಂದರ್‌ನಗರ ನಡುವೆ ಸಂಚರಿಸುವ ಈ ಟಾಯ್​ ಟ್ರೈನ್​ 164 ಕಿಲೋಮೀಟರ್‌ಗಳವರೆಗೆ ಕಿಲೋಮೀಟ್​ ಸಂಚರಿಸುತ್ತವೆ. ಇದು ಉದ್ದದ ಆಟಿಕೆ ರೈಲು ಎನ್ನಲಾಗಿದೆ. 1929 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಇದನ್ನು ಸ್ಥಾಪಿಸಲಾಯಿತು. ಈ ಚಂದದ ರೈಲು ಜವಲಮುಖಿಯಂತಹ ದೇವಾಲಯ, ಪಟ್ಟಣ, ಪಾಲಪಯರ್​ ಮತ್ತು ಬೈಜ್‌ನಾಥ್‌ನಂತಹ ಪ್ರವಾಸಿ ತೋಟ, ಚಹಾ ತೋಟ, ಬಿಯಾಸ್ ನದಿಯ ಪಾಂಗ್ ಅಣೆಕಟ್ಟು ಮಧ್ಯೆ ಈ ರೈಲುಗಳು ಸಂಚರಿಸುತ್ತದೆ. ಇಡೀ ಮಾರ್ಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಸುರಂಗಗಳು ಮಾತ್ರ ಇರುವುದು ವಿಶೇಷ.

​ಕಲ್ಕಾ-ಶಿಮ್ಲಾ ಮತ್ತು ಕಾಂಗ್ರಾ ವ್ಯಾಲಿ ನಡುವಿನ ವ್ಯತ್ಯಾಸವೇನು?

ಯುನೆಸ್ಕೋ ಸ್ಥಾನಮಾನ ಪಡೆದಿರುವ ಕಲ್ಕಾ-ಶಿಮ್ಲಾ ರೈಲು ಕಡಿದಾದ ಬೆಟ್ಟಗಳನ್ನು ಹತ್ತುತ್ತಾ, 100ಕ್ಕೂ ಹೆಚ್ಚು ಸುರಂಗ ಹಾಗೂ ಕಮಾನು ಸೇತುವೆಗಳ ಮೂಲಕ ಸಾಗುತ್ತದೆ. ಅಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚು. ಆದರೆ, ಕಾಂಗ್ರಾ ರೈಲು ಕಣಿವೆಗಳ ನಡುವೆ ಸಾಗುತ್ತದೆ. ಇಲ್ಲಿ ಹೊಲ, ಸಾಸಿವೆ, ಚಹಾ ತೋಟ ಹಾಗೂ ಹಳ್ಳಿಗಳ ದನ ಕರು ಕಣ್ಣಿಗೆ ಕಾಣುವಂತೆ ಇರುತ್ತದೆ. ಏಕಾಂತ ಹಾಗೂ ಶಾಂತ ವಾತಾವರಣವನ್ನು ಬಯಸುವ ಜನರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ,( ಏಜೆನ್ಸೀಸ್).