ತೆಲಂಗಾಣ: ಹೊಸ ವರ್ಷದ ದಿನದಂದು(ಜ.1)ಭಾರತದಲ್ಲಿ ಮದ್ಯ ಮಾರಾಟದಲ್ಲಿ ಅತಿ ಹೆಚ್ಚು ಪ್ರಮಾಣವನ್ನು ದಾಖಲಿಸಿದ ರಾಜ್ಯಗಳು ಮುಖ್ಯವಾಗಿ ತೆಲಂಗಾಣ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ಮಂಜೂಣಿಯಲ್ಲಿದೆ.
ಈ ರಾಜ್ಯಗಳಲ್ಲಿ ಹಬ್ಬದ ಸಂದರ್ಭದಲ್ಲಿ ಮದ್ಯ ಸೇವನೆಯ ಪ್ರಮಾಣ ದಾಖಲೆಯ ಮಟ್ಟಕ್ಕೆ ಏರಿತು. ನಿರ್ದಿಷ್ಟವಾಗಿ ಹೊಸ ವರ್ಷದ ದಿನದಂದು ಅತಿ ಹೆಚ್ಚು ಮದ್ಯ ಸೇವಿಸಿದ ರಾಜ್ಯ ತೆಲಂಗಾಣ ಎಂದು ಅಂದಾಜಿಸಲಾಗಿದೆ.
ತೆಲಂಗಾಣ ಮುಂಚೂಣಿ
ಹೊಸ ವರ್ಷದ ಸ್ವಾಗತದಲ್ಲಿ ಭಾರತೀಯರು ದಾಖಲೆಯ ಮದ್ಯ ಸೇವನೆ ಮಾಡಿದ್ದಾರೆ. ಜನವರಿ 1ರಂದು ಮಾತ್ರ 24 ಗಂಟೆಗಳಲ್ಲಿ 1,800 ಕೋಟಿ ಮದ್ಯ ಮಾರಾಟವಾಗಿದೆ, ಕಳೆದ ವರ್ಷಕ್ಕಿಂತ 600 ಕೋಟಿ ಹೆಚ್ಚು.ಇದರಲ್ಲಿ ತೆಲಂಗಾಣ ರಾಜ್ಯ ಮುಂಚೂಣಿಯಲ್ಲಿದ್ದು, ಡಿಸೆಂಬರ್ 30 ಮತ್ತು 31ರಲ್ಲಿ 800 ಕೋಟಿ ಮಾರಾಟ ದಾಖಲಿಸಿದೆ ಎಂದು ವರದಿಯಾಗಿದೆ. ಹೈದರಾಬಾದ್ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಪಾರ್ಟಿಗಳು, ಬಾರ್‌ಗಳು ಮದ್ಯ ಸೇವನೆಯನ್ನು ಹೆಚ್ಚಿಸಿದ ಕಾರಣ ರಾಜ್ಯದ ಡಿಸೆಂಬರ್ ತಿಂಗಳ ಒಟ್ಟು ಮದ್ಯ ಮಾರಾಟ 5,100 ಕೋಟಿಗೆ ಏರಿದೆ.
ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದು, ಸುಮಾರು 600 ಕೋಟಿ ಮಾರಾಟವಾಗಿದೆ. ಲಕ್ನೌ ಮತ್ತು ನೋಯ್ಡಾ ನಗರಗಳ ನೈಟ್‌ಲೈಫ್ ಇದಕ್ಕೆ ಕಾರಣ.
ದೆಹಲಿ 400 ಕೋಟಿ ಮದ್ಯ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ, ಹೋಟೆಲ್‌ಗಳು ಮತ್ತು ಪ್ರೈವೇಟ್ ಪಾರ್ಟಿಗಳು ಪ್ರಮುಖವಾಗಿವೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ 308 ಕೋಟಿ ಮಾರಾಟವಾಗಿದ್ದು, ಬೆಂಗಳೂರು ಪಬ್ ಕಲ್ಚರ್ ಮುಖ್ಯ ಕಾರಣ. ಡಿಸೆಂಬರ್ ಕೊನೆಯ ವಾರದಲ್ಲಿ 1,669 ಕೋಟಿ ಮದ್ಯ ಮಾರಾಟವಾಗಿದೆ.
ಆಂಧ್ರ ಪ್ರದೇಶ 300 ಕೋಟಿ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ, ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚು.
ಕೇರಳದಲ್ಲಿ ಜನವರಿ 1ರಂದು 125.64 ಕೋಟಿ ಮಾರಾಟವಾಗಿದ್ದು, ಕೊಚ್ಚಿಯ ಕಡವಂತ್ರಾ ಔಟ್‌ಲೆಟ್ 1.17 ಕೋಟಿ ಮಾರಾಟದೊಂದಿಗೆ ಮುಂಚೂಣಿಯಲ್ಲಿದೆ.
ಒಡಿಶಾ ಮತ್ತು ಇತರ ರಾಜ್ಯಗಳಲ್ಲೂ ಮಾರಾಟ ಹೆಚ್ಚಳ ಕಂಡಿದೆ.ಈ ದಾಖಲೆ ಮಾರಾಟ ರಾಜ್ಯ ಸರ್ಕಾರಗಳಿಗೆ ಆದಾಯ ಹೆಚ್ಚಿಸಿದರೂ, ಮದ್ಯ ಸೇವನೆಯ ಆರೋಗ್ಯ ಅಪಾಯಗಳ ಬಗ್ಗೆ ಚಿಂತೆ ಹುಟ್ಟಿಸಿದೆ. ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟದ ನಿಯಂತ್ರಣಕ್ಕೆ ಸರ್ಕಾರಗಳು ಹೆಚ್ಚು ಗಮನ ಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).