ಮೃತ ರವಿ ಚೌಹಾಣ್ ಮತ್ತು ನಬಿ ಹುಸೇನ್  
ದೇಶ

ಕ್ಷುಲ್ಲಕ ಕಾರಣಕ್ಕೆ ಜಗಳ; ನಡು ಮಾರುಕಟ್ಟೆಯಲ್ಲೇ ಡ್ರೈವರ್ ತಲೆ ಕತ್ತರಿಸಿದ ವ್ಯಾಪಾರಿ; ವ್ಯಾಪಾರಿಯನ್ನು ಥಳಿಸಿ ಕೊಂದ ಸ್ಥಳೀಯರು | beheaded

ಪಾಟ್ನಾ: ಬಿಹಾರದಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದ್ದು, ವ್ಯಾಪಾರಿ ಮತ್ತು ವಾಹನ ಚಾಲಕನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳದಲ್ಲಿ ವ್ಯಾಪಾರಿಯೂ ಮಾರುಕಟ್ಟೆಯಲ್ಲೇ ಸಾವಿರಾರು ಜನರ ಮುಂದೆ ಚಾಲಕ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಆತನ ತಲೆ ಕತ್ತರಿಸಿದ್ದಾನೆ. ಬಳಿಕ ರೊಚ್ಚಿಗೆದ್ದ ಸ್ಥಳೀಯರು ಆ ಕೊಲೆಗಾರನನ್ನು ಥಳಿಸಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಗುರುವಾರ ಬೆಳಿಗ್ಗೆ ಫೋರ್ಬ್ಸ್​ ಗಂಜ್ ಮಾರುಕಟ್ಟೆಯಲ್ಲಿ ರಸ್ತೆ ಬದಿಯ ವ್ಯಾಪಾರಿ ರವಿ ಚೌಹಾಣ್ ಮತ್ತು ಪಿಕಪ್ ವ್ಯಾನ್ ಚಾಲಕ ನಬಿ ಹುಸೇನ್ ನಡುವೆ ಜಗಳ ನಡೆದಿದೆ. ಈ ವೇಳೆ ಹುಸೇನ್ ಮೇಲೆ ಚೌಹಾಣ್​​ನನ್ನು ಚಾಕುವಿನಿಂದ ಇರಿದಿದ್ದು, ಬಳಿಕ ನೆಲಕ್ಕೆ ಬಿದ್ದ ಬಳಿಕ ಆತನ ಶಿರಚ್ಚೇದನ ಮಾಡಿ ರಸ್ತೆಯಲ್ಲಿ ಓಡಾಡಿದ್ದಾನೆ.
ಈ ಅಟ್ಟಹಾಸವನ್ನು ನೋಡಿ ಭಯಭೀತಗೊಂಡ ಸ್ಥಳೀಯರು ಮತ್ತು ಮೃತ ಹುಸೇನ್ ಕುಟುಂಬಸ್ಥರು ಆರೋಪಿ ಚೌಹಾಣ್ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾಗಿ ಘೋಷಣೆ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದಾಗ್ಯೂ, ರಸ್ತೆಯಲ್ಲಿ ಬಿದ್ದಿದ್ದ ಚಾಲಕ ನಬಿ ಹುಸೇನ್ ಅವರ ಕತ್ತರಿಸಿದ ತಲೆಯನ್ನು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಟೀಕೆ ವ್ಯಕ್ತವಾಗಿದೆ.
ಇನ್ನೂ ಬಿಹಾರ ಕಾನೂನು ಸುವ್ಯವಸ್ಥೆ ಬಗ್ಗೆ ಕಿಡಿಕಾರಿರುವ ವಿಪಕ್ಷ ನಾಯಕ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಬಿಹಾರದ ಭಯಾನಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಒಬ್ಬ ವ್ಯಕ್ತಿ ಮಾರುಕಟ್ಟೆಯ ಮಧ್ಯದಲ್ಲಿ, ನೂರಾರು ಜನರ ಮುಂದೆ ಇನ್ನೊಬ್ಬ ವ್ಯಕ್ತಿಯ ಕತ್ತು ಸೀಳಿದ್ದಾನೆ. ನಂತತ ಕತ್ತರಿಸಿದ ತಲೆಯೊಂದಿಗೆ ಓಡಾಡಿದ್ದಾನೆ. ಬಳಿಕ ಮೃತರ ಕುಟುಂಬ ಸದಸ್ಯರು ಮತ್ತೆ ಕೊಲೆಗಾರನನ್ನು ಕೊಂದಿದ್ದಾರೆ. ಸಿಎಂ ಸ್ಥಾನಕ್ಕಾಗಿ ಆಡಳಿತರೂಢ ಎನ್​ಡಿಎ ನಾಯಕರು ಪೈಪೋಟಿ ನಡೆಸುತ್ತಿದ್ದು, ಬಿಹಾರದಲ್ಲಿ ಇಂತಹ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).