Viral video family living on flyover pillar
- ಫ್ಲೈ ಓವರ್ ಅಂಚಿನಲ್ಲಿ ಕುಟುಂಬ ಸಂಸಾರ ವಾಸ ಮಾಡುತ್ತಿರುವ ವಿಡಿಯೋ ವೈರಲ್.
- ಒಣ ಹಾಕಿದ ಬಟ್ಟೆ, ಚೇರು, ನೀರು, ಟಿವಿಯೊಂದಿಗೆ ಸಂಸಾರ ಮಾಡುತ್ತಿರುವ ಆಫ್ರೀಕನ್ ಕುಟುಂಬ.
- ಶೇ.97ರಷ್ಟು ಎಐ ನಿರ್ಮಿತ ವಿಡಿಯೋವಿರಬಹುದು ಎನ್ನುವುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದ ಮಾಹಿತಿ.
Viral video family living on flyover pillar: ವಾಹನಗಳ ಸಂಚಾರಕ್ಕಾಗಿ ಹಾಗೂ ಟ್ರಾಫಿಕ್ ತಪ್ಪಿಸುವ ಸಲುವಾಗಿ ನಿರ್ಮಿಸಲಾಗಿರುವ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಸದಾ ಗಿಜಿಗಿಡುವ ಸ್ಥಳದಲ್ಲಿ ಯಾವುದಾದರೂ ಮನೆ ಕಡಿಮೆಗೆ ಸಿಗುತ್ತೇ ಎಂದರೂ ಬೇಡ ಅನ್ನೋರು ಉಂಟು ಆದರೆ, ಇಲ್ಲೊಂದು ಆಫ್ರಿಕನ್ ಕುಟುಂಬಕ್ಕೆ ಫ್ಲೈ ಓವರ್ ಕೆಳಗೆ ಬಿಟ್ಟ ಕೊಂಚ ಜಾಗವೇ ಅರಮನೆ.
ಹೌದು, ಆಫ್ರಿಕನ್ ಕುಟುಂಬವೊಂದು ಮೇಲ್ಸೇತುವೆಯ ಕಿರಿದಾದ ಅಂಚಿನಲ್ಲೇ ಹಳೆಯ ಕಾಲದ ಟಿವಿ, ಚೇರು, ಹಗ್ಗ ಕಟ್ಟಿ ಒಣಗಿ ಹಾಕಿರುವ ಬಟ್ಟೆ, ಅಡುಗೆ ಪಾತ್ರೆಗಳು, ಬಕೆಟ್‌ಗಳನ್ನು ಇಟ್ಟುಕೊಂಡು ಮೂವರು ದೈನಂದಿನ ಸಂಸಾರ ನಡೆಸುತ್ತಿರುವ ಅಚ್ಚರಿಯ ವೀಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಕೆಲವರು ಈ ವಿಡಿಯೋ ಕಂಡು ಇದು ಬೆಂಗಳೂರಿನ ರಸ್ತೆಯೊಂದರಲ್ಲಿ ಕಂಡು ಬಂದ ದೃಶ್ಯ ಎಂದರೆ, ಇನ್ನೂ ಕೆಲವರು ಇದು ಸುಳ್ಳು. ನೈಜೀರಿಯಾದ ಲಾಗೋಸ್ ನಗರದ್ದು ಎನ್ನುತ್ತಿದ್ದಾರೆ. ಲಾಜಿಕ್ ಆಗಿ ಯೋಚಿಸಿದ ಕೆಲವರು, ಎಐನಿಂದ ನಿರ್ಮಾಣವಾದದ್ದು ಎನ್ನುತ್ತಿದ್ದಾರೆ. ಹಾಗಿದ್ರೆ ಈ ವಿಡಿಯೋ ಹಿಂದೆ ಇರುವ ಅಸಲಿ ಸತ್ಯ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ವೈರಲ್ ಆದ ವಿಡಿಯೋದಲ್ಲಿ ಏನಿದೆ?
15 ಸೆಕೆಂಡು ಇರುವ ವೈರಲ್ ಆದ ವಿಡಿಯೋದಲ್ಲಿ, ಫ್ಲೈ ಓವರ್ ಮೇಲೆ ಒಂದು ಕಿರಿದಾದ ಜಾಗ ಅಲ್ಲಿ ಒಬ್ಬ ಮಹಿಳೆ, ಪುರುಷ ಮತ್ತೊಬ್ಬ ವ್ಯಕ್ತಿ ಇದ್ದಾನೆ,. ಮಹಿಳೆ ಬಟ್ಟೆ ಒಣಗಿಸುತ್ತಿದ್ದರೆ, ಮತ್ತೊಬ್ಬ ವಯ್ಯಸ್ಸಾದ ವ್ಯಕ್ತಿ ಕುರ್ಚಿಯಲ್ಲಿ ಕುಳಿತು ಮಗ್ನಲ್ಲಿರುವ ಯಾವುದೋ ಪೇಯವನ್ನು ಹೀರುತ್ತಿದ್ದಾರೆ. ಮತ್ತೊಬ್ಬ ಬಗ್ಗಿ ಯಾವುದೋ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅದರ ಕೆಳಗೆ ವಾಹನಗಳು ನಿರಂತರವಾಗಿ ಓಡಾಡುತ್ತಿರುವುದು, ಅವರ ಮೇಲೆಯಿರುವ ಮೇಲ್ಸೇತುವೆಯಲ್ಲಿಯೂ ವಾಹನಗಳು ಸಂಚರಿಸುತ್ತಿರುವುದು ವಿಡಿಯೋದಲ್ಲಿ ಇದೆ.
ವೈರಲ್ ಆಗಿದ್ದು ಎಂದಿನಿಂದ
ಆಗಸ್ಟ್22ರಿಂದ ಈ ವಿಡಿಯೋ ಎಕ್ಸ್ ಸೇರಿದಂತೆ ನಾನಾ ಆನ್ಲೈನ್ ಫ್ಲಾಟ್ಫಾರ್ಮ್ನಲ್ಲಿ ಹರಿದಾಡುತ್ತಿದೆ. ಕೆಲ ಸೋಶಿಯಲ್ ಮೀಡಿಯಾದವರು ಇದು ನೈಜೀರಿಯಾದ ಲಾಗೋಸ್‌ನಲ್ಲಿ ಸೆರೆಹಿಡಿಯಲಾದ ದೃಶ್ಯ ಎಂದರೆ, ಇನ್ನೂ ಕೆಲವರು ಬೆಂಗಳೂರಿನಲ್ಲಿ 1 BHK ಬೇಕೇ, ಸುತ್ತಾ ಬಾಲ್ಕನಿ ಇರುತ್ತದೆ ಎಂದು ಗೇಲಿ ಮಾಡುತ್ತಾ ವಿಡಿಯೋ ಹಂಚಿಕೊಂಡಿದ್ದಾರೆ.
ಅಸಲಿ ಸತ್ಯ ಏನು?
ತನಿಖೆ ಮತ್ತು AI ಡಿಟೆಕ್ಷನ್ ಟೂಲ್‌ಗಳ ಮೂಲಕ ಈ ವಿಡಿಯೋವನ್ನು ಪರಿಶೀಲಿಸಿದಾಗ, ಇದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟಿದೆ ಎಂಬುದು ಸಾಬೀತಾಗಿದೆ. ಯಾವುದೇ ಸಿಡಿ ಅಥವಾ ಲಿಫ್ಟ್ ಇಲ್ಲದೆ ಟಿವಿ ಹಾಗೂ ಭಾರವಾದ ಸಾಮಾನುಗಳನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಪ್ರಾಯೋಗಿಕವಾಗಿ ಅಸಾಧ್ಯ ಎನ್ನಲಾಗಿದೆ, (ಏಜೆನ್ಸೀಸ್).