ನವದೆಹಲಿ: ಭಾರತದಲ್ಲಿ ಇ-ಸಿಗರೇಟ್ ಮತ್ತು ‘ಹೀಟ್-ನಾಟ್-ಬರ್ನ್’ ತಂಬಾಕು ಉತ್ಪನ್ನಗಳ ಮೇಲಿನ ನಿಷೇಧವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜಾಗತಿಕ ತಂಬಾಕು ಸಂಸ್ಥೆಯಾದ ‘ಫಿಲಿಪ್ ಮೋರಿಸ್ ಇಂಟರ್ನ್ಯಾಷನಲ್’, ತನ್ನ ಅತ್ಯಾಧುನಿಕ ‘ಐಕ್ಯೂಒಎಸ್’ ಸಾಧನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಕಳೆದ 4 ವರ್ಷಗಳಿಂದ ನಡೆಸುತ್ತಿದ್ದ ತೀವ್ರ ಲಾಬಿಗೆ ಈ ಮೂಲಕ ದೊಡ್ಡ ಹಿನ್ನಡೆಯಾಗಿದೆ.
‘ಈ ನಿಷೇಧವನ್ನು ರದ್ದುಗೊಳಿಸುವ ಅಥವಾ ಸಡಿಲಗೊಳಿಸುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ. ಪುರಾವೆ ಆಧಾರಿತ ತಂಬಾಕು ನಿಯಂತ್ರಣ ಕ್ರಮಗಳಿಗೆ ಭಾರತ ಬದ್ಧವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 2019ರಲ್ಲಿ ಯುವಜನತೆಯ ಆರೋಗ್ಯದ ದೃಷ್ಟಿಯಿಂದ ಭಾರತ ಇ-ಸಿಗರೇಟ್ ನಿಷೇಧಿಸಿತ್ತು. ಆದರೆ, ಫಿಲಿಪ್ ಮೋರಿಸ್ ತನ್ನ ಉತ್ಪನ್ನಗಳು ಸಾಂಪ್ರದಾಯಿಕ ಸಿಗರೇಟ್ಗಿಂತ ಕಡಿಮೆ ಹಾನಿಕಾರಕ ಎಂದು ವಾದಿಸಿತ್ತು. ಅದರ ಸಿಇಒ ಜಾಸೆಕ್ ಓಲ್ಜಾಕ್, ಭಾರತದ ಈ ನಿರ್ಧಾರವನ್ನು ಅರ್ತಾಕ ಎಂದು ಕರೆದಿದ್ದಾರೆ.