ವೃಂದಾವನದ ಆಶ್ರಮದಲ್ಲಿ ಪ್ರೇಮಾನಂದ್ ಮಹಾರಾಜರ ಆಶೀರ್ವಾದ ಪಡೆಯುತ್ತಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ 
ದೇಶ

ಪ್ರೇಮಾನಂದ್​ ಮಹಾರಾಜರ ಭೇಟಿಗೆ 5 ಕೋಟಿ ಡೀಲ್​? ವಿರಾಟ್​ ಕೊಹ್ಲಿ ವಿರುದ್ಧದ ಆರೋಪಕ್ಕೆ ವಕ್ತಾರ ನೀಡಿದ ಸ್ಪಷ್ಟನೆ ಇಲ್ಲಿದೆ | Virat Kohli Controversy

ವೃಂದಾವನದ ಪ್ರೇಮಾನಂದ್ ಮಹಾರಾಜರ ಭೇಟಿಗೆ ವಿರಾಟ್ ಕೊಹ್ಲಿ ₹5 ಕೋಟಿ ಪಡೆದಿದ್ದಾರೆ ಎಂಬ ಆರೋಪ ಸಂಪೂರ್ಣ ಆಧಾರರಹಿತ ಎಂದು ಕೊಹ್ಲಿ ವಕ್ತಾರ ಸ್ಪಷ್ಟಪಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ.

Premanand Maharaj: ಎರಡು ಕಿಡ್ನಿಗಳಿಲ್ಲದಿದ್ದರೂ ಪವಾಡ ಸದೃಶ್ಯವಾಗಿ, ಜೀವಂತವಾಗಿದ್ದು, ಜೀವನದಲ್ಲಿ ಹೇಗೆ ಪ್ರೀತಿಯಿಂದ, ಮೌಲ್ಯಯುತವಾಗಿ ಬದುಕಬೇಕೆಂದು ಪ್ರವಚನ ನೀಡುವ ಮೂಲಕ ಸಾಕಷ್ಟು ಖ್ಯಾತಿಗಳಿಸಿರುವ ಆಧ್ಯಾತ್ಮಿಕ ವ್ಯಕ್ತಿ ಹೆಸರೇ ಪ್ರೇಮಾನಂದ್​ ಮಹಾರಾಜ್​.

ಇವರು ಪ್ರೀತಿ, ಭಕ್ತಿ, ಸಹನೆ, ತಾಳ್ಮೆ ಮೊದಲಾದ ಮಾನವೀಯ ಸಂಗತಿಗಳ ಬಗ್ಗೆ ಪ್ರವಚನ ನೀಡುತ್ತಾ ದೇಶದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಇವರ ಅನೇಕ ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಕೂಡ ಆಗಿವೆ.

ಆದರೆ, ಕೆಲ ದಿನಗಳ ಹಿಂದೆ ಇವರ ಮೇಲೆ ಇವರದೇ ಆಶ್ರಮದ ದಿನೇಶ್ ಫಲಹಾರಿ ಮಹಾರಾಜ್, ಎನ್ನುವವರು ಮಾಡಿರುವ ಆರೋಪವೊಂದು ಸಾಕಷ್ಟು ಸದ್ದು ಮಾಡುತ್ತಿದೆ. ದಿನೇಶ್ ಫಲಹಾರಿ ಮಹಾರಾಜ್ ಆರೋಪದ ಪ್ರಕಾರ, ಖ್ಯಾತ ಕ್ರಿಕೆಟಿಗ ವಿರಾಟ್​ ಕೊಹ್ಲಿ ಹಾಗೂ ಆತನ ಪತ್ನಿ ಅನುಷ್ಕಾ ಶರ್ಮಾ ವೃಂದಾವನದ, ಪ್ರೇಮಾನಂದ ಮಹಾರಾಜ್​ರನ್ನು ಬೇಟಿಯಾಗಲು 5 ಕೋಟಿ ರೂಪಾಯಿ ಪಡೆದಿದ್ದರೆಂದು, ಇದರ ಹಿಂದೆ ಪ್ರೇಮಾನಂದರ ಖ್ಯಾತಿಯನ್ನು ಹೆಚ್ಚಿಸುವ ಪಿಆರ್ ಅಜೆಂಡಾ ಇದೆ ಎನ್ನವುದು ಅವರ ಆರೋಪವಾಗಿತ್ತು.

ವಿರಾಟ್​ ವಕ್ತಾರ ಹೇಳಿದ್ದೇನು?

ದಿನೇಶ್ ಫಲಹಾರಿ ಮಹಾರಾಜ್ ಮಾಡಿರುವ ಈ ಆರೋಪ ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಓಹೋ.. ಈ 5 ಕೋಟಿ ಸಲುವಾಗಿ ವಿರಾಟ್​ ಕೊಹ್ಲಿ ಈ ಬಾಬಾನ ಬೇಟಿಗೆ ಹೋಗುತ್ತಿರಬೇಕು ಎಂಬ ವದಂತಿ ಜೋರಾಯಿತು. ಯಾವಾಗ, ಈ 5 ಕೋಟಿ ವದಂತಿ ವ್ಯಾಪ್ತಿ ಮೀರಿ ಹರಡಲು ಶುರುವಿಟ್ಟ ಕಾರಣ ಈಗ ಇದಕ್ಕೆ ವಿರಾ ಟ್​ ಕೊಹ್ಲಿ ಅವರ ವಕ್ತಾರರೊಬ್ಬರು ಇದಕ್ಕೆ ಸಷ್ಟನೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ, ದಿನೇಶ್ ಫಲಹಾರಿ ಮಹಾರಾಜ್ ಅವರು, ವಿರಾಟ್​ ಕೊಹ್ಲಿ, ಪ್ರೇಮಾನಂದ್​ ಮಹಾರಾಜರ ಬೇಟಿ ಮಾಡಿದ ಕುರಿತು ನೀಡಿರುವ ಹೇಳಿಕೆ/ ಆರೋಪವು ಆಧಾರರಹಿತ, ಸುಳ್ಳಿನಿಂದ ಕೂಡಿದ ಹಾಗೂ ಸತ್ಯಕ್ಕೆ ದೂರವಾಗಿದ್ದು, ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ವಿರಾಟ್​ ಕೊಹ್ಲಿ, ಮಹಾರಾಜರ ಬಗ್ಗೆ ಹೊಂದಿರುವ ಆಳವಾದ ಭಕ್ತಿ ಹಾಗೂ ನಂಬಿಕೆ ಕಾರಣಕ್ಕಾಗಿ ಪ್ರೇಮಾನಂದ ಮಹಾರಾಜ್​ರನ್ನು ಭೇಟಿ ಮಾಡಿದ್ದಾರೆ ವಿನಃ ಇದರಲ್ಲಿ ಯಾವುದೇ ವ್ಯವಹಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದ ಬಗ್ಗೆ ಪ್ರಕಟನೆ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಸತ್ಯಾಂಶವನ್ನು ತಿಳಿದು ಕೊಳ್ಳಿ, ಸುಮ್ಮನೆ ಸುಳ್ಳು ವಂದತಿಗಳನ್ನು ಹಂಚಿಕೊಳ್ಳಬೇಡಿ ಎಂದು ವಿರಾಟ್​ ವಕ್ತಾರ ತಿಳಿಸಿದ್ದಾರೆ.

ಸರ್ಕಾರ ತನಿಖೆ ನಡೆಸಲಿ!

ಪ್ರೇಮಾನಂದ ಮಹರಾಜ್​​ರನ್ನು ಭೇಟಿ ಮಾಡಲು ವಿರಾಟ್​ ಕೊಹ್ಲಿ ಹಣ ಪಡೆದಿದ್ದಾರೆ ಎಂದು ದಿನೇಶ್ ಫಲಹಾರಿ ಮಹಾರಾಜ್ ಮಾಡಿರುವ ಆರೋಪ, ಪ್ರೇಮಾನಂದರ ಭಕ್ತವೃಂಧದ ಕೋಪಕ್ಕೆ ಕಾರಣವಾಗಿದೆ. ದಿನೇಶ್ ಫಲಹಾರಿ ಮಹಾರಾಜ್ ಅವರು ಹೀಗೆ ಸುಖಾಸುಮ್ಮನೆ ಆರೋಪ ಮಾಡಬಾರದು. ಇದರಿಂದ ಮಹಾರಾಜರ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ.

ಹೀಗಾಗಿ, ಈ ದಿನೇಶ್ ಫಲಹಾರಿ ಮಹಾರಾಜ್ ಅವರ ವಿರುದ್ಧ ಸರ್ಕಾರ ತನಿಖೆ ನಡೆಸಬೇಕು. ಅವರು ಮಾಡಿರುವ ಆರೋಪ ಸುಳ್ಳಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಗಿ ಪ್ರೇಮಾನಂದ್​ ಮಹಾರಾಜರ ಭಕ್ತರು ಆಗ್ರಹಿಸಿದ್ದಾರೆ, (ಏಜೆನ್ಸೀಸ್).