9-Year-Old Girl Raped, Murdered
- ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಮಹಾರಾಷ್ಟ್ರದಲ್ಲಿ ಬೆಳಕಿಗೆ
- 25 ವರ್ಷದ ಯುವಕನನ್ನು ಬಂಧಿಸಿದ ಪುಣೆ ಗ್ರಾಮೀಣ ಠಾಣಾ ಪೊಲೀಸರು.
- ಕಠಿಣ ಕ್ರಮ, ಶೀಘ್ರ ತನಿಖೆಗೆ ಡಿಸಿಎಂ ಸುನೇತ್ರಾ ಪವಾರ್ ಆದೇಶ.
ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿನ ಜುನ್ನಾರ್ ತಹಸಿಲ್‌ನ ಪಿಂಪಲ್‌ವಾಂಡಿ ಗ್ರಾಮದಲ್ಲಿ 25 ವರ್ಷದ ಯುವಕನೊಬ್ಬ,
10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಭೀಕರ ಕೃತ್ಯ
ಬೆಳಕಿಗೆ ಬಂದಿದೆ.
ಸದ್ಯ 25 ವರ್ಷದ ಆರೋಪಿ ಸಾಹಿಲ್ ಖೈರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ಎಂಬಾತನು ತಪ್ಪನ್ನು ಒಪ್ಪಿಕೊಂಡಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಆತನಿಗೆ ಗಲ್ಲು ಶಿಕ್ಷೆಯಾಗಲೇ ಬೇಕು ಎಂದು ಒತ್ತಾಯಿಸಿ ಪಿಂಪಲ್‌ವಾಂಡಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಡಳಿತ ಮಂಡಳಿಗೆ ಎಚ್ಚರಿಕೆ ಕೊಟ್ಟಿರುವ ದೃಶ್ಯಾವಳಿಗಳು ವೈರಲ್ ಆಗುತ್ತಿದೆ.
ಏನಾಗಿತ್ತು?
ಮಂಗಳವಾರ ಮಧ್ಯಾಹ್ನ 3:30ಕ್ಕೆ ಬಾಲಕಿ ತನ್ನ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತ್ತಿತ್ತು. ಈ ವೇಳೆ ಬಂದ ಈ ಕಾಮುಕ ಬಾಲಕಿಗೆ ಪೇರಳೆ ಹಣ್ಣು ಕೊಟ್ಟಿದ್ದಾನೆ. ನಂತರ ಆಕೆಯನ್ನು, ಕಬ್ಬಿನ ಹೊಲಕ್ಕೆ ಸೈಕಲ್ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅತ್ಯಾಚಾರ ನಡೆಸಿ ಕೊಂದಿದ್ದಾನೆ. ಕತ್ತಲಾಗುತ್ತಿದ್ದರು ಮಗಳು ಬಾರದೆ ಇರುವುದನ್ನು ಕಂಡ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎನ್ನಲಾಗಿದೆ.
ಸೈಕಲ್ನಲ್ಲಿ ಪ್ರಯಾಣ
ಪೋಷಕರ ದೂರಿನ ಮೇರೆಗೆ ತನಿಖೆ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ,. ಈ ವೇಳೆ ಯುವಕನೊಬ್ಬನ ಸೈಕಲ್ನಲ್ಲಿ ಬಾಲಕಿ ಹೋಗುತ್ತಿರವುದು ಕಂಡುಬಂದಿದೆ. ಸೈಕಲ್ ಮತ್ತು ಯುವಕ ಯಾರೆಂದು ತೀವ್ರ ತನಿಖೆ ನಡೆಸಿದಾಗ ಇದು ಸಾಹಿಲ್ ಖೈರೆ ಎನ್ನುವುದು ತಿಳಿದುಬಂದಿದೆ.
ಸದ್ಯ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನು ಕೊಟ್ಟ ಮಾಹಿತಿ ಪ್ರಕಾರ ಯುವತಿಯ ಮೃತದೇಹವನ್ನು ಹುಡುಕಿ ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸಲಾಗಿದ್ದು, ವಿಧಿವಿಜ್ಞಾನ ತಂಡವು ಕೂಡ ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಪೊಲೀಸರು ಏನಂದ್ರು?
ಪುಣೆ ಗ್ರಾಮೀಣ ಎಸ್ಪಿ ಸಂದೀಪ್ ಗಿಲ್ ಮಾತನಾಡಿ, ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಡಿ 25 ವರ್ಷದ ಯುವಕನನ್ನು ಬಂಧಿಸಲಾಗಿದೆ. ಆರೋಪಿಗೆ ಮತ್ತು ಬಾಲಕಿ ಹೆಚ್ಚಾಗಿ ತಿಳಿದಿತ್ತು. ಒಬ್ಬರನೊಬ್ಬರು ಮಾತನಾಡಿಸುತ್ತಿದ್ದರು ಎಂದು ಹೇಳಿದರು.
ಮುಂದುವರೆದು, ಈ ಕೇಸ್ ಬಗ್ಗೆ ಮಾಹಿತಿ ಸಿಗುತ್ತಲೇ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು.. ಘಟನಾ ಸ್ಥಳದಲ್ಲಿ ವಿಧಿ-ವಿಜ್ಞಾನ ತಂಡವೂ ಅಗತ್ಯ ಪರೀಕ್ಷೆ ಮತ್ತು ಸಾಕ್ಷಿಗಳಿಗಾಗಿ ಕಲೆ ಹಾಕುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಾಹಿತಿ ಹಂಚಿಕೊಡಿದ್ದಾರೆ.
ಸುನೇತ್ರಾ ಪವಾರ್ ಹೇಳಿದ್ದೇನು?
ಪುಣೆ ಜಿಲ್ಲೆಯ ಜುನ್ನರ್ ತಾಲೂಕಿನ ಪಿಂಪಲ್‌ವಾಂಡಿಯಲ್ಲಿ ಎಂಟೂವರೆ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ಕೊಲೆ ಮಾಡಿದ ಘಟನೆ ಅತ್ಯಂತ ದುರಂತಕರ ಮತ್ತು ಹೃದಯವಿದ್ರಾವಕವಾಗಿದೆ. ಈ ಘಟನೆಯಿಂದ ಹೃದಯಕ್ಕೆ ಅಪಾರ ನೋವುಂಟಾಗಿದೆ.ಈ ಪ್ರಕರಣದ ಬಗ್ಗೆ ಪುಣೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಂದೀಪ್ ಸಿಂಗ್ ಗಿಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತನಿಖೆಯನ್ನು ಪರಿಶೀಲಿಸಿದ್ದೇನೆ ಮತ್ತು ಈ ವಿಷಯದಲ್ಲಿ ಪಾರದರ್ಶಕ ಹಾಗೂ ಸಂಪೂರ್ಣ ತನಿಖೆ ನಡೆಸಿ ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದೇನೆ.
ಪೊಲೀಸರು ಶಂಕಿತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗೆ ಸಾಧ್ಯವಾದಷ್ಟು ಬೇಗನೆ ಕಠಿಣ ಶಿಕ್ಷೆ ದೊರಕುವಂತೆ ಮಾಡಲು, ಈ ಪ್ರಕರಣದ ವಿಚಾರಣೆಯನ್ನು ಫಾಸ್ಟ್-ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಸುವಂತೆ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಗೌ. ದೇವೇಂದ್ರ ಫಡ್ನವೀಸ್ ಜಿ ಅವರಿಗೆ ಮನವಿ ಮಾಡುತ್ತೇನೆ ಎಂದು ಡಿಸಿಎಂ ಸುನೇತ್ರಾ ಪವಾರ್ ಹೇಳಿದರು.
ಪಿಂಪಲ್ವಾಡಿಯಲ್ಲಿ ಪ್ರತಿಭಟನೆ
ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೃತ ಬಾಲಕಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 15 ದಿನಗಳಲ್ಲಿ ನ್ಯಾಯ ದೊರಕಿಸಿಕೊಡದಿದ್ದರೆ, ತಪ್ಪಿತಸ್ಥನಿಗೆ ಮರಣದಂಡನೆ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಆಡಳಿತ ಮಂಡಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಅವನು ನಮ್ಮ ಸಮಯದಾಯದವನು..ನಮ್ಮ ಸಂಬಂಧಿಕನೇ ಆಗಿರಬಹುದು. ಆದರೆ ಮಗಳನ್ನು ಕೊಂದಿದ್ದಾನೆ. ಆತನನ್ನು ಸುಮ್ಮನೇ ಬಿಡಬೇಡಿ. ದಯವಿಟ್ಟು ಗಲ್ಲು ಶಿಕ್ಷೆ ವಿಧಿಸಿ ಎಂದು ಹೋರಾಟ ಮಾಡಿರುವ ದೃಶ್ಯಾವಳಿಗಳು ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ, (ಏಜೆನ್ಸೀಸ್).