ಹರಕೆ ತೀರಿಸಿದ ವ್ಯಕ್ತಿ  
ದೇಶ

ತೆಂಗಿನಕಾಯಿ ಒಡೆದು... ಪತ್ನಿಯಿಂದ ಮುಕ್ತಿ ಕೊಡಿಸಿದ ದೇವರಿಗೆ 9 ಕಿಮೀ ದಂಡವತ್ ಯಾತ್ರೆಯ ಹರಕೆ!

ಪ್ರಮುಖ ಮುಖ್ಯಾಂಶಗಳು

  • ಡಿವೋರ್ಸ್​ ಕೊಡಿಸಪ್ಪ ಎಂದು ದೇವರಿಗೆ ಹರಕೆ ಹೊತ್ತ ವ್ಯಕ್ತಿ
  • ಪತ್ನಿಯಿಂದ ಮುಕ್ತಿ ಪಡೆದ ಬೆನ್ನಲ್ಲೇ ದೇವರಿಗೆ ಹರಕೆ
  • 9 ಕಿ.ಮೀ ಕಾಲ್ನಡಿಗೆ ಬಂದ ವ್ಯಕ್ತಿಯ ದೃಶ್ಯ ವೈರಲ್
ಉತ್ತರ ಪ್ರದೇಶ: ಭಾರತದಲ್ಲಿ ಮದುವೆಯಾಗುವ ಸಂಖ್ಯೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚಾಗಿ ವಿಚ್ಛೇದನಗಳ ಸಂಖ್ಯೆಯೇ ಅಧಿಕ. ಇದು ಆಘಾತಕಾರಿ ಸಂಗತಿಯಾದರೂ ತೀರ ಸಾಮಾನ್ಯ ಎನ್ನುವಂತಾಗಿದೆ. ಡಿವೋರ್ಸ್​ ಪಡೆದ ತಕ್ಷಣ ನಿಟ್ಟುಸಿರು ಬಿಡುವ ದಂಪತಿಗಳು, ಒಬ್ಬರ ಮುಖವನ್ನು ಮತ್ತೊಬ್ಬರು ನೋಡದೆ ಕೋರ್ಟ್​ನಿಂದ ಕಾಲ್ಕಿಳುತ್ತಾರೆ. ಇನ್ನೂ ಕೆಲವರು, ಪತಿ ಅಥವಾ ಪತ್ನಿ ಹಾಕಿರುವ ವಿಚ್ಛೇದನ ಅರ್ಜಿ ಉಲ್ಟಾ ಹೊಡೆಯಲಿ, ಅವರ ಮನಸ್ಸು ಬದಲಾಗಲಿ, ಎಲ್ಲವೂ ಮುಂಚಿನಂತೆ ಸರಿಯಾಗಿ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದ್ರೆ, ಇಲ್ಲೊಬ್ಬ ಮಾತ್ರ ಡಿವೋರ್ಸ್​ ಕೊಡಿಸಪ್ಪ ಎಂದು ದೇವರಿಗೆ ಹರಕೆ ಹೊತ್ತಿದ್ದು, ಅದು ಕಡೆಗೂ ನೆರವೇರಿದೆ.  
ಲಖನೌ ಮೂಲದ ವ್ಯಕ್ತಿ ತನ್ನ ಗ್ರಾಮ ದೇವತೆಗೆ ಹೆಂಡತಿಯಿಂದ ಮುಕ್ತಿ ಕೊಡಿಸುವಂತೆ ಹರಕೆ ಹೊತ್ತಿದ್ದನ್ನು. ಮದುವೆಯಾದ ಒಂದು ವರ್ಷಕ್ಕೆ ವಿಚ್ಛೇದನ ಅರ್ಜಿ ಹಾಕಿದ ಈತ, ಪತ್ನಿಯ ಜೊತೆಗೆ ಪದೇ ಪದೇ ಜಟಾಪಟಿ ಆಗುತ್ತಿದ್ದರಿಂದ ಬೇಸತ್ತು ಹೋಗಿದ್ದ. ಇದರಿಂದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಕಡೆಗೂ ಬಯಸಿದಂತೆ ನಡೆದಿದೆ. 
ಹರಕೆ ಈಡೇರುತ್ತಿದ್ದಂತೆ ಬೈದಾ ಸಮಯ್ ಮಾತಾ ದೇಗುಲಕ್ಕೆ ಭೇಟಿ ನೀಡಿದ ಈತ, 9 ಕಿ.ಮೀ ದಂಡವತ್ ಯಾತ್ರೆಯನ್ನು ಮಾಡಿದ್ದಾನೆ. ಇದಕ್ಕೆ ಆತನ ಹೆತ್ತವರು ಬೆಂಬಲಿಸಿದ್ದು, ಜೊತೆಯಲ್ಲೇ ಮೈಲಿಗಳವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಸಾಗುವ ಮಾರ್ಗದಲ್ಲಿ ಪ್ರತಿ ಎರಡು ಹೆಜ್ಜೆ ಹಾಕುತ್ತಿದ್ದಂತೆ, ಜೈಶ್ರೀರಾಮ್​ ಮತ್ತು ಜೈಭಜರಂಗಬಲಿ ಎಂದು ಹೇಳುತ, ನಮಸ್ಕರಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 
ಪತ್ನಿಯಿಂದ ಮುಕ್ತಿ ಪಡೆದ ವ್ಯಕ್ತಿಯನ್ನು ನರ್ಖೋರಿಯಾ ಗ್ರಾಮದ ಜೋಗೇಶ್ ಎಂದು ಗುರುತಿಸಲಾಗಿದೆ. ದಿನವಿಡೀ ಉಪವಾಸವಿದ್ದು, 12 ತಾಸಿನಲ್ಲಿ 9 ಕಿ.ಮೀ ವರೆಗೆ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಹರಕೆ ತೀರುತ್ತಿದ್ದಂತೆ ತೆಂಗಿನಕಾಯಿ ಒಡೆದು, ಊಟ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. 2022ರಲ್ಲಿ ಮದುವೆಯಾದ ಈತ, ಕಡೆಗೂ ಬಯಸಿದಂತೆ 2026ರಲ್ಲಿ ದಾಂಪತ್ಯ ಜೀವನವನ್ನು ಮುರಿದುಕೊಂಡಿದ್ದಾರೆ,(ಏಜೆನ್ಸೀಸ್).