Warangal Shiva Temple Demolition
- 800 ವರ್ಷದ ಹಳೆಯ ಶಿವನ ದೇವಸ್ಥಾನ ತೆಲಂಗಾಣದಲ್ಲಿ ಧ್ವಂಸ
- ಕಾಕತೀಯರ ಆಳ್ವಿಕೆ ಕಾಲದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನ
- ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ಕ್ರಮಕ್ಕೆ ಒತ್ತಾಯ
ವಾರಂಗಂಲ್: ತೆಲಂಗಾಣ ಮತ್ತು ಆಂಧ್ರಪ್ರದೇಶ ಆಳಿದ ಕಾಕತೀಯರ ಶತಮಾನದ ಶಿವನ ದೇವಸ್ಥಾನವನ್ನು ಶಾಲೆ ನಿರ್ಮಿಸುವ ಸಲುವಾಗಿ ದ್ವಂಸ ಮಾಡಿರುವ ಘಟನೆ ವಾರಂಗಲ್ನಲ್ಲಿ (Warangal Shiva Temple Demolition)ನಡೆದಿದೆ. ಸದ್ಯ ಘಟನೆಯ ಬಗ್ಗೆ ಆಕ್ರೋಶ ಭುಗಿಲೆದ್ದಿದ್ದು ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಇತಿಹಾಸಕಾರರು ಇದಕ್ಕೆ ಹೊಣೆಗಾರಿಕೆ ವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಏನಿದು ಕಾಕತೀಯರ ಇತಿಹಾಸ
12ರಿಂದ 14ನೇ ಶತಮಾನದವರೆಗೆ ತೆಲಂಗಾಣ ಮತ್ತು ಆಂಧ್ರ ಪ್ರದೇಶವನ್ನು ಆಳಿದ ರಾಜವಂಶ ಇಂದಿನ ವಾರಂಗಲ್ ಅಂದಿನ ಒರುಗಲ್ಲು ಅವರ ರಾಜಧಾನಿಯಾಗಿತ್ತು. ಇವರ ಆಡಳಿತಾವಧಿಯಲ್ಲಿ ಸಾಹಿತ್ಯ, ಸಂಸ್ಕೃತಿ, ಕಕಲೆ ವಾಸ್ತುಶಿಲ್ಪಕ್ಕೆ ಬೆಲೆ ಕೊಟ್ಟಿದ್ದರು. 1ನೇ ಪ್ರೋಲ ಎನ್ನುವವರು ಕಾಕತೀಯ ವಂಶದ ಆಳ್ವಿಕೆಗೆ ಬುನಾದಿ ಹಾಕಿದವರಾಗಿದ್ದಾರೆ. ಇವರ ಕಾಲದಲ್ಲಿ ಕಟ್ಟಿದ ರಾಮಪ್ಪ ದೇವಾಲಯ, ಸಾವಿರ ಕಂಬದ ಬಸದಿ, ವಾರಂಗಲ್ ಕೋಟೆ ಸಾಕಷ್ಟು ಪ್ರಸಿದ್ಧಿ ಕಂಡಿವೆ.
ಈ ರಾಜರ ವಂಶದವರೇ ಕಟ್ಟಿದ ಖಾನಾಪುರ ಮಂಡಲದ ಅಶೋಕ ನಗರದಲ್ಲಿರುವ ಪುರಾತನ ಶಿವ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಸರ್ಕಾರದ ಸಮಗ್ರ ಶಾಲೆ ನಿರ್ಮಾಣದ ಹೆಸರಿನಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಕಟ್ಟಡವನ್ನು ಜೆಸಿಬಿ ಸಹಾಯದಿಂದ ಕೆಡವಲಾಗಿದೆ ಎಂದು ಕಿಡಿಕಾರಿದ್ದಾರೆ.
ಅಶೋಕ ನಗರದಲ್ಲಿರುವ ಹಳೆಯ ಮಣ್ಣಿ ಕೋಟೆಯ ಆವರಣದಲ್ಲಿರುವ ಪುರಾತನದ ಶಿವ ದೇವಾಲಯವನ್ನು 13ನೇ ಶತಮಾನದಲ್ಲಿ ಕಾಕತೀಯ ವಂಶದ ಪ್ರಸಿದ್ಧ, ಶೌರ್ಯ ದೊರೆ ಗಣಪತಿದೇವನ ಕಾಲಕ್ಕೆ ಸೇರಿದ್ದಾಗಿದೆ ಎನ್ನಲಾಗಿದೆ. ಫೆಬ್ರವರಿ 1231 AD ಕಾಲದ ಅಪರೂಪದ ಏಳು ತೆಲುಗು ಶಾಸನವಿತ್ತು.
ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು
ಪುರಾತನ ಕಾಲದ ಶಿವಾಲಯ ಕೆಡವಿದ ಹಿನ್ನೆಲೆ ತೆಲಂಗಾಣದ ಹಕ್ಕುಗಳ ವಕೀಲ ರಾಮರಾವ್ ಇಮ್ಮನೇನಿ ಅವರು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಮತ್ತು ಪುರಾತತ್ವ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದ್ದು, ಆದರೆ, ಕೆಲವರು ತೆಲಂಗಾಣ ಪಾರಂಪರಿಕ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ನೂತನ ದೇಗುಲ ಕಟ್ಟುವ ಭರವಸೆ
ದೇಗುಲ ಧ್ವಂಸಗೊಳ್ಳುತ್ತಲೇ ಪ್ರತಿಭಟನೆ ಭುಗಿಲೆದ್ದಿತ್ತು ಆ ಕೂಡಲೇ ಘಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ, ಶಾಸಕರು ಹೋರಾಟಗಾರರ ಬಳಿ ಮಾತನಾಡಿದ್ದಾರೆ, ಉದ್ದೇಶಪೂರ್ವಕವಾಗಿ ದೇಗುಲ ಧ್ವಂಸಗೊಳಿಸಿಲ್ಲ.ಹಳೆಯ ಶಿಥಿಲಾವಸ್ಥೆಯಲ್ಲಿದ್ದ ರಚನೆಯನ್ನು ತೆರವುಗೊಳಿಸಲಾಗಿದೆ ಅದೇ ಸ್ಥಳದಲ್ಲಿ ಕಾಕತೀಯ ಶೈಲಿಯಲ್ಲೇ ಮರುನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).