AshokDham ಸಾಂದರ್ಭಿಕ ಚಿತ್ರ 
ದೇಶ

ಶ್ರಾವಣ ಸೋಮವಾರವೇ ನಡೀತು ಘೋರ ದುರಂತ: ಶಿವನ ದರ್ಶನಕ್ಕೆ ಬಂದಿದ್ದ 7 ಭಕ್ತರು ಕಾಲ್ತುಳಿತಕ್ಕೆ ಬಲಿ! Ashok Dham

ಬಿಹಾರ: ಲಖೀಸರೈ ಜಿಲ್ಲೆಯ ಪ್ರಸಿದ್ಧ ಅಶೋಕ್ ಧಾಮ್ ದೇವಾಲಯದಲ್ಲಿ ಶ್ರಾವಣ ಮಾಸದ ಕಡೆಯ ಸೋಮವಾರದಂದು (

Ashok Dham)

ಶಿವನ ದರ್ಶನಕ್ಕೆ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತಿದ್ದಾಗ ಕಾಲ್ತುಳಿತ ಸಂಭವಿಸಿದ್ದು ಕನಿಷ್ಠ ಎಂಟು ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಸೋಮವಾರ ಮುಂಜಾನೆ 6:30ರಿಂದ 6:45ರ ಸುಮಾರಿಗೆ ಎರಡು ರೈಲುಗಳಲ್ಲಿ ಒಮ್ಮೆಲೇ ನಿಲ್ದಾಣಕ್ಕೆ ಅಪಾರ ಸಂಖ್ಯೆಯ ಪ್ರಯಾಣಿಕರು ಹಾಗೂ ಭಕ್ತರು ಆಗಮಿಸಿದ್ದರಿಂದ ದೇವಾಲಯದ ಆವರಣದಲ್ಲಿ ಅಭೂತಪೂರ್ವ ಜನಸ್ತೋಮ ನೆರೆದಿತ್ತು. ಈ ವೇಳೆ ವಿದ್ಯುತ್ ತಂತಿಯೊಂದು ಹರಿದು ಕೆಳಗೆ ಬಿದ್ದಿದ್ದರಿಂದ ತೀವ್ರ ಭೀತಿ ಉಂಟಾಯಿತು. ಆತಂಕಕೊಂಡ ಭಕ್ತರು ಎಲ್ಲೆಂದರಲ್ಲಿ ಓಡಲು ಯತ್ನಿಸಿದಾಗ ಜನದಟ್ಟಣೆಯ ಒತ್ತಡಕ್ಕೆ ಬ್ಯಾರಿಕೇಡ್​ವೊಂದು ಮುರಿದು ಬಿದ್ದು, ಭಕ್ತರು ಒಬ್ಬರ ಮೇಲೋಬ್ಬರು ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ.
ಘಟನೆ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ತಕ್ಷಣವೇ 10ರಿಂದ 15 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಲಖೀಸರೈ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ (ಏಜೆನ್ಸೀಸ್​).