husband in Andhra builds desi escalators for wife 
ದೇಶ

ಮಂಡಿ ನೋವಿನಿಂದ ಮೆಟ್ಟಿಲು ಇಳಿದು, ಹತ್ತಲು ಕಷ್ಟ ಪಡ್ತಿದ್ದ ಹೆಂಡ್ತಿ; ದೇಸಿ ಲಿಫ್ಟ್​​ ತಯಾರಿಸಿ ಕೊಟ್ಟ ಆಂಧ್ರದ ಮೆಕ್ಯಾನಿಕ್​​​​ ಗಂಡ..Andhra

ಪ್ರಮುಖ ಮುಖ್ಯಾಂಶಗಳು

  • ಮಂಡಿ ನೋವಿನಿಂದ ಬಳಲುತ್ತಿದ್ದ ಹೆಂಡತಿಗೆ ಗಿಫ್ಟ್​ ತಯಾರಿಸಿಕೊಟ್ಟ ಮೆಕ್ಯಾನಿಕ್​
  • 5ನೇ ಕ್ಲಾಸ್ ಓದಿದ್ದ ಮೆಕ್ಯಾನಿಕ್​ ಯಂತ್ರ ದುರಸ್ತಿ ಕಾರ್ಯದಲ್ಲಿ ಭಾರಿ ಫೇಮಸ್ಸು
  • 20 ದಿನದಲ್ಲಿ ದೇಸಿ ಲಿಫ್ಟ್​ ತಯಾರಿಸಿ ಕೊಟ್ಟು ಹೆಂಡತಿ ಪ್ರೀತಿಗೆ ಪಾತ್ರರಾದ ಮೆಕ್ಯಾನಿಕ್
 husband in Andhra builds desi escalators for wife: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅರ್ಥಮುರು ಗ್ರಾಮದಲ್ಲಿ ವಾಸವಾಗಿರುವ 65 ವರ್ಷ ಆಸುಪಾಸಿನ ಈ ದಂಪತಿ ನೋಡಿದರೆ ನೆನಪಾಗೋದು ಕುವೆಂಪು ಅವರ   ನಾ ನಿನಗೆ ನೀ ನನಗೆ ಜೇನಾಗುವ ಪದ್ಯ.  ಏಕೆಂದರೆ, ಪತ್ನಿಗೆ ಮಂಡಿ ನೋವು ಮನೆಯ ಮೆಟ್ಟಿಲು ಹತ್ತಿ ಇಳಿದು ಮತ್ತಷ್ಟು ಹೆಚ್ಚಾಗದಿರಲಿ ಎನ್ನುವ ನಿಟ್ಟಿನಲ್ಲಿ ದೇಸಿ ಲಿಫ್ಟ್​​ ತಯಾರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅರವತ್ತರಲ್ಲೂ ಎಂಥಾ ನಿಷ್ಕಲ್ಮಶ ಪ್ರೀತಿ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಎಂಥಾ ಪ್ರೀತಿ!
ಟ್ವಿಟ್​ರ್​​ನಲ್ಲಿ ವೈರಲ್​ ಆದ ಈ ವಿಡಿಯೋದಲ್ಲಿ  ಮೆಟ್ಟಿಲಿಗಳಿಂದ ಸಲೀಸಾಗಿಮ ನಗುತ್ತಾ ಕೆಳಗಿಳಿಯುತ್ತಿರುವ ಮಹಿಳೆಯೇ  58 ವರ್ಷದ ಪತ್ನಿ ಸತ್ಯವೇಣಿ. ಇಂತಹ ಮಜಭೂತವಾದ ಲಿಫ್ಟ್​ ತಯಾರಿಸಿ ಹೆಂಡತಿಯ ನೋವಿಗೆ, ಸಮಸ್ಯೆಗೆ ಗುಡ್​​ಬೈ ಹೇಳುವಂತೆ ಮಾಡಿದ ವ್ಯಕ್ತಿಯೇ ಮೆಕ್ಯಾನಿಕ್ ಸತ್ತಿ ಶಿವ ನಾರಾಯಣ ರೆಡ್ಡಿ. ಇವರು ತಯಾರಿಸಿದ ಹೋಂ ಮೇಡ್​  ಎಸ್ಕಲೇಟರ್ ಸದ್ಯ ಮನೆ ಮಾತಾಗಿದೆ.

ಪತ್ನಿಯ ಮಂಡಿ ನೋವು ನೋಡಲಾಗಿಲ್ಲ

ಎಲ್ಲ ಕೆಲಸಕ್ಕೂ ಪತ್ನಿ ಕೆಳಗಿಂದ ಮೇಲಕ್ಕೆ ಓಡಾಡಬೇಕಿತ್ತು.  ಅದಾದ ನಂತರ ಮಂಡಿ ನೋವಿನಿಂದ ಹೆಂಡತಿ ನರಳತ್ತಿದ್ದಳು. ಸಹಾಯಕ್ಕಾಗಿ ಬೇರೆನೋ ಮಾಡಿ ಹಣ ಕಳೆದುಕೊಲ್ಳುವ ಬದಲು ಅಥವಾ ದುಬಾರಿ ಉಪಕರಣಗಳನ್ನು ಖರೀದಿಸುವ ಬದಲು, ಅವರು ತಮ್ಮ ಸ್ವಂತ ಕೌಶಲ್ಯ ಮತ್ತು ಉಳಿತಾಯದೊಂದಿಗೆ ತಮ್ಮ ಮನೆಯಲ್ಲಿಯೇ ಪರಿಹಾರವನ್ನು ಕಂಡಕೊಳ್ಳಲು ದೇಸಿ ಲಿಫ್ಟ್​ ತಯಾರಿಸಲು ನಿರ್ಧರಿಸಿ, 20 ದಿನದಲ್ಲಿ ಕೆಲಸ ಮುಕ್ತಾಯಗೊಳಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಐದನೇ ಕ್ಲಾಸ್​​ ಓದಿದ್ದ ಮೆಕ್ಯಾನಿಕ್ 

ಮೆಕ್ಯಾನಿಕ್ ಸತ್ತಿ ಶಿವ ನಾರಾಯಣ ರೆಡ್ಡಿ ಎಂಜಿನಿಯರ್​ ಏನೂ ಓದಿಕೊಂಡಿಲ್ಲ. ಐದನೇ ಕ್ಲಾಸಿಗೆ  ವಿದ್ಯಾಭ್ಯಾಸ ನಿಂತಿತ್ತು. ಇದಕ್ಕೆ ಕಾರಣ ಊರಿನಲ್ಲಿ ಎಲ್ಲಿಯೂ ಹತ್ತಿರದಲ್ಲಿ ಶಾಲೆಯೇ ಇಲ್ಲದಿರುವುದು. ಟ್ರ್ಯಾಕ್ಟರ್‌ಗಳು, ಅಕ್ಕಿ ಗಿರಣಿಗಳು ಮತ್ತು ಕೃಷಿ ಯಂತ್ರೋಪಕರಣ ದುರಸ್ತಿ ಮಾಡುವುದನ್ನು ಕಲಿಯಲು ಶುರು ಮಾಡಿಕೊಂಡ ಅವರು ಅದರಲ್ಲೇ ಪರಿಣಿತಿ ಪಡೆದುಕೊಂಡರು.  ಸದ್ಯ ಅವರ ಬಳಿ ನಾಲ್ಕು ಟ್ರ್ಯಾಕ್ಟರ್‌ ಇದೆ. ಅಕ್ಕಿ ಗಿರಣಿಯನ್ನು ಉದ್ಯಮವಿದೆ. ದಾವರಿ ಡೆಲ್ಟಾ ಪ್ರದೇಶದ ಮಂಡಪೇಟ ಬಳಿಯ ಅರ್ಥಮುರು ಎಂಬ ಹಳ್ಳಿಯಲ್ಲಿ ಐದು ಎಕರೆ ಭೂಮಿಯನ್ನು ಹೊಂದಿದ್ದು, ವ್ಯವಸಾಯ ಮಾಡುತ್ತಾ  ಜೀವನ ಸಾಗಿಸುತ್ತಿದ್ದಾರೆ.


ಎಕ್ಸಲೇಟರ್​ ತಯಾರಿಸಿದ್ದು ಹೀಗೆ

ನಾರಾಯಣ ರೆಡ್ಡಿಯವರು ತಮ್ಮ ಹೆಂಡತಿಗಾಗಿ ದೇಸಿ ಲಿಫ್ಟ್ ತಯಾರಿ ಮಾಡಲು 1.5 ಹಾರ್ಸ್‌ಪವರ್ಮೋಟಾರ್ ಮತ್ತು ಸರಳವಾದ ಸಾಮಗ್ರಿಗಳನ್ನು ಬಳಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.  ಇದು 21 ಮೆಟ್ಟಿಲುಗಳನ್ನು ಸುಗಮವಾಗಿ ದಾಟುತ್ತದೆ. 300 ಕೆಜಿವರೆಗಿನ ಭಾರವನ್ನು ಹೊತ್ತೊಯ್ಯಬಲ್ಲದು ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಟೋಮ್ಯಾಟಿಕ್ ಆಗಿ ನಿಲ್ಲುವ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ.

ಕರೆಂಟ್​ ಕಡಿತದ ಸಮಯದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ?

ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಆಗಾಗ್ಗೆ ವಿದ್ಯುತ್​ ಕಡಿತದ ಸಮಸ್ಯೆ ಕಾಡುತ್ತದೆ.  ಈ ವೇಳೆ ತಕ್ಷಣ ಇನ್ವರ್ಟರ್ ಬ್ಯಾಕಪ್‌ಗೆ ಬದಲಾಗುತ್ತದೆ. ಸತ್ಯವೇಣಿಯವರಿಗೆ ಸಹಾಯ ಮಾಡುವುದರ ಜೊತೆಗೆ, ಈ ಕುಟುಂಬವು ಈಗ ಅಕ್ಕಿ ಮೂಟೆಗಳು ಮತ್ತು ದಿನಸಿ ಸಾಮಗ್ರಿಗಳಂತಹ ಭಾರವಾದ ವಸ್ತುಗಳನ್ನು ಸುಲಭವಾಗಿ ಮೇಲಕ್ಕೆ ಕೊಂಡೊಯ್ಯಲು ಇದನ್ನು ಬಳಸುತ್ತಿದೆ.

ನೆಟ್ಟಿಗರು ಏನಂದ್ರು?

ನಾರಾಯಣ ರೆಡ್ಡಿಯವರು ತಮ್ಮ ಹೆಂಡತಿಗಾಗಿ ಲಿಫ್ಟ್​ ಮಾತ್ರ ತಯಾರಿಸಿಕೊಟ್ಟಿಲ್ಲ. ನಿತ್ಯ ಜೀವನದ ಹೋರಾಟದಿಂದ ಮುಕ್ತಿ ಕೊಟ್ಟಿದ್ದಾರೆ ಎಂದು ಕೊಂಡಾಡಿದ್ದಾರೆ.  ತಾಜ್​​ ಮಹಲ್​ ಪ್ರೀತಿಯ ಸಂಕೇತವಾಗಿ ನಿರ್ಮಾಣಗೊಂಡಿದ್ದರೂ ಸಹ ಈ ವ್ಯಕ್ತಿ ತನ್ನ  ಪತ್ನಿಗಾಗಿ ಕಟ್ಟಿದ ಈ ಲಿಫ್ಟ್​ ನಿಜಕ್ಕೂ ಇಂದಿನ ಜನರಿಗೆ ಮಾದರಿ. ಕೊಲೆ,  ಅಕ್ರಮ ಸಂಬಂಧ ಎನ್ನುವ ಸುದ್ದಿ ಕೇಳಿ ಬರುತ್ತಿರುವ ಮಧ್ಯೆ ಇಂತಹ ಬೆಲೆ ಕಟ್ಟಲಾಗದ ಪ್ರೀತಿ ವಿಚಾರಗಳು ಬೆಳಕಿಗೆ ಬಂದಾಗ ಪ್ರೀತಿಸುವ ಜೀವ ಬೇಕು ಎಂದು ಅನಿಸೋದು ದಿಟ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).