ವೀರೇಂದ್ರ ಬೈಸೋಯಾ ಭಾರತಕ್ಕೆ ಹಸ್ತಾಂತರ
- ದುಬೈನಲ್ಲಿ ಸಿಕ್ಕಿಬಿದ್ದ 6,000 ಕೋಟಿ ರೂ. ಮೌಲ್ಯದ ಡ್ರಗ್ಸ್ ದಂಧೆಯ ಕಿಂಗ್‌ಪಿನ್
- ಇಂಟರ್ಪೋಲ್ ಹಾಗೂ ಭಾರತೀಯ ತನಿಖಾ ಸಂಸ್ಥೆಗಳ ಮಹತ್ವದ ಕಾರ್ಯಾಚರಣೆ
- ವೀರೇಂದ್ರ ಬೈಸೋಯಾ ಭಾರತಕ್ಕೆ ಹಸ್ತಾಂತರ
ನವದೆಹಲಿ: ಪುಣೆಯ 6,000 ಕೋಟಿ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಡ್ರಗ್ ಲಾರ್ಡ್ ವೀರೇಂದರ್ ಬೈಸೋಯಾ (Virender Baisoya) ನನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರ ನಡೆಯಲಿದೆ ಎಂದು ತಿಳಿದು ಬಂದಿದೆ. ಇತನನ್ನು ದುಬೈ ಪೊಲೀಸರು ಬಂಧಿಸಿದ್ದು, ಈಗ ಭಾರತದಲ್ಲಿ ಇತನ ವಿಚಾರಣೆ ನಡೆಯಲಿದೆ.
ಈ ವೀರೇಂದರ್ ಬೈಸೋಯಾ, ಪಾಕಿಸ್ತಾನ ಹಾಗೂ ದುಬೈನಲ್ಲಿ ಡ್ರಗ್ಸ್ ದಂದೆಯಲ್ಲಿ ತೊಡಗಿರುವ ಸಂದೀಪ್ ಧುನಿಯಾನ ಸಹಚರನಾಗಿದ್ದು, ಇತನ ಮೇಲೆ ಭಾರತದ ಗುಪ್ತಚರ ಇಲಾಖೆ ಕಳೆದ ಕೆಲ ವರ್ಷಗಳಿಂದ ಕಣ್ಣಿಟ್ಟಿದ್ದು, ದುಬೈ ಪೊಲೀಸರು ಇವನ್ನು ವಶಕ್ಕೆ ಪಡೆದ ನಂತರ ಭಾರತ, ಇವನನ್ನು ಮರಳಿಸುವಂತೆ ಕೇಳಿತ್ತು.
ಇತ್ತೀಚೆಗೆ ದೇಶದಲ್ಲಿ ನಕ್ಸಲೀಸಂ ಅನ್ನು ಸಮಾಪ್ತಿಗೊಳಿಸಿ ಸಭೆಯೊಂದರಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಇಂದು ದೇಶದಲ್ಲಿ ವಾಮಪಂಥಿಗಳು ಸರ್ವನಾಶವಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮಾದಕ ದ್ರವ್ಯಗಳ ವಿರುದ್ಧ ಇರಲಿದೆ ಎಂದು ತಿಳಿಸಿದ್ದರು.
ಈ ಮಾದಕ ವಸ್ತುಗಳು ವಿದೇಶಗಳಿಂದ ಭಾರತಕ್ಕೆ ಬರುತ್ತಿವೆ. ಇಲ್ಲಿಯ ಕೆಲ ಮಾಫಿಯಾಗಳು ಈ ದಂದೆಯನ್ನು ನಡೆಸುತ್ತಿದ್ದು, ಶೀಘ್ರದಲ್ಲಿ ಈ ಡ್ರಗ್ಸ್ ದಂದೆಗೆ ಕಡಿವಾಣ ಹಾಕುವುದಾಗಿ ಅವರು ಭರವಸೆ ನೀಡಿದ್ದರು. ಈಗ ಸುಮಾರು 6 ಸಾವಿರ ಕೋಟಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಸೋಯಾ, ಬಂಧನ ಎನ್ಸಿಬಿ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಿದೆ ಎಂದರೆ ಸುಳ್ಳಲ್ಲ
, (ಏಜನ್ಸೀಸ್).