ರಾಂಚಿ: ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಮಂಗಳವಾರ(ಜ. 06) ಕಾಡಾನೆಯೊಂದು ನಡೆಸಿದ ಎರಡು ಪ್ರತ್ಯೇಕ ದಾಳಿಯಲ್ಲಿ ಒಂದೇ ಕುಟುಂಬ ನಾಲ್ವರು ಸೇರಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಚೈಬಾಸಾ ವಿಭಾಗೀಯ ಅರಣ್ಯ ಅಧಿಕಾರಿ ಆದಿತ್ಯ ನಾರಾಯಣ್, ಕಳೆದ ಕೆಲವು ದಿನಗಳಲ್ಲಿ ಹಲವರ ಮೇಲೆ ಮೇಲೆ ದಾಳಿ ಮಾಡಿದ್ದ ಆನೆ ಮಂಗಳವಾರ ತಡರಾತ್ರಿ ನೋಮುಂಡಿ ಮತ್ತು ಹತ್ಗಮರಿಯಾ ಪೊಲೀಸ್ ಠಾಣೆ ಪ್ರದೇಶಗಳಿಗೆ ನುಗ್ಗಿ ಆರು ಜನರನ್ನು ಕೊಂದಿದೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಗೂ ಒಂದು ಮುನ್ನ ಮತ್ತೊಂದು ಆನೆ ಒಂದೇ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಏಳು ಜನರನ್ನು ಬಲಿ ತೆಗೆದುಕೊಂಡಿತ್ತು. ಅರಣ್ಯ ಸಿಬ್ಬಂದಿ ಆನೆಯನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ರೀತಿಯ ಸತತ ದಾಳಿಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಏತನ್ಮಧ್ಯೆ, ಈ ಪ್ರದೇಶದಲ್ಲಿ ಆನೆ ಹಾವಳಿಯಿಂದಾಗಿ ಹಲವು ರೈಲು ಪ್ರಯಾಣಗಳು ರದ್ದಾಗಿವೆ ಎನ್ನಲಾಗಿದೆ (ಏಜೆನ್ಸೀಸ್).