Kerala Toddler Arshid Killed 
ದೇಶ

ಮಲತಂದೆ ಕೊಟ್ಟ ಚಿತ್ರಹಿಂಸೆಗೆ 2 ವರ್ಷದ ಕಂದಮ್ಮ ಸಾವು; ಮೈ ಮೇಲಿದ್ದ 51 ಗಾಯ, ಸಿಗರೇಟ್​ನಿಂದ ಸುಟ್ಟ ಕಲೆಯೇ ಸಾಕ್ಷಿ..Keralam Child Death

Kerala Toddler Arshid Killed: ಕೇರಳದ ನೆಡುಮಂಗಾಡ್​ನಲ್ಲಿನ ಪಣವೂರ್​​ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಟಲಿಗೆ ಅನ್ನ ಸಿಕ್ಕಿಹಾಕಿಕೊಂಡಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ  ಮಗುವಿನ ಮೇಲಾಗಿದ್ದ ಗಾಯಗಳು, ಸಿಗರೇಟ್​ನಿಂದ ಸುಟ್ಟ ಗಾಯ ಕಂಡು, ಅನುಮಾನ ವ್ಯಕ್ತಪಡಿಸಿದ ಸಂಬಂಧಿಕರು, ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ಮಾತೆ ಬರದ ಕಂದಮ್ಮನ ಸಾವಿಗೆ ಕಾರಣ ಏನು ಎನ್ನುವ ಅಸಲಿ ಕತೆಯು ಬೆಳಕಿಗೆ ಬಂದಿದೆ.
ಮೃತ ಮಗುವನ್ನು ಅರ್ಶಿದ್ ಎಂದು ಗುರುತಿಸಲಾಗಿದ್ದು, ಮಲತಂದೆ ಅಶ್ಕರ್ ಎಂಬಾತ ನಡೆಸಿದ ಅತಿಮಾನುಷ ದೌರ್ಜನ್ಯದಿಂದಾಗಿ ಮಗು ಸಾವನ್ನಪ್ಪಿದೆ. ವೈದ್ಯಕೀಯ ತಪಾಸಣೆಯ ವರದಿಯಲ್ಲಿ ಮಗುವಿನ ದೇಹದ ಮೇಲೆ ಕಂಡುಬಂದಿರುವ ಗಾಯದ ಗುರುತುಗಳು ಇಡೀ ಸಮಾಜವನ್ನು ನಡುಗಿಸುವಂತಿವೆ.

ಅನ್ನಸಿಕ್ಕಿ ಹಾಕಿಕೊಂಡಿದೆ ಎಂದು ನಾಟಕ

ಗಂಟಲಲ್ಲಿ ಅನ್ನ ಸಿಲುಕಿ,  ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟ ಎಂದು ಮೇ.29ರಂದು ಅರ್ಶಿದ್​ನನ್ನು, ಮಲತಂದೆ ಅಶ್ಕರ್ ಪಣವೂರಿನ ಖಾಸಗಿ ಆಸ್ಪತ್ರಗೆ ದಾಖಲಿಸಿದ್ದ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ  ಅವಿಟ್ಟಮ್ ತಿರುನಾಳ್  ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಅಲ್ಲಿನ ವೈದ್ಯರು ಮಗುವನ್ನು ಪರಿಶೀಳಿಸಿ ಮೃತಪಟ್ಟಿದೆ ಎಂದು ಸ್ಪಷ್ಟಪಡಿಸಿದರು.   

ಮರಣೋತ್ತರ ವರದಿಯಲ್ಲೇನಿತ್ತು?

ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎನ್ನುವ ಅಶ್ಕರ್​ ಮಾತನ್ನು ನಂಬದ ಸಂಬಂಧಿಕರು, ಪೊಲೀಸರಿಗೆ ದೂರು ಕೊಟ್ಟರು. ಜೊತೆಗೆ ಮರೋಣತ್ತರ ಪರೀಕ್ಷೆಯ ವರದಿಗಳ ಪ್ರಕಾರ ಮಗುವಿನ ಮೇಲೆ 51ಕ್ಕೂ ಹೆಚ್ಚು ಗಾಯಗಳಿದ್ದವು. ಸಿಗರೇಟ್​ನಿಂದ ಸುಟ್ಟ ಗಾಯಗಳಿದ್ದವು. ಗಂಭೀರ ಗಾಯದಿಂದಾಗಿ ಆಂತರಿಕ ರಕ್ತಸ್ರಾವವೇ  ಮಗುವಿನ ಸಾವಿಗೆ ಕಾರಣ ಎಂದು ಸ್ಪಷ್ಟಪಡಿಸಲಾಗಿತ್ತು. ಇದು ಸಹಜ ಸಾವಲ್ಲ ಎಂದು ಹೇಳಲಾಗಿತ್ತು. 

ಪ್ರಿಯಕರ- ತಾಯಿ ಬಂಧನ

ವರದಿ ಆಧಾರದ ಮೇಲೆ, ಸಂಬಂಧಿಕರು ಕೊಟ್ಟ ದೂರಿನ ಆಧಾರದ ಮೇಲೆ ಮೇ.30ರಂದು ನೆಡುಮಂಗಾಡ್​ ಪೊಲೀಸರು, ಮಗುವಿನ ತಾಯಿ ಅಖಿಲಾ, ಹಾಗೂ ಲಿವ್​ ಇನ್​ ಸಂಗಾತಿ ಅಶ್ಕರ್​​ನನ್ನು ಬಂಧಿಸಿ,  ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ.

ಡ್ಯಾನ್ಸ್​ ಕಾರ್ಯಕ್ರಮದಲ್ಲಿ ತಾಯಿ ಬ್ಯುಸಿ

ಡ್ಯಾನ್ಸ್​ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಖಿಲಾ ಅದರಲ್ಲಿ ಬ್ಯುಸಿ ಆಗಿದ್ದರು. ಈ ವೇಳೆ ಮಲತಂದೆ ಅಶ್ಕರ್​​ ಮಗುವನ್ನು ನೋಡಿಕೊಳ್ಳುತ್ತಿದ್ದ,. ಮಗು ಸಾಯುವ ದಿನವೂ ತಾಯಿ ನೃತ್ಯ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು ಎನ್ನಲಾಗಿದೆ.


ತಪ್ಪೊಪ್ಪಿಕೊಂಡ ಮಲತಂದೆ

ಮೇ.29ರಂದು ಒಂದುವರೆ ವರ್ಷದ ಮಗು ಯಾವುದೋ ವಿಚಾರಕ್ಕೆ ಜೋರಾಗಿ ಅಳುತ್ತಿತ್ತು. ಅಳು ನಿಲ್ಲಿಸಲು ತಲೆಗೆ ಜೋರಾಗಿ ಒಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಗು ಮೃತಪಟ್ಟಿತ್ತು. ಇದನ್ನು ಗಮನಿಸಿದ ಆತ ಭಯದಿಂದ ಎಲ್ಲ ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ. ಆ ನಂತರ ವೈದ್ಯರ ಬಳಿ ಬಂದ ಎನ್ನಲಾಗಿದೆ.
ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸುವಾಗ ಮಗುವಿಗೆ ಒಡೆಯಲು ಬಳಸಿದ ಕೋಲು ಮತ್ತು ಲೈಟರ್​ ಸಿಕ್ಕಿದೆ ಎನ್ನಲಾಗಿದೆ. ಜೊತೆಗೆ ಈತ ಮಗುವನ್ನು ಮೂರು ತಿಂಗಳ ಹಿಂದೆಯೇ ಕೊಲ್ಲಲು ತೀರ್ಮಾನಿಸಿದ್ದ. ಅಲ್ಲದೆ, ಕಳೆದು ಒಂದು ತಿಂಗಳಿನಿಂದ  ಚಿತ್ರಹಿಂಸೆ ಕೊಟ್ಟಿದ್ದ ಎನ್ನಲಾಗಿದೆ.

ಒಂದು ತಿಂಗಳಿಂದ ಹಿಂಸೆ

ಮಗುವಿನ ಅಳು  ತಡೆಯಲು ಬಾಯಿಗೆ ಬಟ್ಟೆ ಬಟ್ಟೆಯನ್ನು ತುರುಕುತ್ತಿದ್ದ. ಇಲ್ಲವೇ  ಒಡೆಯುತ್ತಿದ್ದ. ಸಿಗರೇಟ್​ನಿಂದ ಸುಡುತ್ತಿದ್ದ ಎನ್ನುವುದನ್ನು ಹೇಳಿದ್ದಾನೆ. ಅಲ್ಲದೇ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಕಾಲುವೆಗೆ ಎಸೆದು ಕೈತೊಳದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತೋಳು ಮುರಿಯುವಂತೆ ಒಡೆದಿದ್ದ

ಒಂದು ತಿಂಗಳ ಮೊದಲು ಅರ್ಷಿದ್​ ಮಗುವಿನ ತೋಳು ಮುರಿದಿದ್ದ ಈ ಬಗ್ಗೆ ವಿಚಾರಿಸಿದವರಿಗೆ ಇದು ಸೈಕಲ್​ನಿಂದ ಬಿದ್ದಿದ್ದು ಬೇರೇನು ಇಲ್ಲ ಎಂದು ಮನವೊಲಿಸಿದ್ದ.  ಅಷ್ಟೇ ಅಲ್ಲದೆ ಕಳೆದ ಮೃಏ .16ರಂದು ತಾಯಿ ಮಗು ಇನ್​​ಸ್ಟಾಗ್ರಾಮ್​ ಕಾಂಟೆಂಟ್ ಕ್ರಿಯೇಟರ್​ ಫೇಜ್​ ಫಾಲೋ ಮಾಡಿ ಬಹುಮಾನ ಪಡೆದುಕೊಂಡಿದ್ದ ವಿಡಿಯೋ ಸದ್ಯ ಸಾಕ್ಷಿಯಾಗಿದೆ. 

ಹಿಂಸೆ ಬಗ್ಗೆ ಗೊತ್ತಿದ್ದರು ಸುಮ್ಮನಿದ್ದ ಹೆತ್ತಮ್ಮ

ಪೊಲೀಸ್​ ತನಿಖೆ ವೇಳೆ ಅಖಿಲಾ ಸಹ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮಗುವಿಗೆ ನೀಡುತ್ತಿದ್ದ ಹಿಂಸೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಯಾವುದೇ ಕ್ರಮ ಜೈಗೊಂಡಿಲ್ಲ ಮಾತಾನಾಡಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).