Tamil Nadu Child Death 
ದೇಶ

ಬಿಸ್ಕತ್​ ಕೊಡಿಸುವ ಆಮಿಷವೊಡ್ಡಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಸಾವು; ಬಿಹಾರ ಮೂಲದವ ಅರೆಸ್ಟ್!..Tamilu Nadu

ಪ್ರಮುಖ ಮುಖ್ಯಾಂಶಗಳು

  • ಬಿಸ್ಕೇಟ್​ ಕೊಡಿಸುವ ಆಮಿಷವೊಡ್ಡಿ ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
  • ಮುಳ್ಳಿನ ಪೊದೆಯಲ್ಲಿ ಸಂಪೂರ್ಣ ಗಾಯಗೊಂಡು ಬಿದ್ದಿದ್ದ ಮಗುವಿಗೆ ಚಿಕಿತ್ಸೆ ಕೊಡಿಸಿದ್ರು ಬದುಕಿಲ್ಲ
  • ಸಿಎಂ ಜೋಸೆಫ್​ ವಿಜಯ್​ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಕೆಂಡ
ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಅತ್ಯಂತ ಭೀಕರ ಘಟನೆ ಬೆಳಕಿಗೆ ಬಂದಿದೆ.
ಬಿಹಾರದಿಂದ ಬಂದು ತಮಿಳುನಾಡಿನ ಗುಮ್ಮಿಡಿಪೂಂಡಿ ಸಿಪ್ಕೋಟ್​ನಲ್ಲಿ ನೆಲೆಸಿದ್ದ ಪೋಷಕರೊಂದಿಗೆ ಇದ್ದು ಮೂರು ವರ್ಷದ ಹೆಣ್ಣು ಮಗು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ 19 ವರ್ಷದ  ಬಿಹಾರದ ವಿಬಿನ್ ಮಂಚ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. 

ಬಿಸ್ಕೇಟ್ ಕೊಡಿಸುವ ಆಮಿಷ

'ಮಗು ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಈ ವಲಸೆ ಕಾರ್ಮಿಕ ಬಿಸ್ಕೇಟ್​ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದಾನೆ. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ, ಮಗುವಿನ ಕುಟುಂಬ ಮತ್ತು ಆ ವ್ಯಕ್ತಿ ಇಬ್ಬರೂ ಆ ಪ್ರದೇಶದಲ್ಲಿ ವಾಸಿಸುವ ವಲಸೆ ಕಾರ್ಮಿಕರಾಗಿದ್ದರಿಂದ ಆ ಸಮಯದಲ್ಲಿ  ಯಾವುದೇ ಅನುಮಾನ ಬರಲಿಲ್ಲ'  ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
'ಮಹಿಳೆಯೊಬ್ಬರು ಬಹಿರ್ದೆಸೆಗೆ  ತೆರಳಿದ್ದಾಗ  ಮಗು ಮುಳ್ಳಿನ ಪೊದೆಯಲ್ಲಿ ಬಿದ್ದಿರುವುದು ಕಾಣಿಸಿದೆ. ಮೈಮೇಲೆ ಸಾಕಷ್ಟು ಗಾಯವಿತ್ತು. ಆಕೆ ಮಗುವನ್ನು ಸ್ವಚ್ಛಗೊಳಿಸಿದಾಗ ಮಗುವಿನ ಸ್ಥಿತಿ ಗಂಭೀರವಾಗಿರುವುದು ಗೊತ್ತಾಯ್ತು. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮಗು ಇಂದು ಕೊನೆಯುಸಿರೆಳೆದಿದೆ' ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಘಟನೆಯ ನಂತರ ಸಿಟ್ಟಾದ ಸ್ಥಳೀಯರು ಆರೋಪಿಯನ್ನು ತೀವ್ರವಾಗಿ ಥಳಿಸಿ, ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.  ಆರೋಪಿ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಸಿಎಂ ಜೋಸೆಫ್ ವಿಜಯ್ ಸರ್ಕಾರದ ವಿರುದ್ಧ ವಿಪಕ್ಷ ಕೆಂಡ

'ತಮಿಳುನಾಡಿನಲ್ಲಿ ಲೈಂಗಿಕ ಅಪರಾಧಗಳು  ಕೇಸ್​ಗಳು ಹೆಚ್ಚಾಗುತ್ತಿದೆ. ಸರ್ಕಾರ ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕು' ಎಂದು ಡಿಎಂಕೆ ನಾಯಕ ಟಿ.ಕೆ.ಎಸ್. ಇಲಂಗೋವನ್ ಹೇಳಿದರು.

 ಹೊಸ ಯೋಜನೆ ಜಾರಿಯಾದ್ರು ಲಾಭವಿಲ್ಲ

ಕಳೆದ ಕೆಲವು ವಾರಗಳ ಹಿಂದೆ ಬಾಲಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಗಿತ್ತು. ಈ ಕಾರಣದಿಂದಾಗಿ ಹೆಣ್ಣುಮಕ್ಕಳ ರಕ್ಷಣೆಗಾಗಿ "ಸಿಂಗಪ್ಪೆಣ್ಣು ಎಂಬ ವಿಶೇಷ ಮಹಿಳಾ ಸುರಕ್ಷತಾ ಪಡೆಯನ್ನು ರಚಿಸುವುದಾಗಿ ಭರವಸೆ ಕೊಟ್ಟು, ಕಾರ್ಯರೂಪಕ್ಕೆ ತಂದಿದ್ದರು, ಆದರೆ, ಈ ಮಧ್ಯೆ ಇಂತಹ ಘಟನೆ ಜರುಗಿದೆ, (ಏಜೆನ್ಸೀಸ್).