Mustafizur Rahman Replace | ಮುಸ್ತಾಫಿಜುರ್ ರೆಹಮಾನ್ ಸ್ಥಾನ ತುಂಬಬಲ್ಲ ಮೂವರು ಆಟಗಾರರು 
ದೇಶ

ಮುಸ್ತಾಫಿಜುರ್ ಔಟ್...ಯಾರು ಇನ್..? ಕೆಕೆಆರ್ ತಂಡ ಸೇರಲು ಸಿದ್ಧವಾಗಿದ್ದಾರೆ ವಿಶ್ವದ ಘಾತಕ ಬೌಲರ್‌ಗಳು! | Mustafizur Rahman Replace

ನವದೆಹಲಿ: ಇತ್ತೀಚೆಗೆ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸೇರಿದಂತೆ ಇತರ ಪ್ರಕರಣಗಳು ದೇಶದ್ಯಂತ ತೀವ್ರ ಆಕ್ರೋಶ ಹುಟ್ಟುಹಾಕಿದ್ದು, ಈ ವೇಳೆ ಬಾಂಗ್ಲಾದ ಆಟಗಾರನೊಬ್ಬನಿಗೆ ಐಪಿಎಲ್​ನಲ್ಲಿ ಆಡಲು ನೀಡಿರುವುದು ಸರಿಯಲ್ಲ ಎಂದು ಅನೇಕರು ಕೆಕೆಆರ್​ ವಿರುದ್ಧ ಹರಿಹಾಯ್ದಿದ್ದರು.
ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಮುಸ್ತಾಫಿಜುರ್ ರೆಹಮಾನ್​​ರನ್ನು ತಂಡದಿಂದ ಕೈ ಬಿಡುವಂತೆ ಕೆಕೆಆರ್​ಗೆ ಸೂಚಿಸಿತ್ತು. ಕಳೆದ ತಿಂಗಳು ನಡೆದಿದ್ದ ಹರಾಜಿನಲ್ಲಿ ತಂಡ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್​ರನ್ನು 9.2 ಕೋಟಿ ರೂ.ಗೆ ಖರೀದಿಸಿತ್ತು. ಸದ್ಯ ಕೆಕೆಆರ್​ ಮುಸ್ತಾಫಿಜುರ್​ರನ್ನು ಕೈ ಬಿಟ್ಟರೆ ಅವರ ಸ್ಥಾನ ತುಂಬಬಲ್ಲ ಮೂರು ಆಟಗಾರರು ಇಲ್ಲಿದ್ದಾರೆ.

1. ರಿಚರ್ಡ್ ಗ್ಲೀಸನ್

ಪ್ರಸ್ತುತ ನಡೆಯುತ್ತಿರುವ SA20 ಲೀಗ್​ನಲ್ಲಿ ರಿಚರ್ಡ್ ಗ್ಲೀಸನ್ ಉತ್ತಮ ಫಾರ್ಮ್‌ನಲ್ಲಿದ್ದು, ಇಲ್ಲಿಯವರೆಗೆ ಮೂರು ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಹಿಂದಿಗಿಂತ ಸುಧಾರಣೆ ಕಂಡಿರುವ ಗ್ಲೀಸನ್ ಒಬ್ಬ ಅದ್ಭುತ ಡೆತ್ ಓವರ್ ಬೌಲರ್ ಆಗಿ ರೂಪಗೊಂಡಿದ್ದಾರೆ. ಇತ್ತೀಚೆಗೆ ಜೋಬರ್ಗ್ ಸೂಪರ್ ಕಿಂಗ್ಸ್ ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಮೂರು ಪಂದ್ಯಗಳನ್ನು ಆಡಿರುವ ಗ್ಲೀಸನ್, ಐಪಿಎಲ್​ನಲ್ಲಿ ತಮ್ಮ ಮೂಲ ಬೆಲೆಯನ್ನು 75 ಲಕ್ಷ ರೂ.ಗಳಿಗೆ ನಿಗದಿಪಡಿಸಿಕೊಂಡಿದ್ದರು.
ಕೆಕೆಆರ್ ತಂಡ ಎಡಗೈ ವೇಗದ ಬೌಲಿಂಗ್ ಆಯ್ಕೆಯ ಯೋಚಿಸುವುದಾದರೆ ಫಜಲ್ ಹಕ್ ಫಾರೂಕಿ ಉತ್ತಮ ಆಯ್ಕೆ. 2026 ರ ಟಿ 20 ವಿಶ್ವಕಪ್‌ಗಾಗಿ ಅಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿರುವ ಫಾರೂಕಿ, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದು, 12 ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಲ್ಲಿಯವರೆಗೆ 51 ಟಿ20 ಐಗಳಲ್ಲಿ 63 ವಿಕೆಟ್‌ಗಳನ್ನು ಕಬಳಿಸಿದ್ದು, ಇತ್ತೀಚೆಗೆ ನಡೆದ ಐಪಿಎಲ್​ ಹರಾಜಿನಲ್ಲಿ ಮಾರಾಟವಾಗಲಿಲ್ಲ.
ಕೆಕೆಆರ್​ ಎಡಗೈ ಸಂಯೋಜನೆ ಬಗ್ಗೆ ಯೋಚಿಸುವುದಾದರೆ ಸ್ಪೆನ್ಸರ್ ಜಾನ್ಸನ್ ಮತ್ತೊಂದು ಉತ್ತಮ ಆಯ್ಕೆಯಾಗಿದ್ದು, ಪ್ರಸ್ತುತ ಗಾಯಗೊಂಡಿರುವ ಅವರು ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡುತ್ತಿಲ್ಲ. ಈ ವರ್ಷದ ಐಪಿಎಲ್​ಗೆ ಇನ್ನೂ ಸುಮಾರು ಮೂರು ತಿಂಗಳು ಸಮಯವಿರುವುದರಿಂದ ತಂಡ ಇವರತ್ತ ಕಣ್ಣಾಯಿಸಿದರು ಅಚ್ಚರಿಪಡಬೇಕಿಲ್ಲ.
ಕಳೆದ ವರ್ಷವೂ ಕೆಕೆಆರ್ ಪರವೇ ಆಡಿದ್ದರಿಂದ ತಂಡದ ಸಂಯೋಜನೆಯ ಹಿತದೃಷ್ಟಿಯಿಂದ ಇದು ಉತ್ತಮ ಆಯ್ಕೆಯಾಗಬಹುದು. 2025 ರ ಐಪಿಎಲ್​ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜಾನ್ಸನ್​ ಕೇವಲ ಒಂದು ವಿಕೆಟ್ ಪಡೆದಿದ್ದರು. ಆದ್ದರಿಂದ ತಂಡ ಅವರನ್ನು ಕೈಬಿಟ್ಟಿತ್ತು. ಜಾನ್ಸನ್ 71 ಪಂದ್ಯಗಳನ್ನು ಆಡಿದ್ದು, 85 ವಿಕೆಟ್ ಪಡೆದಿದ್ದಾರೆ(ಏಜೆನ್ಸೀಸ್​).