Mumbai Indians 
ದೇಶ

Mumbai Indians | ಈ ಮೂವರ ಮೇಲೆ ಮುಂಬೈ ಇಂಡಿಯನ್ಸ್​ ಕಣ್ಣು .. ಆದರೆ...

ಮುಂಬೈ: ಮುಂಬರುವ ಐಪಿಎಲ್​ಗೆ ಎಲ್ಲ ಫ್ರಾಂಚೈಸಿಗಳು ತಮ್ಮ ಕನಸ್ಸಿನ ತಂಡವನ್ನು ತಯಾರಿಸುವಲ್ಲಿ ನಿರತರಾಗಿವೆ. ಇತ್ತ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ 2026 ರ ಐಪಿಎಲ್ ಹರಾಜಿಗೆ ಕೇವಲ 2.75 ಕೋಟಿ ರೂ.ಗಳೊಂದಿಗೆ ಭಾಗವಹಿಸುತ್ತಿದ್ದು, ಹೆಚ್ಚು ಬದಲಾವಣೆಗೆ ಮನಸ್ಸು ಮಾಡದೆ ಇರುವ ಸ್ಥಿರವಾದ ತಂಡವನ್ನೆ ಇನ್ನಷ್ಟು ಗಟ್ಟಿಗೊಳಿಸುವ ಆಲೋಚನೆಯಲ್ಲಿದೆ.
ಮುಂಬರುವ ಹರಾಜಿನಲ್ಲಿ ಹೆಚ್ಚಾಗಿ ಬ್ಯಾಕಪ್ ಆಟಗಾರರನ್ನು ಹುಡುಕುತ್ತಿರುವ ಎಂಐ, ಈ ಮೂವರು ಆಟಗಾರರ ಮೇಲೆ ಕಣ್ಣಿಟ್ಟಿದೆ.
1. ಜಾರ್ಜ್ ಲಿಂಡೆ
ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ, ನ್ಯೂಜಿಲೆಂಡ್‌ನ ಮಿಚೆಲ್ ಸ್ಯಾಂಟ್ನರ್‌ಗೆ ಪರಿಪೂರ್ಣ ಬ್ಯಾಕಪ್‌ನಂತೆ ಕಂಡುಬಂದಿದ್ದು, ಕಿವೀಸ್ ಆಲ್‌ರೌಂಡರ್‌ಗೆ ಸಮಾನ ಬದಲಿ ಆಟಗಾರರಾಗಿದ್ದಾರೆ, ಲಿಂಡೆ ಮೂಲ ಬೆಲೆ 1 ಕೋಟಿಯಾಗಿದ್ದು, ಈಗಾಗಲೇ MI ನ್ಯೂಯಾರ್ಕ್ ಮತ್ತು MI ಕೇಪ್ ಟೌನ್ ಪರ ಆಡಿರುವ ಅನುಭವವಿದೆ.

2. ಮೈಕೆಲ್ ಬ್ರೇಸ್‌ವೆಲ್

ಮೈಕೆಲ್ ಬ್ರೇಸ್‌ವೆಲ್ ಹರಾಜಿನಲ್ಲಿ ಲಭ್ಯವಿರುವ ಮತ್ತೊಂದು ಆಯ್ಕೆ. ಆದರೆ ಇವರ ಮೂಲ ಬೆಲೆ 2 ಕೋಟಿಯಾಗಿರುವುದರಿಂದ, ಇದು ಎಂಐಗೆ ತೊಡಕಾಗಬಹುದು ಎನ್ನಲಾಗಿದೆ. ಬ್ರೇಸ್‌ವೆಲ್ ಉತ್ತಮ ಆಯ್ಕೆಯಾಗಿದ್ದು, ಬೇರೆ ಯಾವುದೇ ತಂಡ ಇವರಿಗಾಗಿ ಬಿಡ್​ ಮಾಡದಿದ್ದರೆ ಮುಂಬೈ ಇವರ ಬಗ್ಗೆಯೂ ಯೋಚಿಸಬಹುದು. ಬ್ರೇಸ್‌ವೆಲ್ ಎಲ್ಲಾ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ತಂಡ ಸಂಕಷ್ಟದಲ್ಲಿದ್ದಾಗ ಬೌಲಿಂಗ್​ ಮೂಲಕವೂ ನೆರವಾಗಿದ್ದಾರೆ

3. ಶ್ಯಾಮ್ಸ್ ಮುಲಾನಿ

ಮುಂಬೈ ತಂಡದ ತನ್ನ ಸಂಪರ್ಕದ ಆಧಾರದ ಮೇಲೆ ಶ್ಯಾಮ್ಸ್ ಮುಲಾನಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದ್ದು, ಒಬ್ಬ ಉತ್ತಮ ಆಲ್‌ರೌಂಡರ್ ಮೂಲ ಬೆಲೆ ಕೇವಲ 30 ಲಕ್ಷ ಆಗಿರುವುದರಿಂದ ಮುಂಬೈ ತಂಡ ಇವರತ್ತ ಕೂಡ ದೃಷ್ಟಿ ಹಾಯಿಸಬಹುದು. ಎಂಐ ತಂಡಕ್ಕೆ ಮುಲಾನಿ ಸೇರ್ಪಡೆ ಬಲ ತುಂಬಲಿದ್ದು, ಸ್ಯಾಂಟ್ನರ್ ಕೈಬಿಟ್ಟು ಆಡುವ ಹನ್ನೊಂದರಲ್ಲಿ ನಾಲ್ಕು ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬೇಕಾದರೆ ತಂಡದಲ್ಲಿ ಬ್ಯಾಟಿಂಗ್ ಮಾಡಬಲ್ಲ ಎಡಗೈ ಸ್ಪಿನ್ನರ್ ಸಿಕ್ಕಂತಾಗುತ್ತದೆ(ಏಜೆನ್ಸೀಸ್​).