IT engineer not allowed to drive due to kundli
- 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆದರೂ ತಂದೆಯೇ ಆಫೀಸಿಗೆ ಬಿಡಬೇಕು
- ಗಾಡಿ ಓಡಿಸಿದರೆ ಯಾರನ್ನು ಕೊಲ್ಲುವ ದೋಷ ಹಿನ್ನೆಲೆ ಸೈಕಲ್ ತುಳಿಯಲು ಬಿಡದ ಪೋಷಕರು
- ಜಾತಕ, ಮೂಢ ನಂಬಿಕೆ, ಮನುಷ್ಯರನ್ನು ಧರ್ಮ ನಿಯಂತ್ರಿಸಿರುವ ಬಗ್ಗೆ ಎಕ್ಸ್ನಲ್ಲಿ ಚರ್ಚೆ ಹೆಚ್ಚಳ
IT engineer not allowed to drive due to kundli: ಇಂದಿನ ಆಧುನಿಕ ಯುಗದಲ್ಲೂ ಜಾತಕ ಮತ್ತು ಜ್ಯೋತಿಷ್ಯದ ಮೇಲಿನ ಅತಿಯಾದ ನಂಬಿಕೆಗಳು ಮನುಷ್ಯನ ದೈನಂದಿನ ಜೀವನವನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ಬಗ್ಗೆ ಉದ್ಯಮಿಯೊಬ್ಬರು ಕೊಟ್ಟ ಉದಾಹರಣೆ ಚರ್ಚೆಗೆ ಗ್ರಾಸವಾಗಿದೆ.
ವಿವಾಹಿತ ಮತ್ತು ಮಗುವಿನ ತಂದೆಯಾಗಿರುವ ವ್ಯಕ್ತಿಯೊಬ್ಬನನ್ನು ಇತ್ತೀಚೆಗೆ ನಾನು ಭೇಟಿಯಾದೆ. ಆತನಿಗೀಗ 28 ವರ್ಷ, ಇಲ್ಲಿಯವರೆಗೂ ಆತ ವಾಹನ ಓಡಿಸಲ್ಲ. ಸೈಕಲ್ ಸಹ ತುಳಿಯೋದಿಲ್ಲ ಇದಕ್ಕೆ ಕಾರಣ ಆತನ ಜಾತಕ. ಈಗಲೂ ಸಹ ಆತನ ತಂದೆಯೇ ಅವನನ್ನು ಉದ್ಯೋಗದ ಸ್ಥಳಕ್ಕೆ ಬಿಟ್ಟೋಗುತ್ತಾರೆ ಎನ್ನುವ ವಿಚಾರವನ್ನು ಉದ್ಯಮಿ ಹಾಗೂ 'ಪ್ನ್ಯೂಕಾನ್ಸ್' ಸಂಸ್ಥೆಯ ಸಂಸ್ಥಾಪಕರಾದ ಪ್ರಿತೇಶ್ ಲಖಾನಿ ಹಂಚಿಕೊಂಡಿದ್ದಾರೆ.
ನೆಟ್ಟಿಗರಿಂದ ಪರ-ವಿರೋಧ ವಾದ
ಅವರ ಈ ಪೋಸ್ಟ್ಗೆ ಕೆಲವರು ಜ್ಯೋತಿಷ್ಯ ನಂಬೋದು ತಪ್ಪೇನು ಇಲ್ಲ ಎನ್ನುತ್ತಿದ್ದರೆ, ಇನ್ನೂ ಕೆಲವರು ಮೂರ್ಖ ಎಂದು ಬೈದಾಡಿದ್ದಾರೆ. ಜನ ಹೀಗೆ ಜಾತಕವನ್ನು ಹೇಗೆ ನಂಬಿಬಿಡುತ್ತಾರೆ. ದೇವರು ಇದನ್ನು ನೋಡುತ್ತಿದ್ದರೆ, ಮನುಷ್ಯರು ಮೆದುಳಿಗಿಂತ ಇಂತಹದನ್ನು ನಂಬುವ ಸ್ಥಿತಿ ಕಂಡು ಖಂಡಿತ ನಗುತ್ತಿರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಎಂಕೆ ಎನ್ನುವವರು ಕಾಮೆಂಟ್ ಮಾಡಿದ್ದು, ಕೆಲವೊಮ್ಮೆ ಜನರು ಸತ್ಯವನ್ನು ಹೇಳದಿರಲು ಕಥೆಗಳನ್ನು ಕಟ್ಟುತ್ತಾರೆ. ಅವನಿಗೆ ಬೇರೇನೋ ಸಮಸ್ಯೆ ಇರಬಹುದು. ಅದನ್ನು ಹೇಳಿಕೊಂಡರೆ ಜನರು ಹೇಗೆ ನೋಡುತ್ತಾರೋ ಎನ್ನುವ ಭಾವನೆಯಿಂದ ಹೀಗೆ ಕತೆ ಹೇಳಿರುತ್ತಾರೆ ಎಂದು ವಾದಿಸಿದ್ದಾರೆ.
ಉದ್ಯಮಿ ಪೋಸ್ಟ್ನಲ್ಲಿ ಏನಿದೆ?
'ದೆವ್ವಗಳು ಹುಟ್ಟುವುದಿಲ್ಲ; ಕೆಲವೊಮ್ಮೆ ಅವುಗಳನ್ನು ಜಾತಕಗಳೇ ಸೃಷ್ಟಿಸುತ್ತವೆ. ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ 28 ವರ್ಷದ ಐಟಿ ಉದ್ಯೋಗಿ ಈಗ ಒಂದು ಮಗುವಿನ ತಂದೆ. ಆತ ಜಾತಕದ ಕಾರಣದಿಂದಾಗಿ ಯಾವುದೇ ವಾಹನ ಚಾಲನೆ ಮಾಡಲು ಪೋಷಕರು ಅನುಮತಿ ನೀಡುತ್ತಿಲ್ಲ. ಅಕಸ್ಮಾತ್ ವಾಹನ ಚಲಾಯಿಸಿದರೆ ಯಾರನ್ನಾದರೂ ಕೊಲ್ಲುವ ಸಾಧ್ಯತೆ ಇದೆ ಎನ್ನಲಾಗಿತ್ತಂತೆ. ಹೀಗಾಗಿ, ಆತನ ತಂದೆಯೇ ಪ್ರತಿದಿನ ಆತನನ್ನು ಕಚೇರಿಗೆ ಬಿಟ್ಟು ಬರುತ್ತಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.
' ಅವನು ಎಂದಿಗೂ ಸೈಕಲ್ ಅಥವಾ ಯಾವುದೇ ರೀತಿಯ ವಾಹನವನ್ನು ಓಡಿಸುವುದನ್ನು ಕಲಿತಿಲ್ಲ. ನಾನು ವಿರೋಧಿಸಲು ಸಾಧ್ಯವಾಗಲಿಲ್ಲ. ಒಮ್ಮೆ ಅವರ ತಂದೆಯನ್ನು ನಿಲ್ಲಿಸಿ ಕೇಳಿದೆ ಅಂಕಲ್ ಕುಂಡಲಿ AI ಬಗ್ಗೆ ಏನು ಹೇಳುತ್ತದೆ ಎಂದು' ಇಷ್ಟನ್ನು ಉದ್ಯಮಿ ಹಾಗೂ 'ಪ್ನ್ಯೂಕಾನ್ಸ್' ಸಂಸ್ಥೆಯ ಸಂಸ್ಥಾಪಕರಾದ ಪ್ರಿತೇಶ್ ಲಖಾನಿ ಹಂಚಿಕೊಂಡಿದ್ದಾರೆ.