ಸೇವತಾ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ್ ತಿವಾರಿ
ಲಖನೌ: ನಕಲಿ ಗುರುತಿನ ಚೀಟಿಗಳನ್ನು ಬಳಸಿ ಸುಮಾರು 25 ಮಹಿಳೆಯರನ್ನು ಮದುವೆಯಾಗಿ ಕೋಟ್ಯಂತರ ರೂ. ವಂಚಿಸಿದ ವಂಚಕನೊಬ್ಬ ಬಿಜೆಪಿ ಶಾಸಕರ(BJP MLA) ಪುತ್ರಿಯನ್ನು ಮದುವೆಯಾಗಿ ವಂಚಿಸಿದ್ದು, ಕೃತ್ಯ ಬೆಳಕಿಗೆ ಬಂದಿದೆ. ಸ್ವತಃ ಶಾಸಕರೇ ಅಳಿಯನ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಸೇವತಾ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ್ ತಿವಾರಿ, ತನ್ನ ಮಗಳಿಗೆ ಮದುವೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ರೆಯುಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಅನುಜ್ ತ್ರಿವೇದಿ ಮತ್ತು ಅವರ ಪುತ್ರ ಪ್ರಖರ್ ತ್ರಿವೇದಿ ಎಂಬ ಆರೋಪಿಗಳ್ನು ಬಂಧಿಸಿದ್ದಾರೆ.
ರೆಯುಸಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ತಿವಾರಿ ಅವರ ಮಗಳು ಪ್ರಜ್ಞಾ 2024ರಲ್ಲಿ ಮಿಶ್ರಿಖ್‌ನ ಚಂದ್ರವಾಲ್ ನಿವಾಸಿ ಅನುಜ್ ತ್ರಿವೇದಿ ಅವರ ಪುತ್ರ ಪ್ರಖರ್ ತ್ರಿವೇದಿ ಅವರನ್ನು ಮದುವೆಯಾಗಿದ್ದರು. ಮದುವೆಗೆ ಮುನ್ನ ಅನುಜ್ ತ್ರಿವೇದಿ ತನ್ನನ್ನು ಮುಂಬೈ ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಿಕೊಂಡಿದ್ದು, ಅಪರಾಧ ಪ್ರಕರಣಗಳನ್ನು ಮುಚ್ಚಿಟ್ಟಿದ್ದರು.
ಸ್ಥಳೀಯ ವಿಚಾರಣೆಗಳು ಮತ್ತು ಆ ಪ್ರದೇಶದಲ್ಲಿ ಪ್ರಭಾವಿ ಎಂದು ಪರಿಗಣಿಸಲಾದ ಜನರಿಂದ ಸದಾಭಿಪ್ರಾಯ ಬಂದ ಹಿನ್ನೆಲೆ ಮಗಳ ಮದುವೆ ಮಾಡಲಾಗಿತ್ತು. ಆದಾಗ್ಯೂ, ಮದುವೆಯಾದ ಸುಮಾರು ಎರಡೂವರೆ ವರ್ಷಗಳ ಬಳಿಕ ಕುಟುಂಬವು ಸಾಮಾಜಿಕ ಮಾಧ್ಯಮ ಮತ್ತು ಇತರ ಮೂಲಗಳಿಂದ ಪ್ರಖಾರ್ ತ್ರಿವೇದಿ ಅವರ ಚಟುವಟಿಕೆಗಳ ಬಗ್ಗೆ ತಿಳಿಯಿತು.
ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಲವಾರು ಮಹಿಳೆಯರನ್ನು ನಕಲಿ ಗುರುತಿನ ಚೀಟಿಗಳನ್ನು ಬಳಸಿ ಸಂಬಂಧಗಳಿಗೆ ಆಮಿಷ ಒಡ್ಡುವ ಮೂಲಕ ಪ್ರಖಾರ್ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದಾನೆ. ಇದಲ್ಲದೆ, ಪ್ರಖಾರ್ ಸುಮಾರು 25 ವಿವಾಹಗಳನ್ನು ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಶಾಸಕರು ಆರೋಪಿಸಿದ್ದಾರೆ.
ಪ್ರಸ್ತುತ ಆರೋಪಿ ಕುಟುಂಬದೊಂದಿಗಿನ ಎಲ್ಲಾ ಸಾಮಾಜಿಕ ಮತ್ತು ವೈಯಕ್ತಿಕ ಸಂಬಂಧಗಳನ್ನು ಕಡಿದುಕೊಂಡಿದ್ದೇನೆ ಮತ್ತು ತನ್ನ ಮಗಳನ್ನು ಮನೆಗೆ ಮರಳಿ ಕರೆತಂದಿದ್ದೇನೆ. ಈ ಘಟನೆಯು ನನ್ನ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಮತ್ತು ಸಾರ್ವಜನಿಕ ಪ್ರತಿನಿಧಿಯಾಗಿ ನನ್ನ ಸ್ಥಾನಮಾನದ ಮೇಲೆ ಪರಿಣಾಮ ಬೀರಿದೆ. ಆರೋಪಿ ತಪ್ಪಿತಸ್ಥನೆಂದು ಸಾಬೀತಾದರೆ, ಕಾನೂನಿನಡಿಯಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ (ಏಜೆನ್ಸೀಸ್).