Kabaddi player wife suicide Haryana
- ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರಾ ಅವರ ಪತ್ನಿ ಮುಸ್ಕಾನ್ ಬಲ್ಹಾರಾ ಆತ್ಮಹತ್ಯೆ?.
- ಮೃತ ಮುಸ್ಕಾನ್ ಅವರ ಕುಟುಂಬಸ್ಥರಿಂದ ಕಿರುಕುಳ ನೀಡಲಾಗಿದೆ ಎಂದು ಆರೋಪ.
- ಪಂಜಾಬ್‌ನಲ್ಲಿ 'ಹರಿಯಾಣ ಆಲಾ ಚೀತಾ' ಎಂದೇ ಕರೆಯಲ್ಪಡುತ್ತಾರೆ ಶೀಲು.
ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರ ಅವರ 23 ವರ್ಷದ ಪತ್ನಿಯ ಮೃತದೇಹವು ಶುಕ್ರವಾರ ಮದ್ಯಾಹ್ನ ಹರಿಯಾಣದ ರೋಹ್ಟಕ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣ ಏನು ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಮೆಹಮ್‌ನ ಫರ್ಮಾನಾ ಗ್ರಾಮದವರಾದ ಮುಸ್ಕಾನ್, 2023ರ ಡಿಸೆಂಬರ್‌ನಲ್ಲಿ ಶೀಲು ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಂಬತ್ತು ತಿಂಗಳ ಗಂಡು ಮಗುವಿದೆ
ತನಿಖೆ ಮುಂದುವರಿಕೆ
ರೋಹ್ಟಕ್ ಎಸ್‌ಪಿ ಗೌರವ್ ರಾಜ್‌ಪುರೋಹಿತ್ ಮಾತನಾಡಿ, ಈ ಕುರಿತು ತನಿಖೆ ನಡೆಯುತ್ತಿದ್ದು, ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಶೀಲು ಬಲ್ಹಾರಾ ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಆದರೆ ಶುಕ್ರವಾರ ತಡರಾತ್ರಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಮೃತ ಮುಸ್ಕಾನ್ ಅವರ ಕುಟುಂಬಸ್ಥರು ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಮನೆಯ ಹೊರಗೆ ಪ್ರತಿಭಟನೆ ನಡೆಸಿದರು. ವಿಧಿವಿಜ್ಞಾನ (ಫೊರೆನ್ಸಿಕ್) ತಂಡವು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮುಸ್ಕಾನ್ ಅವರ ಮೃತದೇಹವನ್ನು ರೋಹ್ಟಕ್‌ನ ಪಿಜಿಐಎಂಎಸ್‌ಗೆ ಸಾಗಿಸಲಾಗಿದೆ.
ಶೀಲು ಸಾಧನೆ ಇದು
ಶೀಲು ಆರಂಭದಲ್ಲಿ ಜೂಡೋ ಮತ್ತು ಕುಸ್ತಿಯಲ್ಲಿ ತರಬೇತಿ ಪಡೆದು, ನಂತರ ಆರು ವರ್ಷ ವಯಸ್ಸಿನಲ್ಲೇ ಕಬಡ್ಡಿಗೆ ಕಾಲಿಟ್ಟರು. ಪಂಜಾಬ್‌ನಲ್ಲಿ 'ಹರಿಯಾಣ ಆಲಾ ಚೀತಾ' ಎಂದೇ ಕರೆಯಲ್ಪಡುವ ಶೀಲು, 'ಕ್ಯಾಚರ್' ಆಗಿ ದೇಶ ಹಾಗೂ ವಿದೇಶಗಳಲ್ಲಿಯೂ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಪಂಜಾಬ್ ಹಾಡು ಪೋಸ್ಟ್
ಮುಸ್ಕಾನ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ಹಿಂದಿನ ದಿನ ಪಂಜಾಮ್ನ ಹಾಡೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ರೀಲ್ ಮಾಡಿ ಅಪ್ಲೋಡ್ ಮಾಡಿದ್ದರು. ಸಂತೋಷವಾಗಿರುವ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಹಿನ್ನೆಲೆ ಶೀಲು ಬಲ್ಹಾರ ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಸರ್ಕಾರಿ ಶಿಕ್ಷಕಿ ಆತ್ಮಹತ್ಯೆ
ಡೆಹ್ರಾಡೂನ್‌ನಲ್ಲಿ ಸರ್ಕಾರಿ ಶಿಕ್ಷಕಿಯೊಬ್ಬರು , ತಮ್ಮ ಪತಿ ಹಾಗೂ ಅತ್ತೆ-ಮಾವರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
25 ವರ್ಷದ ಸೃಷ್ಟಿ ಕಾಂಧಾರಿ ಕಳೆದ ವರ್ಷ ನವೆಂಬರ್‌ನಲ್ಲಿ ಸರ್ಕಾರಿ ಉದ್ಯೋಗಿಯಾಗಿರುವ ಸೌರಭ್ ರಾತುರಿ ಅವರನ್ನು ವಿವಾಹವಾದರು. ಅವರು ಡೆಹ್ರಾಡೂನ್ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ದೋಯಿವಾಲಾದಲ್ಲಿ ವಾಸ ಮಾಡುತ್ತಿದ್ದರು.
ಸೃಷ್ಟಿ ಕಾಂಧಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಮ್ಮ ನಾನಿನ್ನು ಬದುಕಿರಲಾರೆ. ಗೆ ವರದಕ್ಷಿಣೆಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಲಾಗುತ್ತಿದೆ. ಆರು ತಿಂಗಳಿಂದ ಸಹಿಸಿಕೊಂಡಿದ್ದ ಇನ್ನು ನನ್ನಿಂದ ಸಾಧ್ಯವಾಗೋಲ್ಲ. ದುರಾದೃಷ್ಟವಂತೆ ಎಂದು ನಿಂದಿಸುತ್ತಾರೆ. ಅವರ ಮನಸ್ಥಿತಿ ಎಂದಿಗೂ ಬದಲಾಗದು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಳ್ಳುವ ಮುನ್ನ ವಿಡಿಯೋ ಮಾಡಿ ತಾವು ಅನುಭವಿಸಿದ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ, (ಏಜೆನ್ಸೀಸ್).