Gujarati Student Killed Canada 
ದೇಶ

ಕೆನಡಾದಲ್ಲಿ ಗುಜರಾತ್​ ಮೂಲದ ಕಾನೂನು ವಿದ್ಯಾರ್ಥಿನಿ ಹತ್ಯೆ..Gujarati Student Killed Canada

ನಯಾಗರ: ಕೆನಡಾದ ನಯಾಗರ ಪ್ರದೇಶದಲ್ಲಿ ಗುಜರಾತ್​ ಮೂಲದ 22 ವರ್ಷದ ಯುವತಿಯೊಬ್ಬರು ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೇ.15ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗುಜರಾತ್​ನ ಆನಂದ್​ ಜಿಲ್ಲೆಯ ಬೋರ್ಸಾದ್​ ನಿವಾಸಿಯಾದ  ವಿಧಿ ಕಲ್ಪೇಶ್​ಭಾಯ್​ ಮೇಘಾನಿ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳಿಂದ ಕೆನಾಡದಲ್ಲಿ ವಾಸಿಸುತ್ತಿದ್ದ ವಿಧಿ, ಪಾರ್ಟ್​ ಟೈಂ ಜಾಬ್​ ಮಾಡುತ್ತ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು ಎನ್ನಲಾಗಿದೆ. 

ಕಾನೂನು ವಿದ್ಯಾರ್ಥಿನಿ ಹತ್ಯೆ

ವಿಧಿ ಮೇಲೇ ಹಾಡಹಗಲಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ರಕ್ತದ ಮಡುವಲ್ಲಿ ಬಿದ್ದಿದ್ದ ಆಕೆಯನ್ನು  ಸ್ಥಳೀಯ ನಿವಾಸಿಗಳು ಸೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಕೆ ಅಲ್ಲಿಗೆ ತಲುಪುವ ವೇಳೆಗೆ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.  

ಘಟನೆ ದಿನ ನಡೆದಿದ್ದೇನು?

 ಪೊಲೀಸರ ಪ್ರಕಾರ, ವಿಧಿ ಲಾ ಅಭ್ಯಾಸ ಮಾಡುತ್ತಿದ್ದಳು. ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ಪಾರ್ಟ್​ ಟೈಂ ಕೆಲಸ ಮಾಡಿ ತನ್ನನ್ನು ತಾನು ಪಾಲನೆ ಮಾಡುಕೊಳ್ಳುತ್ತಿದ್ದಳು. ಕೆನಾಡದ ಪೌರತ್ವ ಪಡೆಯಲು ಕಳೆದ ಕೆಲವು ವಾದಿಂದ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದ್ದಳು. ಈ ನಡುವೆ ಮೇ.15ರಂದಯ ಆಕೆಯ ನಿವಾಸದಿಂದ ಕೊಂಚ ದೂರ ಹೊರಬರುತ್ತಲೇ ಆಕೆಯ ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. 
ದರೋಡೆಗೆ ಯತ್ನಿಸುತ್ತಿದ್ದ ವೇಳೆ ದಾಳಿಕೋರನು ಆಕೆಯನ್ನು ಗುರಿಯಾಗಿಸಿಕೊಂಡು ಕೊಲೆ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ವಿಧಿ ಮೃತಪಟ್ಟ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಕೊಲೆ ಮಾಡಿದ ಶಂಕಿತನನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ

ಮಗಳ ಸಾವಿನ ವಿಚಾರವೇ ತಿಳಿಯದ ಪೋಷಕರು

ಮೇ.15ರಂದು ವಿಧಿ ನಿಧನರಾಗಿದ್ದಾರೆ. ಅದಾದ ನಂತರವೂ ಯಾವುದೇ ಮಾಹಿತಿ ಪೋಷಕರಿಗೆ ಸಿಕ್ಕಿರಲಿಲ್ಲ. ಹೀಗಾಗಿ ರಾಯಬಾರಿ ಕಚೇರಿಗಳಿಗೆ ಈ ಬಗ್ಗೆ ಮಾಹಿತಿ ಕೊಟ್ಟ ನಂತರ ಆಕೆಯ ಸಾವಿನ ಬಗ್ಗೆ  ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿರುವ ವಿಧಿ ಅವರ ಕುಟುಂಬಸ್ಥರಿಗೆ ತಿಳಿದು ಬಂದಿದೆ, (ಏಜೆನ್ಸೀಸ್).